Singapore: ಸಿಂಗಾಪುರಕ್ಕೆ ಭೇಟಿ ನೀಡಿದ ಜಪಾನಿನ ಪ್ರವಾಸಿಗರೊಬ್ಬರು ತಾವು ತಿಂದ ಒಂದು ಏಡಿ ಖಾದ್ಯಕ್ಕಾಗಿ 938 ಸಿಂಗಾಪುರ್ (Singapore) ಡಾಲರ್ (ಅಂದಾಜು ರೂ 57 ಸಾವಿರ) ತೆತ್ತ ಘಟನೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ರೆಸ್ಟೋರೆಂಟ್ ನೀಡಿದ ಬಿಲ್ ನೋಡಿ ಆಘಾತಕ್ಕೊಳಗಾದೆ ಎಂದು ಬರೆದಿದ್ದಾರೆ.
ತನ್ನ ಆಘಾತ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದ ಜುಂಕೋ ಶಿನ್ಬಾ ಎಂಬ ಪ್ರವಾಸಿ, ಆರ್ಡರ್ ಮಾಡುವ ಮೊದಲು ಏಡಿ ಖಾದ್ಯದ ದುಬಾರಿ ವೆಚ್ಚದ ಬಗ್ಗೆ ಸಮರ್ಪಕ ಮಾಹಿತಿ ನಮಗೆ ಕೊಟ್ಟಿಲ್ಲ ಎಂದು ಹೇಳಿಕೊಂಡಿದ್ದಾರೆ. ಅನಿರೀಕ್ಷಿತ ಖರ್ಚಿನಿಂದ ವಂಚನೆಗೆ ಒಳಗಾದ ಆಕೆ ಈ ವಿಷಯದ ಬಗ್ಗೆ ಪೊಲೀಸ್ ದೂರು ನೀಡಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.
ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಜುಂಕೊ ಶಿಬಾ ಸಿಂಗಾಪುರದ ಸೀಫುಡ್ ಪ್ಯಾರಡೈಸ್‌ಗೆ ತನ್ನ ಕೆಲವು ಮಂದಿಯೊಂದಿಗೆ ಭೇಟಿ ನೀಡಿದ್ದರು. ಅಲ್ಲಿನ ವೈಟರ್ ನೀಡಿದ ಸಲಹೆಯಂತೆ ಆಕೆ ಉಪಾಹಾರ ಗೃಹದ ಮೈನ್ ಸಿಗ್ನೇಚರ್ ಡಿಶ್ ಆದ ಅಲಾಸ್ಕನ್ ಡಿಶ್ ನ್ನು(ಚಿಲ್ಲಿ ಕ್ರ್ಯಾಬ್) ಆರ್ಡರ್ ಮಾಡಿದ್ದಾರೆ.
ಅದರ ನಂತರ ಅದರ ಬಿಲ್ ನೋಡಿ ದಿಗ್ಭ್ರಾಂತರಾದ ಅವರು ಪೊಲೀಸರನ್ನು ರೆಸ್ಟೋರೆಂಟ್‌ಗೆ ಕರೆಸಿದ್ದಾರೆ. ವಿಚಾರಣೆ ನಡೆಸಿದಾಗ ಜಪಾನ್ ದೇಶದಿಂದ ಸಿಂಗಾಪುರಕ್ಕೆ ಪ್ರವಾಸಕ್ಕೋಸ್ಕರ ನಾವು ಬಂದಿದ್ದು, ಇಲ್ಲಿ ಚಿಲ್ಲಿ ಕ್ರ್ಯಾಬ್ ವಿಶೇಷವಾದ ಖಾದ್ಯ ಎಂದು ಹೇಳಿದ್ದರು, ಇಲ್ಲಿನ ಸಿಬ್ಬಂದಿಯಲ್ಲಿ ಕೇಳಿದಾಗ ಅದರ ಬೆಲೆ ಕೇವಲ ಇಪ್ಪತ್ತು ಡಾಲರ್ ಎಂದು ಹೇಳಿದ್ದು, ಅದರಲ್ಲಿ ಪ್ರತಿ ನೂರು ಗ್ರಾಂ ತೂಕಕ್ಕೆ ಈ ಬೆಲೆಗಳನ್ನು ನಿಗದಿಪಡಿಸಿರುವ ಕುರಿತು ಹೇಳಿಲ್ಲ ಎಂದು ಶಿನ್ಬಾ ಹೇಳಿದ್ದಾರೆ.
ಒಟ್ಟು ನಾಲ್ಕು ಜನ ಸ್ನೇಹಿತರು ಈ ಪದಾರ್ಥವನ್ನು ತಿಂದಿದ್ದು, ಒಟ್ಟು ಬೆಲೆ 680 ಡಾಲರ್ ಎಂದು ಕೊಟ್ಟಿದ್ದಾರೆ. ಇದರಿಂದ ನಾವು ಕಂಗಾಲಾಗಿ ಹೋಟೆಲ್ ಸಿಬ್ಬಂದಿಯಲ್ಲಿ ಬಿಲ್ ಬಗ್ಗೆ ಕೇಳಿದಾಗ, ಮೊತ್ತ ಸರಿಯಾಗಿದೆ ಎಂದಿದ್ದಾರೆ. ಇಷ್ಟು ಪ್ರಮಾಣದ ಖಾದ್ಯಕ್ಕೆ ಇಷ್ಟು ಹಣವೇ ಎಂದು ಕೇಳಿದರೆ, ಇದು ಮೊದಲೇ ಗೊತ್ತಿದ್ದರೆ ನಾವು ಖರೀದಿ ಮಾಡುತ್ತಿರಲಿಲ್ಲ, ಹೋಟೆಲ್ ಸಿಬ್ಬಂದಿ ನಮಗೆ ಸರಿಯಾದ ಮಾಹಿತಿ ನೀಡದೇ ಮೋಸ ಮಾಡಿದ್ದಾರೆ ಎಂದು ಮಹಿಳೆ ಪೊಲೀಸರಲ್ಲಿ ಹೇಳಿದ್ದಾರೆ.
ಕೊನೆಗೆ ಪೊಲೀಸರು ಹೋಟೆಲ್ ಸಿಬ್ಬಂದಿಯವರಲ್ಲಿ ಮಾತನಾಡಿ, ಸಹಾನುಭೂತಿಯ ನೆಲೆಯಲ್ಲಿ ಶಿನ್ಬಾ ಅವರಿಗೆ ಬಿಲ್‌ನಲ್ಲಿ $78( 6,479) ರಿಯಾಯಿತಿ ನೀಡಲು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: Chaitra Kundapura: ಸ್ವಾಮೀಜಿ ಬಳಿ ಸಿಕ್ಕ ಹಣಕ್ಕೆ ಬಿಗ್ ಟ್ವಿಸ್ಟ್ – ಚೈತ್ರಾ ಮಾತ್ರವಲ್ಲದೆ ಇದೆಯಾ ಬೇರೆಯದೇ ಲಿಂಕ್ ?
