Home » Udupi: ಸಿರಿಮನೆ ಫಾಲ್ಸ್ ಗೆ ಬಂದಿದ್ದ ಉಡುಪಿಯ ಭಿನ್ನ ಕೋಮಿನ ಜೋಡಿ!! ನೈತಿಕ ಪೊಲೀಸ್ ಗಿರಿ ಆರೋಪ – ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣು

Udupi: ಸಿರಿಮನೆ ಫಾಲ್ಸ್ ಗೆ ಬಂದಿದ್ದ ಉಡುಪಿಯ ಭಿನ್ನ ಕೋಮಿನ ಜೋಡಿ!! ನೈತಿಕ ಪೊಲೀಸ್ ಗಿರಿ ಆರೋಪ – ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣು

0 comments
Udupi

Udupi: ಶೃಂಗೇರಿ ಸಮೀಪದ ಸಿರಿಮನೆ ಫಾಲ್ಸ್ ಗೆ ಬಂದಿದ್ದ ಉಡುಪಿ( Udupi) ಮೂಲದ ಭಿನ್ನಕೋಮಿನ ಜೋಡಿಯೊಂದು ಹಿಂದೂ ಯುವಕರ ಕೈಗೆ ಸಿಕ್ಕಿಹಾಕಿಕೊಂಡ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುವ ಮೂಲಕ ವೈರಲ್ ಆಗಿದ್ದು, ಜೋಡಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿ ಮೂಲದ ಮುಸ್ಲಿಂ ಯುವಕ ಹಾಗೂ ಉಡುಪಿ ಜಿಲ್ಲೆಯ ಹಿಂದೂ ಯುವತಿಯೋರ್ವಳು ಬೈಕಿನಲ್ಲಿ ಸುತ್ತಾಟಕ್ಕೆ ಹೊರಟಿದ್ದು, ಶೃಂಗೇರಿ ಸಮೀಪದ ಪ್ರವಾಸಿ ತಾಣ ಸಿರಿಮನೆ ಫಾಲ್ಸ್ ವೀಕ್ಷಣೆಗೆ ತೆರಳಿದ್ದ ವೇಳೆ ಕೆಲ ಹಿಂದೂ ಯುವಕರು ತಡೆದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಜಲಪಾತ ವೀಕ್ಷಣೆಗೆ ಬಂದಿದ್ದ ಜೋಡಿ ಭಿನ್ನ ಕೋಮಿಗೆ ಸೇರಿದವರು ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರಿಗೆ ವಿಷಯ ತಿಳಿಸಲಾಗಿದ್ದು, ಸದ್ಯ ಜೋಡಿಯನ್ನು ಪೊಲೀಸರು ಠಾಣೆಯಲ್ಲಿ ವಿಚಾರಿಸಿ ಹೆತ್ತವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಲವ್ ಜಿಹಾದ್ ವಿರುದ್ಧ ಈಗಾಗಲೇ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಭಿನ್ನಕೋಮಿನ ಜೋಡಿಯ ಸುತ್ತಾಟಕ್ಕೆ ಕಡಿವಾಣ ಬಿದ್ದಿಲ್ಲ ಎನ್ನುವುದು ಪ್ರಜ್ಞಾವಂತ ನಾಗರಿಕರ ಮಾತಾಗಿದ್ದು,ಜೋಡಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಯುವತಿಯ ಮಾನಹಾನಿಗೆ ಯತ್ನಿಸಿದ ಆರೋಪದಲ್ಲಿ ಕೆಲ ವ್ಯಕ್ತಿಗಳ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: Chaitra kundapura case: ಬಿಜೆಪಿ ಟಿಕೆಟ್ ಡೀಲ್ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಸಿಸಿಬಿ ಎದುರು ಎಲ್ಲಾ ಸತ್ಯ ಕಕ್ಕಿಬಿಟ್ಟ ಚೈತ್ರಾ – ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಹಾಲಶ್ರೀ !!

You may also like

Leave a Comment