Baba Vanga Prediction: ಬಲ್ಗೇರಿಯಾದ ದಿವಂಗತ ಪ್ರವಾದಿ, ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿರುವ ಬಾಬಾ ವೆಂಗಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರು ಈ ಬಾರಿ ಮುಂದಿನ ವರ್ಷ ಏನಾಗುತ್ತದೆ ಎಂಬುವುದರ ಕುರಿತು ಭಯಾನಕ ಭವಿಷ್ಯ(Baba Vanga Prediction) ನುಡಿದಿದ್ದಾರೆ.
2024ರಲ್ಲಿ ಚೀನಾ ವಿಶ್ವದಲ್ಲೇ ಸೂಪರ್ ಪವರ್ ಆಗಲಿದೆ. ಇಡೀ ಜಗತ್ತಿಗೆ ಚೀನಾ ತನ್ನ ಸೂಪರ್ ಶಕ್ತಿಯನ್ನು ತೋರಿಸಲಿದೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ, ಭೂಕಂಪ ಭೂಮಿಯ ಸ್ಥಿತಿಯನ್ನು ಮತ್ತಷ್ಟು ಹದಗೆಡುತ್ತದೆ ಎಂದು ಹೇಳಿದ್ದಾರೆ. ಹಿಮನದಿಗಳು 2024 ರಲ್ಲಿ ಕರಗಲು ಪ್ರಾರಂಭವಾಗುತ್ತದೆ, ಕರಾವಳಿ ನಗರಗಳು ನೀರಿನಲ್ಲಿ ಮುಳುಗಬಹುದು ಎಂದು ಭಯಾನಕ ಭವಿಷ್ಯ ನುಡಿದಿದ್ದಾರೆ.
ಭೂಮಿಯ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ತಾಪಮಾನ ಬದಲಾವಣೆ ಆಗುತ್ತದೆ. ತಂಪಾದ ಸ್ಥಳಗಳು ಬಿಸಿಯಾಗುತ್ತದೆ ಹಾಗೆನೇ ಬಿಸಿಯಾದ ಸ್ಥಳಗಳು ತಂಪಾಗುತ್ತದೆ ಎಂದು ಹೇಳಿದ್ದಾರೆ.
ಯೂರೋಪ್‌ನಲ್ಲಿ ಕ್ಯಾಲಿಫೇಟ್ ಆಡಳಿತ ಬರುತ್ತದೆ. ವಿಶ್ವದಾದ್ಯಂತ ಅಪರಾಧ ಹೆಚ್ಚಾಗುತ್ತದೆ. ಮುಂಬರುವ ವರ್ಷಗಳಲ್ಲಿ ಶುಕ್ರ, ಮತ್ತು ಬುಧ ಗ್ರಹಗಳನ್ನು ಮಾನವ ತಲುಪುತ್ತಾನೆ ಎಂಬ ಮಾತನ್ನು ಹೇಳಿದ್ದಾರೆ.
ಬಾಬಾ ವಂಗಾ ನುಡಿದ ಭವಿಷ್ಯವಾಣಿ ನಿಜವಾಗಿದ್ದು, ಅದರಲ್ಲಿ ಸೌರ ಚಂಡಮಾರುತದ ಬಗ್ಗೆ ವಂಗಾ ಬಾಬಾ ಭವಿಷ್ಯವಾಣಿ ನಿಜವಾಗಿದೆ. ಭೂಮಿಗಿಂತ 20 ಪಟ್ಟು ದೊಡ್ಡದಾದ ರಂಧ್ರವನ್ನು ವಿಜ್ಞಾನಿಗಳು ಸೂರ್ಯನಲ್ಲಿ ಕಂಡು ಹಿಡಿಯಲಿದ್ದಾರೆ ಎಂದು ಹೇಳಿದ್ದರು.
