CM Siddaramaiah On PM Modi: ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ದ ಮಹಿಳಾ ಮೀಸಲಾತಿ’ ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯನವರು( CM Siddaramaiah) ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ.
‘ಮಹಿಳೆಯರಿಗೆ ಮೀಸಲಾತಿ ನೀಡಲು ದೇವರೇ ನನ್ನನ್ನು ಕಳುಹಿಸಿದ್ದಾನೆ ಎಂದು ಹೇಳಿಕೊಂಡ ದೇವಮಾನವ, ಮಸೂದೆಯಲ್ಲಿ ಮಾತ್ರ ಹಲವು ಷರತ್ತುಗಳನ್ನು ಹಾಕಿ ಮಹಿಳೆಯರಿಗೆ ದೊಡ್ಡ ಟೋಪಿ ಹಾಕಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿಯವರನ್ನು ಲೇವಡಿ ಮಾಡಿದ್ದಾರೆ.
ಮಹಿಳಾ ಮೀಸಲಾತಿಗೆ 15 ವರ್ಷಗಳ ಕಾಲಮಿತಿ ನಿಗದಿ ಮಾಡಿರುವುದು ಯಾಕೆ? ಮಸೂದೆ ಅಂಗೀಕಾರವಾದ ಬಳಿಕ ಜಾರಿಯಾಗಬೇಕು. ಆದರೆ, ಕ್ಷೇತ್ರ ಪುನರ್‌ವಿಂಗಡಣೆಯಾದ ನಂತರ ಜನಗಣತಿ ನಡೆದ ಮೇಲೆ, ಕೇಂದ್ರ ಸರ್ಕಾರ ಸೂಚಿಸಿದ ದಿನಾಂಕದ ಜಾರಿಯಾಗಬೇಕು ಎಂದು ಕೊಕ್ಕೆಗಳನ್ನು ಇಟ್ಟಿರುವುದು ಯಾಕೆ? ಇದು ಜಾರಿಯಾಗುವ ಹೊತ್ತಿಗೆ 15 ವರ್ಷ ಮುಗಿದಿರುತ್ತದೆ ಎಂದು ಹೇಳಿಕೊಂಡಿದ್ದಾರೆ.
ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂಬ ಪ್ರಾಮಾಣಿಕ ಪ್ರಯತ್ನ ಬಿಜೆಪಿಯಲ್ಲಿ ಕಾಣಿಸುತ್ತಿಲ್ಲ. ವೋಟು ಪಡೆಯುವ ನಿಟ್ಟಿನಲ್ಲಿ ತರಾತುರಿಯಲ್ಲಿ ಮಸೂದೆ ಮಂಡನೆ ಮಾಡಿದ್ದು, ಮಸೂದೆಗೆ ರಾಷ್ಟ್ರಪತಿಯವರ ಅಂಕಿತ ಬಿದ್ದರೂ ಜಾರಿಯಾಗದಂತೆ ಷರತ್ತುಗಳಿವೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಒಂದು ವೇಳೆ, ‘ಮಹಿಳಾ ಮೀಸಲಾತಿ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದ್ದಿದ್ದರೆ ಈಗಾಗಲೇ ಯೋಜನೆ ಜಾರಿಗೆ ತರುತ್ತಿದೆ. ಇವತ್ತಿಗೂ ಮಹಿಳೆಯರಿಗೆ ಟಿಕೆಟ್ ಹಂಚುವ ವಿಚಾರದಲ್ಲಿ ನನಗೆ ಟಿಕೆಟ್ ನೀಡುವ ಮನಸ್ಸಿದ್ದರೂ ಕೂಡ ನೀಡಲಾಗುತ್ತಿಲ್ಲ. ಕ್ಷೇತ್ರಗಳಿಂದ ತರಿಸುವ ವರದಿಗಳು ಮಹಿಳಾ ಆಕಾಂಕ್ಷಿ ಪರವಿರುವುದಿಲ್ಲ. ಹೀಗಾಗಿ, ಮಹಿಳಾ ಮೀಸಲಾತಿ ಜಾರಿಯಾದರೆ ಪ್ರಾತಿನಿಧ್ಯ ನೀಡಲೇಬೇಕಾಗುತ್ತದೆ’ ಎಂದು ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.
