Home » Mangalore Accident News: ದೊಡ್ಡಮ್ಮನ ಆರೋಗ್ಯ ವಿಚಾರಿಸಿ ವಾಪಾಸಗುತ್ತಿದ್ದ ಮಹಿಳೆ ರಸ್ತೆ ಅಪಘಾತಕ್ಕೆ ಬಲಿ!

Mangalore Accident News: ದೊಡ್ಡಮ್ಮನ ಆರೋಗ್ಯ ವಿಚಾರಿಸಿ ವಾಪಾಸಗುತ್ತಿದ್ದ ಮಹಿಳೆ ರಸ್ತೆ ಅಪಘಾತಕ್ಕೆ ಬಲಿ!

0 comments

ಉಳ್ಳಾಲ: ರಾ.ಹೆ. ಕಲ್ಲಾಪು ನಾಗನಕಟ್ಟೆಯ ಬಳಿ ನಿನ್ನೆ ರಾತ್ರಿ ಸ್ಕೂಟರ್‌ನಿಂದ ರಸ್ತೆಗೆಸೆಯಲ್ಪಟ್ಟ ಸಹ ಸವಾರೆ ಮಹಿಳೆಯೊಬ್ಬರು ಗಂಭೀರ ಗಾಯದಿಂದ ಮೃತರಾಗಿರುವ ಘಟನೆಯೊಂದು ನಡೆದಿದೆ.

ಸುಮ ನಾರಾಯಣ ಗಟ್ಟಿ (51) ಕಾಸರಗೋಡು ಜಿಲ್ಲೆಯ ಮಧೂರು, ಉಳಿಯ ನಿವಾಸಿಯಾದ ಇವರು ನಿನ್ನೆ ಮಧ್ಯಾಹ್ನ ಸೋಮೇಶ್ವರ ಗ್ರಾಮದ ಪಿಲಾರು ಎಂಬಲ್ಲಿನ ಕುಟುಂಬದ ವಾರ್ಷಿಕ ಪೂಜಾ ಕೆಲಸದಲ್ಲಿ ತೊಡಗಿದ್ದು, ಸಾಯಂಕಾಲ ತಮ್ಮನ ಜೊತೆ ಸ್ಕೂಟರಿನಲ್ಲಿ ಜಪ್ಪಿನ ಮೊಗರುವಿಗೆ ತೆರಳಿತ್ತಿದ್ದಾಗ, ಅಸೌಖ್ಯದಿಂದ ಇರುವ ದೊಡ್ಡಮ್ಮನ ಆರೋಗ್ಯ ವಿಚಾರಿಸಿ ಬರುತ್ತಿದ್ದಾಗ, ಈ ಘಟನೆ ನಡೆದಿದೆ.

ಮೃತ ಮಹಿಳೆಯ ಸೀರೆಯ ಸೆರಗು ಸ್ಕೂಟರಿನ ಚಕ್ರಕ್ಕೆ ಸಿಲುಕಿ ರಸ್ತೆಗೆಸೆಯಲ್ಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

 

 

 

 

You may also like

Leave a Comment