Manglore Cyber Crime: ಮಂಗಳೂರಿನಲ್ಲಿ( Mangalore)ಜಾಗ, ಫ್ಲ್ಯಾಟ್ ನೋಂದಣಿಗಾಗಿ ಮಂಗಳೂರು ಮಿನಿ ವಿಧಾನಸೌಧದ ಉಪ ನೋಂದಣಿ ಕಚೇರಿಗೆ ಹೋಗಿ ಬಯೋಮೆಟ್ರಿಕ್ (Biometric)ನೀಡಿದ 100 ಕ್ಕೂ ಅಧಿಕ ಮಂದಿಯ ಬ್ಯಾಂಕ್ ಖಾತೆಗೆ ಸೈಬರ್ ವಂಚಕರುಲಕ್ಷಾಂತರ ರೂ. ಕನ್ನ ಹಾಕಿರುವ(Manglore Cyber Crime) ಘಟನೆ ನಡೆದಿದೆ.
ಉಪ ನೋಂದಣಿ ಕಚೇರಿಯಲ್ಲಿ ನೀಡಿದ ಬಯೋಮೆಟ್ರಿಕ್ ದುರ್ಬಳಕೆ ಮಾಡಿಕೊಂಡು ಉದ್ಯಮಿಗಳು, ನಾಗರಿಕರ ಖಾತೆಯಿಂದ ಹಣ ಡ್ರಾ ಮಾಡಿ ವಂಚನೆಗೊಳಗಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚಿಗೆ ಮಂಗಳೂರಿನಲ್ಲಿ ನೂರಾರು ಮಂದಿ ಜಾಗ ಮಾರಾಟ ಮತ್ತು ಖರೀದಿ ಮಾಡಿದ್ದು, ಇವರು ಬಯೋಮೆಟ್ರಿಕ್ ನೀಡಿದ 24 ಗಂಟೆಯೊಳಗೆ ಅವರ ಖಾತೆಯಿಂದ 10 ಸಾವಿರ ರೂ. ಡ್ರಾ ಆಗಿರುವ ಘಟನೆ ವರದಿಯಾಗಿದೆ. ಕಳ್ಳರು ತಮ್ಮ ಬತ್ತಳಿಕೆಯಿಂದ ಹೊಸ ಹೊಸ ತಂತ್ರಗಳನ್ನು ಅಳವಡಿಸುವುದು ಮಾಮೂಲಿ. ಇದೀಗ, ಸೈಬರ್ ವಂಚಕರು ವಂಚನೆ ಮಾಡಲು ಹೊಸ ತಂತ್ರಗಾರಿಕೆ ಟ್ರೈ ಮಾಡುತ್ತಿದ್ದಾರೆ. ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಮಾಡುವ ರಿಸ್ಕ್ ತೆಗೆದುಕೊಳ್ಳದೆ ನೇರವಾಗಿ ಮೈಕ್ರೋ ಕ್ಯಾಶ್ ಮೂಲಕ ಹಣ ಲೂಟಿ ಮಾಡುತ್ತಿದ್ದಾರೆ.
ಮಂಗಳೂರು ನಗರ ನೋಂದಣಿ ಕಚೇರಿಯಲ್ಲಿ ವಂಚನೆಗೊಳಗಾದ ದಂಪತಿ ಸೈಬರ್ ಠಾಣೆಗೆ ದೂರು ಕೊಡಲು ಹೋಗಿದ್ದರು ಕೂಡ, ಸೈಬರ್ ಠಾಣಾ ಪೊಲೀಸರು ಕೇಸು ದಾಖಲಿಸದೆ ಕಂಕನಾಡಿ ನಗರ ಪೊಲೀಸ್ ಠಾಣೆಗೆ ತೆರಳುವಂತೆ ಸೂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ರೀತಿಯ ಸೈಬರ್ ಕ್ರೈಮ್ ಪ್ರಕರಣಗಳು ಸೈಬರ್ ಠಾಣೆಯಲ್ಲಿ ದೂರು ದಾಖಲಾಗಬೇಕಿದ್ದರೂ ಕೂಡ , ಪೊಲೀಸರು ದೂರು ದಾಖಲಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು, ಇದರಿಂದ ಉದ್ಯಮಿಗಳು, ನಾಗರಿಕರು ಪರಿತಪಿಸುವಂತಾಗಿದೆ.
ಮತ್ತೊಂದು ಆತಂಕಕಾರಿ ವಿಚಾರ ಹೊರಬಿದ್ದಿದ್ದು, ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಲು ಒಟಿಪಿ, ಸಿವಿವಿ, ಬ್ಯಾಂಕ್ ವಿವರ ಯಾವುದು ಕೂಡ ಬೇಕಾಗುವುದಿಲ್ಲ. ಕೇವಲ ಖಾತೆದಾರರ ಆಧಾರ್ ಬಯೋಮೆಟ್ರಿಕ್ ಬಳಕೆ ಮಾಡಿಕೊಂಡು ವಂಚಕರು ಬ್ಯಾಂಕ್ ಖಾತೆಯಿಂದ ಮೈಕ್ರೋ ಎಟಿಎಂ ಮೂಲಕ ಹಣ ಡ್ರಾ ಮಾಡಿಕೊಂಡು ವಂಚನೆ ಮಾಡುತ್ತಿದ್ದಾರೆ. ನೋಂದಣಿ ಕಚೇರಿಗೆ ಒಂದು ಬಾರಿ ಬಯೋಮೆಟ್ರಿಕ್ ನೀಡಿದರೆ ಅದನ್ನೇ ಸೈಬರ್ ವಂಚಕರು ಮೈಕ್ರೋ ಎಟಿಎಂ ಮಾಲೀಕರಿಗೆ ನೀಡಿ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. ಆನಂತರ, ಮೈಕ್ರೋ ಎಟಿಎಂ ಮಾಲೀಕನಿಂದ ಸೈಬರ್ ವಂಚಕರು ಕ್ಯಾಶ್ ಮೂಲಕ ಹಣ ಪಡೆಯುವ ಹಗರಣಗಳು ನಡೆಯುತ್ತಿವೆ. ಇದೀಗ, ಸೆ. 16 ರಂದು ಸೈಬರ್ ವಂಚನಾ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸೆನ್ ಠಾಣಾ ಪೊಲೀಸರು ರಿಜಿಸ್ಪ್ರೇಶನ್ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Actor Darshan:ಕಾವೇರಿ ಹೋರಾಟದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್ – ನಟನ ವಿರುದ್ಧ ತಿರುಗಿಬಿದ್ದ ರೈತರು
