Uttar Pradesh: ಉತ್ತರಪ್ರದೇಶದ(Uttar Pradesh) ಶಾಮ್ಲಿ ಜಿಲ್ಲೆಯ ಖಾಸಗಿ ಕ್ಲಿನಿಕ್‌ವೊಂದರ ಖಾಸಗಿ ಚಿಕಿತ್ಸಾಲಯದಲ್ಲಿ ಎರಡು ನವಜಾತ ಶಿಶುಗಳು ರಾತ್ರಿಯಿಡೀ ಎಸಿ ಆನ್ ಇಟ್ಟಿದ್ದರಿಂದ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ತುಂಬಾ ತಂಪಾಗಿರುವ ಕೋಣೆಯಲ್ಲಿ ಇರಿಸಿದ್ದರಿಂದ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ವೈದ್ಯರನ್ನು ಬಂಧಿಸಲಾಗಿದೆ.
ವರದಿಯ ಪ್ರಕಾರ, ಕೈರಾನಾದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಶುಗಳು ಜನಿಸಿದ್ದು, ನಂತರ ಅದೇ ದಿನ ಖಾಸಗಿ ಕ್ಲಿನಿಕ್‌ಗೆ ಸ್ಥಳಾಂತರಗೊಳಿಸಲಾಗಿದೆ. ಚಿಕಿತ್ಸೆಗೆಂದು ಫೋಟೋಥೆರಪಿ ಘಟಕದಲ್ಲಿ ಇಡಲಾಗಿತ್ತು. ರಾತ್ರಿ ವೈದ್ಯರೋರರವರು ಮಲಗಲು ಹವಾನಿಯಂತ್ರಣಗಳನ್ನು ಆನ್ ಮಾಡಿದ್ದು, ಮರುದಿನ ಬೆಳಿಗ್ಗೆ ಅವರ ಕುಟುಂಬದವರು ಮಗುವನ್ನು ನೋಡಲು ಹೋದಾಗ, ಇಬ್ಬರೂ ಮಕ್ಕಳು ಘಟಕದಲ್ಲಿ ಶವವಾಗಿ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮಂಗಳೂರು: ಬಾಲ್ಯ ವಿವಾಹಕ್ಕೆ ಸಿದ್ದತೆ : ಮೆಹಂದಿ ನಡೆಯುತ್ತಿದ್ದ ಮನೆಗೆ ಅಧಿಕಾರಿಗಳ ಭೇಟಿ -ಬಾಲ್ಯ ವಿವಾಹಕ್ಕೆ ತಡೆ
