Snake Catcher : ಜೀವನದಲ್ಲಿ ಪ್ರತಿಯೊಬ್ಬರಿಗೂ ಯಾವುದಾದರೂ ಒಂದು ರೀತಿಯ ಭಯ ಇರುವುದು ಸಹಜ. ಕೆಲವರಿಗೆ ರಾತ್ರಿ ಎಂದರೆ ಭಯ, ಮತ್ತೆ ಕೆಲವರಿಗೆ ಕತ್ತಲು, ಹಾವು, ಜಿರಳೆ ಎಂದರೆ ಸಾಕು ಭಯದಲ್ಲಿ ಕಿರುಚಾಡುವುದನ್ನು ನೋಡಿರಬಹುದು. ಆದ್ರೆ, ಇಲ್ಲೊಬ್ಬಳು ದೈತ್ಯ ಹಾವನ್ನು ಬರೀ ಗೈಯಲ್ಲಿ ಹಿಡಿದ (Snake Catcher) ವೀಡಿಯೋ ವೈರಲ್ ಆಗಿದ್ದು ನೋಡುಗರಿಗೆ ಸಂಚಲನ ಮೂಡಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟೋ ವಿಡಿಯೋಗಳು ದಿನಂಪ್ರತಿ ವೈರಲ್ ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಸದ್ಯ ವೈರಲ್ (Viral News)ಆಗುತ್ತಿರುವ ಸುದ್ದಿಯ ಫೋಟೋ ನೆಟ್ಟಿಗರನ್ನು ಅಚ್ಚರಿ ಮೂಡಿಸಿದೆ. ಮಹಾರಾಷ್ಟ್ರದ ಶ್ವೇತಾ ಸುತಾರ ವನ್ಯಪ್ರಾಣಿಗಳ ರಕ್ಷಕಿ ಎನ್ನಲಾಗಿದೆ. ಅಂಗಡಿಯ ಗೊಡೌನ್ನಲ್ಲಿದ್ದ ದೊಡ್ಡ ಹಾವನ್ನು ಈಕೆ ಬರೀಗೈಯಲ್ಲಿ ಹಿಡಿದಿದ್ದು, ಈ ವಿಡಿಯೋ ನೋಡಿದ ಲಕ್ಷಾಂತರ ಜನರು ಈಕೆಯ ಧೈರ್ಯವನ್ನು ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೇ, ಸಾಹಸ ಮಾಡುವ ಭರದಲ್ಲಿ ಅಪಾಯಕ್ಕೆ ಸಿಲುಕದಿರಿ ಎಂಬ ಹಿತ ವಚನ ನೀಡುವುದನ್ನು ಮರೆತಿಲ್ಲ.
ಹಾವು ಹಿಡಿಯುವ ಕಲೆಯನ್ನು ಕೆಲವರು ಕರಗತ ಮಾಡಿಕೊಂಡಿರುತ್ತಾರೆ. ವನ್ಯಪ್ರಾಣಿಗಳ ರಕ್ಷಕಿಯಾಗಿರುವ ಶ್ವೇತಾ ಸುತಾರ್ ಕೂಡ ಹಾವನ್ನು ಹಿಡಿಯುವುದನ್ನು ಕಲಿತಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಶ್ವೇತಾ ಬರೀಗೈಯಿಂದ ದೊಡ್ಡ ಹಾವನ್ನು (Rat Snake) ರಕ್ಷಿಸಿದ್ದು, ಇದನ್ನು ಸುತ್ತಮುತ್ತಲಿರುವ ಜನರೆಲ್ಲ ಅಚ್ಚರಿಗೊಳಗಾಗಿದ್ದಾರೆ. ಗೊಡೌನ್ನಲ್ಲಿ ಹೊಕ್ಕಿದ್ದ ಈ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿರುವ ಯುವತಿಯ ದೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ವೇತಾ ಸುತಾರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಸೆ. 12ರಂದು ಹಂಚಿಕೊಂಡಿದ್ದು, ಇಲ್ಲಿಯವರೆಗೆ 3 ಮಿಲಿಯನ್ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಈ ವೈರಲ್ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ಸ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Supreme Court:ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿ ಇತಿಹಾಸ ಬರೆದ ‘ಮೂಕ ವಕೀಲೆ’- ಕೋರ್ಟ್ ಒಳಗೆ ನಡೆದದ್ದೇನು ?!
