Cheapest Alcohol: ಮದ್ಯ (Liquor)ಅಂದರೆ ಸಾಕು ಜನರಿಗೆ ಎಲ್ಲಿಲ್ಲದ ವ್ಯಾಮೋಹ. ಮದ್ಯದ ಮಾಯೆ ಎಷ್ಟರಮಟ್ಟಿಗಿದೆ ಎಂದರೆ ಮನೆ ಮಾರಿಯಾದ್ರೂ ಕೊಳ್ಳೋ ಜನರು ನಮ್ಮ ನಡುವೆ ಇದ್ದಾರೆ. ದುಡ್ಡು ಎಷ್ಟೇ ಇರಲಿ, ಸಂಜೆ ಆಗುತ್ತಿದ್ದಂತೆ ಒಂದು ಎರಡು ಮೂರು- ಹೀಗೆ ಭಟ್ಟಿ ಇಳಿಸಿದಂತೆ ಬಾರ್ ಗೆ ದೌಡಾಯಿಸಿ ಫ್ರೆಂಡ್ಸ್ ಜೊತೆಗೆ ತಮ್ಮ ಮನಸೋಯಿಚ್ಛೆ ಹೊಟ್ಟೆಗೆ ಪರಮಾತ್ಮ ಇಳಿದರೆ ಮಾತ್ರ ಮದ್ಯ ಪ್ರಿಯರಿಗೆ ಏನೋ ಒಂದು ಸಮಾಧಾನ. ಇದೊಂದು ರಾಜ್ಯದಲ್ಲಿ ಮದ್ಯ ತುಂಬಾ ಕಡಿಮೆ ಬೆಲೆಗೆ(Cheapest Alcohol) ಸಿಗುತ್ತಂತೆ!! ಹಾಗಿದ್ರೆ, ಎಲ್ಲಿ ಅಂತ ಯೋಚಿಸುತ್ತಿದ್ದೀರಾ?
ರಾಜ್ಯದಿಂದ ರಾಜ್ಯಕ್ಕೆ ಮದ್ಯದ ಬೆಲೆಯಲ್ಲಿ ವ್ಯತ್ಯಾಸ ಇರುವುದು ಸಹಜ. ಕೆಲವೆಡೆ ಕಡಿಮೆಗೆ ಮದ್ಯ ಸಿಕ್ಕರೆ, ಮತ್ತೊಂದೆಡೆ ಮದ್ಯದ ದರ ದುಬಾರಿ ಇರಬಹುದು. ಕರ್ನಾಟಕದಲ್ಲಿ ಮದ್ಯದ ಮೇಲಿನ ತೆರಿಗೆ ದರ ಹೆಚ್ಚಿದ್ದರೆ ಗೋವಾದಲ್ಲಿ(Goa)ತೆರಿಗೆ ದರ ಕಡಿಮೆ ಇರುತ್ತದೆ. ದೇಶದಲ್ಲಿ ಅತಿ ಅಗ್ಗದ ಬೆಲೆಗೆ ಗೋವಾದಲ್ಲಿ ಮದ್ಯ ದೊರೆಯುತ್ತದೆ. ಇಂಟರ್ನ್ಯಾಷನಲ್ ಸ್ಪಿರಿಟ್ಸ್ ಮತ್ತು ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ನಡೆಸಿದ ವಿಶ್ಲೇಷಣೆಯ ಅನುಸಾರ,ಗೋವಾದಲ್ಲಿ ವಿಸ್ಕಿ(Whiskey), ರಮ್, ವೋಡ್ಕಾ ಮತ್ತು ಜಿನ್ ಮದ್ಯದ ಬಾಟಲಿಯ ಬೆಲೆ ಭಾರೀ ಅಗ್ಗದ ಬೆಲೆಗೆ ದೊರೆಯುತ್ತಂತೆ. ಗೋವಾದ ನಂತರ ಅಗ್ಗದಬೆಲೆಗೆ ಮದ್ಯ ದೊರೆಯುವುದೆಲ್ಲಿ ಎಂದು ಗಮನಿಸಿದರೆ, ಪಾಂಡಿಚೇರಿಯಲ್ಲಿ ಅಗ್ಗದ ಬೆಲೆಗೆ ಮದ್ಯ ಮಾರಾಟವಾಗುತ್ತದೆ. ದಮನ್ ಮತ್ತು ದಿಯು, ಪಂಜಾಬ್, ಹರಿಯಾಣ, ದೆಹಲಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಗೋವಾದಲ್ಲಿ ಮದ್ಯದ ಬೆಲೆ ಎಷ್ಟು?
750 ಎಂಎಲ್ ಬಿಯರ್ ಬಾಟಲಿ 500 ರೂಪಾಯಿಗೆ ಮಾರಾಟವಾಗುತ್ತದೆ. ಅದೇ ರೀತಿ, 750 ಮಿಲಿ ವಿಸ್ಕಿ ಬಾಟಲಿ ಬೆಲೆ 1,500 ರೂಪಾಯಿಗೆ ಮಾರಾಟವಾಗುತ್ತದೆ. ಅದೇ 750 ಎಂಎಲ್ ವೈನ್ ಬಾಟಲಿ ಬೆಲೆ 1,000 ರೂಪಾಯಿ. ಆಗಿರುತ್ತದೆ. ಹೀಗಾಗಿಯೇ ಗೋವಾಗೆ ಬರುವ ಮಂದಿ ಹೊಟ್ಟೆ ಬಿರಿಯುವಂತೆ ಕುಡಿದು ತೇಗುತ್ತಾರೆ. ಆಲ್ಕೋಹಾಲ್ ಸೇವನೆ ಮಾಡುವ ಜನರು ತಮ್ಮ ಬ್ಯಾಗ್ ನಲ್ಲಿ ಒಂದಿಷ್ಟು ಬಾಟಲಿ ತುಂಬಿಕೊಂಡು ಹೋಗುವುದುಂಟು. ಆದರೆ, ಹೀಗೆ ಉಂಡು ಹೋದ ಕೊಂಡು ಹೋದ ಅನ್ನುವ ಹಾಗೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಕೆಲವೊಂದು ಕಟ್ಟುನಿಟ್ಟಾದ ನಿಯಮಗಳಿವೆ ಎಂಬುದನ್ನು ಮರೆಯುವಂತಿಲ್ಲ.
ಇದನ್ನು ಓದಿ: D. K. Shivakumar: BJP-JDS ಮೈತ್ರಿಗೆ ಬಿಗ್ ಶಾಕ್ !! ಕಾಂಗ್ರೆಸ್ ಮಾಡ್ತು ಮಾಸ್ಟರ್ ಸ್ಟ್ರೋಕ್
