Home » Text book: ಬಿಜೆಪಿಗೆ ಮತ್ತೊಂದು ಶಾಕ್ ಕೊಟ್ಟ ಕಾಂಗ್ರೆಸ್- ಶುರುವಾಯ್ತು ಮತ್ತೊಂದು ‘ಆಪರೇಷನ್’

Text book: ಬಿಜೆಪಿಗೆ ಮತ್ತೊಂದು ಶಾಕ್ ಕೊಟ್ಟ ಕಾಂಗ್ರೆಸ್- ಶುರುವಾಯ್ತು ಮತ್ತೊಂದು ‘ಆಪರೇಷನ್’

1 comment
Text book

Text Book: ರಾಜ್ಯ ಸರ್ಕಾರ(State Goverment)2024-25ನೇ ಸಾಲಿನಿಂದ ಪರಿಷ್ಕೃತ ಪಠ್ಯ ಜಾರಿಗೆ ತರಲು ಪೂರ್ವ ತಯಾರಿ ನಡೆಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಬಿಜೆಪಿಯ ಪರಿಷ್ಕೃತ ಪಠ್ಯವನ್ನು(Text Book)ಕೈ ಬಿಟ್ಟು ಕಾಂಗ್ರೆಸ್ (Congress)ಹೊಸ ಪಠ್ಯ ಕ್ರಮ ಜಾರಿಗೆ ತರಲು ಪಠ್ಯ ಪರಿಷ್ಕರಣೆಗೆ ಹೊಸ ತಜ್ಞರ ಸಮಿತಿಯನ್ನು ರಚಿಸಲಿದೆ.

Text book

2024-25ನೇ ಸಾಲಿನಿಂದ ಪರಿಷ್ಕೃತ ಪಠ್ಯ ಜಾರಿಗೆ ತರಲು ರಾಜ್ಯ ಸರ್ಕಾರದಿಂದ ಸಿದ್ಧತೆ ಆರಂಭವಾಗಿದೆ. 1ರಿಂದ 10ನೇ ತರಗತಿಗಳ ಸಂಪೂರ್ಣ ಪಠ್ಯಪುಸ್ತಕ ಪರಿಷ್ಕರಣೆಗೆ ರಾಜ್ಯ ಸರ್ಕಾರದಿಂದ ಸಮಿತಿ ರಚನೆ ಮಾಡಲಾಗಿದೆ. ಪಠ್ಯ ಪರಿಷ್ಕರಣೆಗೆ 38 ಜನ ತಜ್ಞರ ಸಮಿತಿ ನೇಮಕ ಮಾಡಿ ಸರ್ಕಾರದ ಆದೇಶ ಹೊರಡಿಸಿದ್ದು, ಒಬ್ಬರು ಮುಖ್ಯ ಸಂಯೋಜಕರು, 5 ಜನ ಅಧ್ಯಕ್ಷರು, 37 ಜನ ಸದಸ್ಯ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಕಾಂಗ್ರೆಸ್ ಸರ್ಕಾರ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ನಡೆದಿದ್ದ ಪರಿಷ್ಕರಣೆ ರದ್ದು ಮಾಡಿದೆ. ಬಿಜೆಪಿ ಅವಧಿಯ ಪರಿಷ್ಕರಣೆಗೆ ಸಂಪೂರ್ಣ ಕೈ ಬಿಡುವ ನಿಟ್ಟಿನಲ್ಲಿ ತಜ್ಞರ ಸಮಿತಿ ರಚನೆ ಮಾಡಲಿದೆ.ಇದರ ಜೊತೆಗೆ 3 ತಿಂಗಳಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ಸರ್ಕಾರಕ್ಕೆ ವರದಿ ನೀಡಲು‌ ಸೂಚನೆ ನೀಡಲಾಗಿದೆ. ಕನ್ನಡ, ಸಮಾಜ ವಿಜ್ಞಾನ ವಿಷಯಗಳ ಸಂಪೂರ್ಣ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: Belgavi Schoolbus Driver:ತುಂಬಿ ಹರಿಯೋ ಹಳ್ಳದಲ್ಲಿ ಸ್ಕೂಲ್ ಬಸ್ ಚಲಾಯಿಸಿ ಚಾಲಕನ ಚೆಲ್ಲಾಟ – ನಂತರ ಎದುರಾಯ್ತು ಪೀಕಲಾಟ

You may also like

Leave a Comment