Sowjanaya case: ನಮ್ಮ ದೇಶದ ಯಾವುದೇ ಸಂಚಾರ ಇಲಾಖೆಯಲ್ಲಿ ಇಲ್ಲದ ಸ್ವಯಂಘೋಷಿತ ಮತ್ತು ಅನಧಿಕೃತ ಕಾನೂನೊಂದು ಧರ್ಮಸ್ಥಳ ಗ್ರಾಮದಲ್ಲಿ ಜಾರಿಯಲ್ಲಿದೆ. ಧರ್ಮಸ್ಥಳ ಗ್ರಾಮದ ದೊಡ್ಡವರ ಟೀಮ್ ಇಲ್ಲಿನ ಬಡಪಾಯಿ ಆಟೋರಿಕ್ಷಾ ಚಾಲಕ, ಮಾಲಕರ ಮೇಲೆ ಬಲವಂತವಾಗಿ ಹೊಸ ‘ ಡಿ ‘ ಎನ್ನುವ ಕಾನೂನನ್ನು ಹೇರಿರುವುದು ಇದೀಗ ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಇದು ತುಘಲಕ್ ದರ್ಬಾರ್ ನ ಅಳಿದುಳಿದ ತುಕುಡಾ ಎಂದು ಭಾರಿ ಜನಾಕ್ರೋಶ ಕೇಳಿ ಬಂದಿದೆ. ಇದರ ಜತೆಗೇ ಶಾಕಿಂಗ್ ಎನ್ನುವಂತೆ ಸೌಜನ್ಯಾ ಕುಟುಂಬಕ್ಕೆ (Sowjanaya case)ಸಾಮಾಜಿಕ ಬಹಿಷ್ಕಾರ ಹಾಕಿರುವ ವಿಷಯ ಕಳವಳ ಸೃಷ್ಟಿಸಿದೆ.
ಹೌದು, ದೇಶದ ಕಾನೂನು ಬೇಕಾದರೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಅಪ್ಲೈ ಆಗದೆ ಅದು ಬೇರೆ ಯಾವುದೂ ಅಲ್ಲ: ಧರ್ಮಸ್ಥಳದ ಬಡಪಾಯಿ ಚಾಲಕ, ಮಾಲಕರ ಆಟೋರಿಕ್ಷಾಗಳ ಮೇಲೆ ಹೇರಿದ ದೊಡ್ಡವರ ಫತ್ವಾ. ಹೌದು, ನೀವು ಅದನ್ನು ಫತ್ವಾ ಅನ್ನಿ, ಫರ್ಮಾನು ಅನ್ನಿ, ಅಥವಾ ಇನ್ಯಾವುದೇ ಹೆಸರಿನಿಂದ ಕರೆಯಿರಿ. ಇಲ್ಲಿ ಹೊಸ ಸಾರಿಗೆ ನಿಯಮ ಜಾರಿಯಲ್ಲಿದೆ. ಇದರ ಪ್ರಕಾರ ಧರ್ಮಸ್ಥಳದ ಮಹಾ ದ್ವಾರದಿಂದ ಕೆಳಗೆ ಇಳಿದು ದೇವಸ್ಥಾನದ ಕಡೆಗೆ ತೆರಳುವ ಪ್ರತಿಯೊಂದು ಆಟೋರಿಕ್ಷಾಗಳೂ ಸಹಾ ಶ್ರೀ ಶ್ರೀ ಟೀಮ್ ನ ಲಿಖಿತ ಒಪ್ಪಿಗೆಯನ್ನು ಪಡೆದುಕೊಳ್ಳಲೇ ಬೇಕು. ಒಂದು ವೇಳೆ ಒಪ್ಪಿಗೆ ಪಡೆದುಕೊಳ್ಳದೇ ಇದ್ದರೆ ಅಂತಹಾ ಆಟೋ ರಿಕ್ಷಾಗಳು ಮಹಾ ದ್ವಾರದಿಂದ ಕೆಳಗೆ ಬರುವಂತಿಲ್ಲ. ಹಾಗೂ ಆ ಪ್ರದೇಶದಲ್ಲಿ ಬಾಡಿಗೆ ನಡೆಸುವಂತಿಲ್ಲ. ಹೀಗಾಗಿ ಬೇರೆ ಬೇರೆ ಕಡೆಗಳಿಂದ ಬಾಡಿಗೆಗಾಗಿ ಬರುವ ಅದೆಷ್ಟೋ ಆಟೋರಿಕ್ಷಾಗಳಲ್ಲಿ ” D ” ನಂಬರ್ ಇರದ ಕಾರಣಕ್ಕಾಗಿ ಭಕ್ತಾದಿಗಳನ್ನು ಮಹಾದ್ವಾರದ ಬಳಿಯಲ್ಲೇ ಇಳಿಸಿ ಹೋಗಬೇಕಾಗುತ್ತದೆ. ಅಥವಾ ಒಂದೊಮ್ಮೆ ” D ” ನಂಬರ್ ಇಲ್ಲದ ಆಟೋ ರಿಕ್ಷಾಗಳನ್ನು ಗೊತ್ತಿಲ್ಲದೆ ಮಹಾದ್ವಾರದಿಂದ ಕೆಳಗೆ ಇಳಿಸಿದರೆ ಧರ್ಮಸ್ಥಳದ ಪೋಕರಿಗಳ ಟೀಮ್ ನಿಂದ ಒದೆಯಂತೂ ಗ್ಯಾರಂಟಿ !
ಸೌಜನ್ಯಾ ಕುಟುಂಬಕ್ಕೆ ಬಹಿಷ್ಕಾರ:
ಧರ್ಮಸ್ಥಳ ಗ್ರಾಮದ ಶ್ರೀಮಾನ್ ಕಾಮಾಂಧರ ತುಘಲಕ್ ದರ್ಬಾರ್ ಇಷ್ಟಕ್ಕೇ ಮುಗಿದಿಲ್ಲ. ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋದ ಈ ಟೀಮ್, ಇದೀಗ ಧರ್ಮಸ್ಥಳದಲ್ಲಿ “ಡಿ” ಬೋರ್ಡ್ ಅಳವಡಿಸಿರುವ ಆಟೋರಿಕ್ಷಾ ಮತ್ತು ಧರ್ಮಸ್ಥಳದ ಸುತ್ತಮುತ್ತ ಪಾರ್ಕಿಂಗ್ ಮಾಡುವ (“D” ಬೋರ್ಡ್ ಹೊಂದಿರದ) ಇತರ ಆಟೋರಿಕ್ಷಾಗಳನ್ನೂ ಸಹಾ ಸಂತ್ರಸ್ತ ಸೌಜನ್ಯಳ ಮನೆಗಾಗಾಲೀ ಅಥವಾ ಸೌಜನ್ಯಳ ಕುಟುಂಬಸ್ಥರ ಮನೆಗಾಗಲೀ ಬಾಡಿಗೆಗೆ ಹೋಗಬಾರದೆಂದು ಕಡ್ಡಾಯ ಸುಗ್ರೀವಾಜ್ಞೆಯನ್ನು ಹೊರಡಿಸುವ ಮೂಲಕ ಸೌಜನ್ಯಾ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆಂದು ಗ್ರಾಮಸ್ಥರು ತಿಳಿಸುತ್ತಿದ್ದಾರೆ. ಈಗ ಧರ್ಮಸ್ಥಳದಿಂದ ಸೌಜನ್ಯಳ ಪಾಂಗಾಳ ಮನೆಗೆ ಆಟೋರಿಕ್ಷಾದಲ್ಲಿ ಹೆಚ್ಚು ಬಾಡಿಗೆ ಕೊಡ್ತೇವೆ ಅಂದ್ರೂ ಧರ್ಮಸ್ಥಳದ ಯಾವುದೇ ಆಟೋ ರಿಕ್ಷಾದವರೂ ಕೂಡಾ ಸೌಜನ್ಯಾ ಕುಟುಂಬದವರ ಮನೆಗೆ ಬರುವುದೇ ಇಲ್ಲ. ಇದು ಯಾವ ನ್ಯಾಯ ಸ್ವಾಮಿ ?!
ನಮ್ಮ ಕಣ್ಣೆದುರೇ ಕೆಲವರು ಪಕ್ಕದ ಊರಿನಿಂದ ಬಂದು ಧರ್ಮಸ್ಥಳದಲ್ಲಿ ಬಸ್ಸಿನಲ್ಲಿ ಬಂದಿಳಿದು ಪಾಂಗಾಳ ಮನೆಗೆ ಸಾಗಲು ಆಟೋಗಾಗಿ ಪರದಾಟ ಪಟ್ಟದ್ದು ಕಂಡುಬಂತು. ಅಲ್ಲಿನ ಆಟೋಗಳು ಸೌಜನ್ಯ ಮತ್ತು ಕುಟುಂಬಸ್ಥರ ಮನೆಗೆ ಬರಲು ಒಪ್ಪುತ್ತಿಲ್ಲ. ಯಾಕೆಂದು ಕೇಳಿದರೆ, ಗುಟ್ಟಾಗಿ ಪಿಸು ಮಾತಾಡುತ್ತಾರೆ. ಒಂದು ಅವ್ಯಕ್ತ ಭಯ ಅಲ್ಲಿ ಆವರಿಸಿಕೊಂಡಿದೆ.
ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ಇನ್ನಾದರೂ ಎಚ್ಚೆತ್ತುಕೊಳ್ಳುವಿರಾ?
ಧರ್ಮಸ್ಥಳ ಗ್ರಾಮದಲ್ಲಿ ಇಷ್ಟೆಲ್ಲಾ ಬ್ರಹ್ಮಾಂಡ ಭ್ರಷ್ಟಾಚಾರ, ಮೋಸ, ವಂಚನೆ, ದಗಲ್ಬಾಜಿ, ಕೊಲೆ, ಅತ್ಯಾಚಾರಗಳು ನಡೆದ ಬಗ್ಗೆ ಈ ಹಿಂದಿನಿಂದಲೂ ಸಂಬಂಧ ಪಟ್ಟವರಿಗೆ ಅದೆಷ್ಟೋ ದೂರು, ಮನವಿಗಳನ್ನು ಸಲ್ಲಿಸಿದರೂ ಸೌಜನ್ಯಾ ಪ್ರಕರಣವನ್ನು ಮುಚ್ಚಿ ಹಾಕಿದಂತೆ ಅಲ್ಲಿ ನಡೆಯುವ ಅದೆಷ್ಟೋ ಪ್ರಕರಣ ಮತ್ತು ಹಗರಣಗಳನ್ನು ಈ ವರೆಗೂ ಈ ಗ್ಯಾಂಗ್ ಮುಚ್ಚಿ ಹಾಕುತ್ತಲೇ ಬಂದಿತ್ತು. ಆದರೆ ಇಷ್ಟಾದರೂ ಈ ಕಾಮಾಂಧ ಟೀಮ್ “ವಿನಾಶ ಕಾಲೇ ವಿಪರೀತ ಬುದ್ಧಿ” ಎಂಬ ಹಾಗೆ ಮತ್ತೆ ನಮ್ಮ ದೇಶದಲ್ಲಿ ಮತ್ತು ದೇಶದ ಸಂಚಾರ ಹಾಗೂ ಸಾರಿಗೆ ಇಲಾಖೆಯ ವ್ಯವಸ್ಥೆಯಲ್ಲೇ ಎಲ್ಲೂ ಇಲ್ಲದ ಧರ್ಮಸ್ಥಳದ ಆಟೋರಿಕ್ಷಾಗಳಿಗೆ ಅನಧೀಕೃತ ” D ” ನಂಬರ್ ಅಳವಡಿಕೆ ಮತ್ತು ಇಲ್ಲಿನ ಆಟೋ ರಿಕ್ಷಾಗಳ ಸಹಿತ ಧರ್ಮಸ್ಥಳ ಗ್ರಾಮದ ಯಾರೊಬ್ಬರೂ ಕೂಡಾ ಸೌಜನ್ಯಳ ಮನೆ ಮತ್ತು ಸೌಜನ್ಯ ಕುಟುಂಬಸ್ಥರ ಮನೆಗಳಿಗೆ ತೆರಳದಂತೆ ಸಾಮಾಜಿಕ ನಿರ್ಬಂಧ ವಿಧಿಸುವ ಮೂಲಕ ದೊಡ್ಡವರ ಟೀಮ್ ಮತ್ತೆ ತಮ್ಮ ನಿಜ ಬುದ್ಧಿಯನ್ನು ತೋರಿಸಿಕೊಂಡಿದೆ.
ಹೀಗಾಗಿ ಕಾಮಾಂಧರಿಗೆ ಬಕೆಟ್ ಹಿಡಿಯುವ ಶಾಸಕರು, ಕೇಂದ್ರ ಮತ್ತು ರಾಜ್ಯದ ಕೆಲವು ಮಂತ್ರಿ ಮಹೋದಯರು ಇನ್ನಾದರೂ ನಿಮ್ಮ ಜಾಣ ಕುರುಡುತನವನ್ನು ಬಿಟ್ಟು ಕಾಮಾಂಧರನ್ನು ಕಂಟ್ರೋಲ್ ಮಾಡಬೇಕಿದೆ. ಅದೇ ರೀತಿ ಕೇಂದ್ರ ಮತ್ತು ರಾಜ್ಯದ ಮಾನವ ಹಕ್ಕು ಆಯೋಗದ ಸಹಿತ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರೂ ಈ ಬಗ್ಗೆ ಗಮನ ಹರಿಸಿ ಕೂಡಲೇ ಇಲ್ಲಿನ ತುಘಲಕ್ ದರ್ಬಾರನ್ನು ತಕ್ಷಣ ನಿಲ್ಲಿಸಬೇಕಾಗಿದೆ. ಬೆಳ್ತಂಗಡಿಯ ಶಾಸಕರೇ, ನೀವು ತಕ್ಷಣ ಧರ್ಮಸ್ಥಳ ಗ್ರಾಮಕ್ಕೆ ತೆರಳಿ ಪಾಂಗಾಳದಲ್ಲಿ ನಡೆಯುತ್ತಿರುವ ಈ ಅನಾಚಾರಕ್ಕೆ ಒಂದು ಮುಕ್ತಿ ದೊರಕಿಸಿ ಕೊಡಬೇಕಿದೆ.
