Home » Sukanya samriddhi Account: ನೀವು ಸರ್ಕಾರದ ಈ ಯೋಜನೆಗಳ ಫಲಾನುಭವಿಗಳೇ?! ಹಾಗಿದ್ರೆ ಸೆ.30ರೊಳಗೆ ಈ ತಪ್ಪದೆ ದಾಖಲೆಗಳನ್ನು ಒದಗಿಸಿ, ಇಲ್ಲಾಂದ್ರೆ ಕ್ಲೋಸ್ ಆಗವುದು ನಿಮ್ಮ ಖಾತೆ

Sukanya samriddhi Account: ನೀವು ಸರ್ಕಾರದ ಈ ಯೋಜನೆಗಳ ಫಲಾನುಭವಿಗಳೇ?! ಹಾಗಿದ್ರೆ ಸೆ.30ರೊಳಗೆ ಈ ತಪ್ಪದೆ ದಾಖಲೆಗಳನ್ನು ಒದಗಿಸಿ, ಇಲ್ಲಾಂದ್ರೆ ಕ್ಲೋಸ್ ಆಗವುದು ನಿಮ್ಮ ಖಾತೆ

2 comments
Sukanya samriddhi Account

Sukanya samriddhi Account: ಹಣಕಾಸು ಸಚಿವಾಲಯವು ಸರ್ಕಾರ ನಡೆಸುವ ಸಣ್ಣ ಉಳಿತಾಯ ಯೋಜನೆಗಳ ನಿಯಮದಲ್ಲಿ ಬದಲಾವಣೆ ಮಾಡಿದ್ದು, ಅಂತೆಯೇ ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಮುಂತಾದ ಸಣ್ಣ ಹೂಡಿಕೆ ಯೋಜನೆಯಲ್ಲಿ ಹೊಸ ನಿಯಮದ ಬಗ್ಗೆ ಈಗಾಗಲೇ ಹಣಕಾಸು ಸಚಿವಾಲಯ ಎಚ್ಚರಿಕೆ ನೀಡಿದೆ.

ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ:
ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ (Sukanya samriddhi Account), ಅಂಚೆ ಕಚೇರಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಂತಹ ಎಲ್ಲಾ ರೀತಿಯ ಸಣ್ಣ ಉಳಿತಾಯ ಯೋಜನೆಗಳ ಹೂಡಿಕೆದಾರರು ಈ ಎಲ್ಲಾ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಧಾರ್ ಮತ್ತು ಪ್ಯಾನ್ ನೀಡುವುದು ಅಗತ್ಯ ಎನ್ನುವ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದೆ. ಇದಕ್ಕಾಗಿ ಹೂಡಿಕೆದಾರರಿಗೆ ಹಣಕಾಸು ಸಚಿವಾಲಯ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿದೆ. ಹಣಕಾಸು ಸಚಿವಾಲಯದ ಸೂಚನೆಯನ್ನು ನಿರ್ಲಕ್ಷಿಸಿದರೆ, ಅಕ್ಟೋಬರ್ 1 ರಿಂದ ನಿಮ್ಮ ಖಾತೆಯನ್ನು ಮುಚ್ಚಲಾಗುವುದು ಎಂದು ತಿಳಿಸಲಾಗಿದೆ.

ಈ ಕೆಳಗಿನ ಯೋಜನೆಗಳಿಗೆ ಹೊಸ ನಿಯಮ ಅನ್ವಯಿಸಲಿದೆ:
– ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ (FD)
– ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ (RD)
– ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS)
– ಸುಕನ್ಯಾ ಸಮೃದ್ಧಿ ಯೋಜನೆ (SSY)
– ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (TD)
– ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರಗಳು
– ಸಾರ್ವಜನಿಕ ಭವಿಷ್ಯ ನಿಧಿ ( PPF)
– ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)
– ಕಿಸಾನ್ ವಿಕಾಸ್ ಪತ್ರ (KVP)

ಒಂದು ವೇಳೆ ನೀವು ಇನ್ನೂ ಕೂಡಾ ಆಧಾರ್ ಮಾಡದಿದ್ದರೆ, ಆಧಾರ್ ನೋಂದಣಿ ಸಂಖ್ಯೆಯ ಮೂಲಕವೂ ಹೂಡಿಕೆ ಮಾಡಬಹುದು. ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಹೂಡಿಕೆಯ ಮೇಲೆ ಪ್ಯಾನ್ ಕಾರ್ಡ್ ನೀಡುವುದು ಅಗತ್ಯ ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹೊಸ ನಿಯಮ ಪ್ರಕಾರ ಸುಕನ್ಯಾ ಸಮೃದ್ಧಿಯಂತಹ ಯೋಜನೆಯಲ್ಲಿ ಖಾತೆ ತೆರೆಯುವಾಗ, ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ಅನ್ನು ಸಲ್ಲಿಸಬೇಕು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಒಂದು ವೇಳೆ ಖಾತೆ ತೆರೆಯುವಾಗ ಈ ದಾಖಲೆಗಳನ್ನು ಒದಗಿಸುವುದು ಸಾಧ್ಯವಾಗದೆ ಇದ್ದರೆ, ಅದನ್ನು ಎರಡು ತಿಂಗಳೊಳಗೆ ಸಲ್ಲಿಸಬಹುದು ಎನ್ನಲಾಗಿದೆ.

ಇದನ್ನೂ ಓದಿ: ಮಂಗಳೂರು ಸಿಟಿ ಬಸ್‌ಗಳ ಆಟಾಟೋಪಕ್ಕೆ ಕಮೀಷನರ್ ಮೂಗುದಾರ !

You may also like

Leave a Comment