Karnataka bandh: ಬೆಂಗಳೂರಿನಲ್ಲಿ ಇಂದು ಕರ್ನಾಟಕ ಬಂದ ಪ್ರಯುಕ್ತ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆದಿದೆ. ರಾಜ್ಯ ಸರ್ಕಾರ ಪೊಲೀಸರ ಮೂಲಕ ಬಂದ್ ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ. ಆ ವೇಳೆ ಬುರ್ಖಾಧಾರಿ ನಾಯಕನೊಬ್ಬ ಕೊಡ ಹೊತ್ತುಕೊಂಡು ನೀರಿಗಾಗಿ ಹುಡುಕಾಟ ನಡೆಸಿ ಪ್ರತಿಭಟನೆಗೆ ಇಳಿದದ್ದು ಕಂಡು ಬಂದಿದೆ.
ಖಾಲಿ ಬಿಂದಿಗೆ ಕತ್ತೆಯ ಮದುವೆ ಇತ್ಯಾದಿ ವಿನೂತನ ಪ್ರತಿಭಟನೆಗಳಿಗೆ ಹೆಸರಾದ ವಾಟಾಳ್ ನಾಗರಾಜರವರು ಇವತ್ತು ಮತ್ತೆ ಖಾಲಿ ಬಿಂದಿಗೆ ಹಿಡಿದಿದ್ದಾರೆ. ಆದರೆ ಇವತ್ತು ಇಲ್ಲೊಂದು ಸಣ್ಣ ಪ್ರಾಪರ್ಟಿ ಎಕ್ಸ್ಟ್ರಾ ಸೇರಿಸಿದ್ದಾರೆ. ಕಾವೇರಿ ನೀರಿಗಾಗಿ ಖಾಲಿ ಬಿಂದಿಗೆ ಹಿಡಿದು ಬುರ್ಖಾ ಎಳೆದುಕೊಂಡು ಬಂದಿದ್ದಾರೆ. ಹಾಗೆ ಬುರ್ಕಾ ಜತೆ ಕೊಡ ಹೊತ್ತು ಬಂದು ವಿನೂತನ ಪ್ರತಿಭಟನೆ ಮಾಡುತ್ತಿದ್ದಾರೆ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್.
“ಕರ್ನಾಟಕ ಬಂದ್ ಗೆ (Karnataka bandh) ಸರ್ಕಾರದಿಂದ ವಿರೋಧ ಇದ್ದು, ಪೊಲೀಸರಿಗೆ ಒತ್ತಡ ಹಾಕಿದೆ. ಬೆಂಗಳೂರಿನಲ್ಲೇ 50,000 ಪೊಲೀಸರನ್ನು ನಿಯೋಜಿಸಿದೆ ಸರ್ಕಾರ. ಇಡೀ ಕರ್ನಾಟಕಕ್ಕೆ ಲಕ್ಷಾಂತರ ಪೊಲೀಸ್ ಹಾಕಿ ಸರ್ಕಾರವೇ ಬಂದ್ ಮಾಡುತ್ತಿದೆ. ನಾವು ಕಾವೇರಿ ಹೋರಾಟಕ್ಕೆ ಬಂದ್ ಮಾಡಿದ್ರೆ, ಈ ಸರ್ಕಾರವು ಪೊಲೀಸ್ ಫೋರ್ಸ್ ಹಾಕಿ ಬಂದ್ ಮಾಡ್ತಿದೆ” ಎಂದು ವಾಟಾಳ್ ನಾಗರಾಜ್ ರವರು ಆರೋಪಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ‘ಸರ್ಕಾರ ಏನೇ ಮಾಡಿದರೂ, ಇವತ್ತು ನಮ್ಮ ಕರೆಗೆ ಇಡೀ ರಾಜ್ಯವೇ ಸ್ಪಂದಿಸಿದೇ. ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಆದರೆ, ಸರ್ಕಾರ ಅರ್ಥ ಮಾಡಿಕೊಳ್ಳದೇ ಹೋರಾಟಗಾರರನ್ನು ಎಲ್ಲೆಂದರಲ್ಲಿ ಬಂಧನ ಮಾಡ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
ಇದನ್ನು ಓದಿ: ಮಸೀದಿಯಲ್ಲಿ ಭೀಕರ ಬಾಂಬ್ ಬ್ಲಾಸ್ಟ್ ! 30 ಜನ ಸ್ಥಳದಲ್ಲೇ ಸಾವು, 17 ಮಂದಿಗೆ ಗಂಭೀರ ಗಾಯ!!
