Home » ಕಾವೇರಿ ಹೋರಾಟ: ಬೈಕ್ ಏರಿ ಬಂದ ಚಕ್ರವರ್ತಿ ಸೂಲಿಬೆಲೆ, 4 ಜಿಲ್ಲೆಗಳಲ್ಲಿ ಬೈಕ್ ನಲ್ಲಿ ಸಾಗಿ ಪ್ರತಿಭಟನೆ !

ಕಾವೇರಿ ಹೋರಾಟ: ಬೈಕ್ ಏರಿ ಬಂದ ಚಕ್ರವರ್ತಿ ಸೂಲಿಬೆಲೆ, 4 ಜಿಲ್ಲೆಗಳಲ್ಲಿ ಬೈಕ್ ನಲ್ಲಿ ಸಾಗಿ ಪ್ರತಿಭಟನೆ !

by ಹೊಸಕನ್ನಡ
0 comments
Karnataka Bandh

Karnataka Bandh: ನಮೋ ಯುವ ಬ್ರಿಗೇಡ್ ನಾಯಕ ಚಕ್ರವರ್ತಿ ಸೂಲಿಬೆಲೆಯವರು (Chakravarti Sulibele) ಇಂದು ಶುಕ್ರವಾರ ರಾಮನಗರಕ್ಕೆ ಬೈಕ್ ರ‍್ಯಾಲಿ (Bike Rally) ಮೂಲಕ ಆಗಮಿಸಿದ್ದಾರೆ. ಆ ಮೂಲಕ ಕರ್ನಾಟಕ ಬಂದ್ ಗೆ ನಮೋ ಬ್ರಿಗೇಡ್ (Karnataka Bandh) ತನ್ನ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಸೂಲಿಬೆಲೆಯವರು ಇಂದು ಚನ್ನಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಬೈಕಿನಲ್ಲಿ ಬಂದ ಅವರು ಚನ್ನಪಟ್ಟಣದ ಗಾಂಧಿ ವೃತ್ತದಲ್ಲಿ ಕನ್ನಡಪರ ಹಾಗೂ ರೈತ ಸಂಘಟನೆಗಳ ಜೊತೆ ರಸ್ತೆಯಲ್ಲಿ ಕೂತು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಈ ವೇಳೆ ಮಾತನಾಡಿದ ಅವರು, ಕಾವೇರಿ ಹೋರಾಟಕ್ಕೆ ನಮೋ ಬ್ರಿಗೇಡ್ ತನ್ನ ಸಂಪೂರ್ಣ ಬೆಂಬಲವನ್ನೂ ನೀಡಿದೆ. ಇಂದು ಬೈಕ್ ರ‍್ಯಾಲಿ ಮೂಲಕ ನಾವು ಚನ್ನಪಟ್ಟಣ, ಮಂಡ್ಯ, ಚಾಮರಾಜನಗರದ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದೇನೆ. ಜನಪರ ಈ ಹೋರಾಟದಲ್ಲಿ ಭಾಗಿಯಾಗಿ ನೀರು ನಿಲ್ಲಿಸಬೇಕು ಎಂದು ಆಗ್ರಹ ಮಾಡಿದ್ದೇವೆ ಎಂದರು.

“ನಾನು ಸಿಎಂ, ಡಿಸಿಎಂ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. ಅವರ ವೈಯಕ್ತಿಕ ಹಿತಾಸಕ್ತಿಗೆ ರಾಜ್ಯದ ಜನರ ಹಿತಾಸಕ್ತಿ ಬಲಿಯಾಗುವ ಆತಂಕ ಇದೆ. ರಾಜ್ಯ ಸರ್ಕಾರ ನೀರು ಬಿಡಲ್ಲ ಎಂದಾಗ ತಮಿಳುನಾಡು ಸರ್ಕಾರ ನೀರು ಬೇಕು ಅಂತ ಹೋರಾಟ ಮಾಡಿದರೆ ಮಾತ್ರ ಕೇಂದ್ರ ಮಧ್ಯ ಪ್ರವೇಶ ಮಾಡಬಹುದು. ಆದರೆ ಅವರು ಕೇಳೋಕು ಮುಂಚೆಯೇ ಇವರು ನೀರು ಬಿಡುತ್ತಿದ್ದಾರೆ” ಎಂದರು ಚಕ್ರವರ್ತಿ ಸೂಲಿಬೆಲೆ.
“ಇಂಡಿಯಾ ಒಕ್ಕೂಟಕ್ಕೆ ಬೆಂಬಲವನ್ನು ಘೋಷಿಸಿದ ತಮಿಳುನಾಡನ್ನು ಓಲೈಸಲು ಈಗ ನಮ್ಮ ರಾಜ್ಯವನ್ನು ಕಡೆಗಣನೆ ಮಾಡಲಾಗುತ್ತಿದೆ. ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ.” ಎಂದು ರಾಜ್ಯ ಸರ್ಕಾರದ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಹರಿ ಹಾಯ್ದಿದ್ದಾರೆ.

You may also like

Leave a Comment