Home » Doctor Death: ತಜ್ಞ ವೈದ್ಯೆಯೋರ್ವರ ಅನುಮಾನಸ್ಪದ ಸಾವು!

Doctor Death: ತಜ್ಞ ವೈದ್ಯೆಯೋರ್ವರ ಅನುಮಾನಸ್ಪದ ಸಾವು!

by Mallika
0 comments
Doctor Death

kollegala: ವೈದ್ಯರೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ನಗರದ ಸರಕಾರಿ ಆಸ್ಪತ್ರೆಯ ಅರವಳಿಕೆ ತಜ್ಞ ವೈದ್ಯೆಯಾದ ಡಾ.ಸಿಂದುಜ(28)ಎಂಬುವವರೇ ಮನೆಯಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸರಕಾರಿ ಆಸ್ಪತ್ರೆಗೆ ದಿನಾ ಬರುತ್ತಿದ್ದ ಸಿಂದುಜಾ ಅವರು ಬರದೇ ಇರುವುದನ್ನು ಗಮನಿಸಿ, ಅನುಮಾನಗೊಂಡ ಆಸ್ಪತ್ರೆಯವರು ಆಕೆಯ ಮನೆಯ ಕಿಟಿಕಿಯಲ್ಲಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಗಾಬರಿಗೊಂಡ ಆಸ್ಪತ್ರೆಯವರು ಆಕೆ ಸತ್ತು ಬಿದ್ದಿರುವುದನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಅಂದ ಹಾಗೆ, ಸಿಂದುಜ ಅವರಿಗೆ ಜನವರಿ ತಿಂಗಳಲ್ಲಿ ಚೆನೈ ವ್ಯಕ್ತಿಯೊಂದಿಗೆ ಮದುವೆಗೆ ರೆಡಿಯಾಗಿದ್ದರೆಂದು, ಇದಕ್ಕೆಲ್ಲ ಸಿದ್ಧತೆ ನಡೆದಿತ್ತು ಎಂದು ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ಬಂದಿದ್ದು, ತನಿಖೆ ನಡೆಸುತ್ತಿದ್ದಾಋೆ.

ಮೃತ ವೈದ್ಯರ ಪೋಷಕರು ಚೆನೈನಿಂದ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ವರದಿಯಾಗಿದೆ.

You may also like

Leave a Comment