Home » Bagalkote: ಕರುಳಿನ ಕೂಗು! ತನ್ನ ಕಂದನಿಗಾಗಿ ವಾಹನ ಬೆನ್ನಟ್ಟಿಕೊಂಡ ಹೋದ ಹಸು! ಮುಂದೇನಾಯ್ತು?

Bagalkote: ಕರುಳಿನ ಕೂಗು! ತನ್ನ ಕಂದನಿಗಾಗಿ ವಾಹನ ಬೆನ್ನಟ್ಟಿಕೊಂಡ ಹೋದ ಹಸು! ಮುಂದೇನಾಯ್ತು?

by Mallika
1 comment
Bagalkote

Bagalkote: ತಾಯಿ ಮಕ್ಕಳ ಸಂಬಂಧ ಕರುಳ ಸಂಬಂಧ. ಇದು ಮನುಷ್ಯರಿಗೆ ಮಾತ್ರವಲ್ಲ ಎಲ್ಲಾ ಜೀವಜಂತುಗಳಿಗೂ ಅನ್ವಯಿಸುತ್ತದೆ. ಅಂತಹುದೇ ಒಂದು ಮನಮಿಡಿಯುವ ಘಟನೆಯೊಂದು ಬಾಗಲಕೋಟೆಯಲ್ಲಿ ನಡೆದಿದೆ. ಹೌದು, ಹಸುವೊಂದು ಕರುವಿಗೆ ಜನ್ಮ ನೀಡಿದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿತ್ತು. ಹಾಗಾಗಿ ಗ್ರಾಮದ ಒಂದಷ್ಟು ಜನ ಸೇರಿ ಕರುವಿನ ಜೊತೆಗೆ ಹಸುವನ್ನು ಕೂಡಾ ಬಾಗಲಕೋಟೆ(Bagalkote) ನವನಗರದಲ್ಲಿರುವ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಆಸ್ಪತ್ರೆಯಿಂದ ವಾಪಸ್‌ ಬರುವ ಸಂದರ್ಭದಲ್ಲಿ ಯುವಕರು ಕರುವನ್ನು ಇನ್ನೊಂದು ವಾಹನದಲ್ಲಿ ಕರೆತರುತ್ತಿದ್ದರು.

ಆದರೆ ಹಸು ತನ್ನ ಕಂದನಿಗಾಗಿ ಆ ವಾಹನದ ಹಿಂದೆ ಬೆನ್ನಟ್ಟಿಕೊಂಡು ಹೋಗಿದೆ. ತನ್ನ ಕಂದನನ್ನು ಯಾರೋ ಕರೆದುಕೊಂಡು ಹೋಗುತ್ತಿರುವ ಭಾವನೆ ಆ ಹಸುವಿಗೆ ಬಂತೇನೋ. ಅಥವಾ ತನ್ನ ಕಂದ ಇನ್ನು ನನ್ನ ಜೊತೆ ಇರಲ್ಲವೆನ್ನುವ ಭಾವನೆ ಭಯದಿಂದ ಆ ಹಸು ಆ ಗಾಡಿ ಹಿಂದೆ ಬೆನ್ನಟ್ಟಿ ಹೋಗುತ್ತಿತ್ತೇನೋ. ಇದಲ್ಲವೇ ಕರುಳ ಸಂಬಂಧ. ನಿಜಕ್ಕೂ ಹಸು ತನ್ನ ಕರುವಿನ ಹಿಂದೆ ಹೋಗುವ ದೃಶ್ಯವಂತೂ ನಿಜಕ್ಕೂ ಮನಮಿಡಿಯುತ್ತಿತ್ತು.

ಕರುಳಿನ ಕೂಗು ಎಂದರೆ ಇದೇ ಏನೋ? ಅಂಬಾ ಎನ್ನುತ್ತಿದ್ದ ಕರುವಿನ ಕೂಗಿಗೆ ತಾಯಿ ಹಸು ವಾಹನವನ್ನು ಬೆನ್ನಟ್ಟಿ ಹೋಗುತ್ತಿತ್ತು. ತನ್ನ ಕರುವಿಗಾಗಿ ಹಸು ಸುಮಾರು ಐದು ಕಿ.ಮೀ. ವರೆಗೆ ವಾಹನವನ್ನು ಹಿಂಬಾಲಿಸಿಕೊಂಡು ಹೋಗಿದೆ. ವಾಹನವನ್ನು ನಿಲ್ಲಿಸುವಂತೆ ಚಾಲಕನತ್ತ ಮುಖ ಮಾಡಿ ರೋದಿಸಿದ ದೃಶ್ಯವಂತ ನಿಜಕ್ಕೂ ಬೇಸರ ತರಿಸುತ್ತಿತ್ತು.

ಇದನ್ನೂ ಓದಿ: ಈ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ – ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಿದ ಸರ್ಕಾರ

You may also like

Leave a Comment