Home » Virat And Anushka: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕಿಂಗ್​ ಕೊಹ್ಲಿ-ಅನುಷ್ಕಾ ದಂಪತಿ

Virat And Anushka: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕಿಂಗ್​ ಕೊಹ್ಲಿ-ಅನುಷ್ಕಾ ದಂಪತಿ

1 comment
Virat And Anushka

Virat And Anushka: ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜಗತ್ತಿನ ತಾರಾ ಜೋಡಿಗಳಲ್ಲಿ ಒಂದು ಎನಿಸಿಕೊಂಡಿದ್ದಾರೆ. ಇವರಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಇದೀಗ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿ(virat kohli) ಮತ್ತು ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ(anushka sharma) ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ದಟ್ಟವಾಗಿ ಸುದ್ದಿ ಹರಡಿದೆ. ಇದಕ್ಕೆ ಪುಷ್ಟಿ ಎಂಬಂತೆ ಕೆಲ ದಿನಗಳ ಹಿಂದೆ ಕೊಹ್ಲಿ ಮತ್ತು ಅನುಷ್ಕಾ(Virat And Anushka) ಮುಂಬೈಯ ಹೆರಿಗೆ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿರುವುದಾಗಿಯೂ ತಿಳಿದುಬಂದಿದೆ.

ಸದ್ಯ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಮುಂಬರುವ ವಿಶ್ವಕಪ್ ಟೂರ್ನಿಗಾಗಿ ವಿಶೇಷ ತಯಾರಿಯಲ್ಲಿ ಇದ್ದಾರೆ. ಹೀಗಿರುವಾಗಲೇ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಶೀಘ್ರದಲ್ಲೇ ನೀಡುವ ಸಾಧ್ಯತೆಯಿದೆ.

ಹೌದು, ಕೆಲವು ದಿನಗಳ ಹಿಂದಷ್ಟೇ ವಿರುಷ್ಕಾ ದಂಪತಿ ಮುಂಬೈನಲ್ಲಿರುವ ಪ್ರಖ್ಯಾತ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವಿಚಾರವನ್ನು ಈಗಲೇ ಬಹಿರಂಗ ಪಡಿಸುವುದು ಬೇಡ. ಕೆಲ ಸಮಯದ ಬಳಿಕ ತಾವೇ ಈ ವಿಷಯವನ್ನು ಹೊರ ಜಗತ್ತಿಗೆ ತಿಳಿಸಲಿದ್ದೇವೆ ಎಂದು ಮನವಿ ಮಾಡಿಕೊಂಡಿದ್ದರು.

ಈಗಾಗಲೇ 2021ರ ಜನವರಿಯಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ವಾಮಿಕಾ ಎನ್ನುವ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಇದುವರೆಗೂ ವಾಮಿಕಾ ಮುಖವನ್ನು ವಿರುಷ್ಕಾ ಜೋಡಿ ಜಗತ್ತಿಗೆ ತೋರಿಸಿಲ್ಲ ಎನ್ನುವುದು ವಿಶೇಷ. ಸದ್ಯ ಎರಡನೇ ಮಗುವಿನ ಸ್ವಾಗತಕ್ಕೂ ಮುನ್ನ ವಿರಾಟ್ ಕೊಹ್ಲಿ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಕಪ್ ಗೆದ್ದು ಕೊಡಲು ಭರ್ಜರಿ ತಯಾರಿಯಲ್ಲಿ ಇದ್ದಾರೆ. ಒಟ್ಟಿನಲ್ಲಿ ಈ ಸುದ್ದಿ ಅಭಿಮಾನಿಗಳ ಪಾಲಿಗೆ ಹೊಸ ಥ್ರಿಲ್ ಉಂಟು ಮಾಡಿದೆ.

You may also like

Leave a Comment