Home » Boy Death: ಹುಡುಗಿ ಹೆಸರಲ್ಲಿ ಬಂತು ಮೆಸೇಜ್ ; 2 ದಿನ ಚಾಟ್ ಮಾಡಿದ ಯುವಕ ಹೆಣವಾದ !! ನಡುವೆ ನಡೆದದ್ದು…..?!

Boy Death: ಹುಡುಗಿ ಹೆಸರಲ್ಲಿ ಬಂತು ಮೆಸೇಜ್ ; 2 ದಿನ ಚಾಟ್ ಮಾಡಿದ ಯುವಕ ಹೆಣವಾದ !! ನಡುವೆ ನಡೆದದ್ದು…..?!

0 comments
Boy Death

Boy Death: ಇನ್ಸ್ಟಾಗ್ರಾಂ ನಲ್ಲಿ (Instagram) ಬಂದ ಮೆಸೇಜ್ ಯುವಕನೊಬ್ಬನ ಅಂತ್ಯಕ್ಕೆ (Boy Death) ಕಾರಣವಾದ ಘಟನೆ ಬೆಳಕಿಗೆ ಬಂದಿದೆ. ಹುಡುಗಿ ಹೆಸರಲ್ಲಿ ಬಂದ ಮೆಸೇಜ್ ‘ಗೆ ಯುವಕ ರಿಪ್ಲೈ‌ ಮಾಡಿದ್ದು, 2 ದಿನ ಚಾಟ್ ಮಾಡಿದ್ದಾನೆ. ನಂತರ ಹೆಣವಾಗಿದ್ದಾನೆ. ಅಷ್ಟಕ್ಕೂ ಈ ಎರಡು ದಿನದಲ್ಲಿ ನಡೆದಿದ್ದೇನು? ಯುವಕನ ಸಾವಿಗೆ ಕಾರಣವೇನು?! ಈ ಮಾಹಿತಿ ಓದಿ!!!.

ಪ್ರಜ್ವಲ್ ಎಂಬಾತನೆ ಮೃತ‌ ಯುವಕ. ಈತ ಪಿಯುಸಿ ಓದುತ್ತಿದ್ದ.
ಪ್ರಜ್ವಲ್ ನನ್ನು ಬಕ್ರ ಮಾಡಲು ಫೇಕ್ ಇನ್ಸ್ಟಾಗ್ರಾಂ ಐಡಿ ಕ್ರಿಯೇಟ್ ಮಾಡಿ ಹುಡುಗಿ ಹೆಸರಲ್ಲಿ ಆತನ ಒಟ್ಟಿಗೆ ಆಡಿ ಬೆಳೆದ ಸ್ನೇಹಿತರು
ಮೆಸೆಜ್ ಮಾಡ್ತಾರೆ. ಪ್ರಜ್ವಲ್ ಹುಡುಗಿ ಅಂದುಕೊಂಡು ಮೆಸೇಜ್ ಗೆ ರಿಪ್ಲೆ ಮಾಡಿದ್ದಾನೆ. ಈ ಚಾಟ್ ನಿರಂತರ ಎರಡು ದಿನ ಮುಂದುವರೆದಿದೆ. ಅದ್ರೆ 2 ದಿನದ ಬಳಿಕ ತನಗೆ ಮೆಸೆಜ್ ಮಾಡಿದ್ದು ಹುಡುಗಿ ಅಲ್ಲ ಬದಲಿಗೆ ಆತನ ಸ್ನೇಹಿತರೇ ಅನ್ನೋದು ಗೊತ್ತಾಗಿಬಿಟ್ಟಿದೆ.

ಸಿಟ್ಟಿನಿಂದ ಪ್ರಜ್ವಲ್ ಸ್ನೇಹಿತರಲ್ಲಿ ಪ್ರಶ್ನೆ ಮಾಡಿ, ಬೈದಿದ್ದಾನೆ. ಈ ವೇಳೆ
ಪ್ರಜ್ವಲ್ ಹಾಗೂ ಸ್ನೇಹಿತ ಮಧ್ಯೆ ಜಗಳ ಶುರುವಾಗಿದ್ದು, ನಂತರ
ರಾಜಿಯೂ ಆಗ್ತಾರೆ. ಆದರೆ, ಸ್ನೇಹಿತರಿಗೆ ಪ್ರಜ್ವಲ್ ಮೇಲೆ ಸಿಟ್ಟು ಹಾಗೇ ಇರುತ್ತದೆ. ಆತನ ಮಾತುಗಳಿಂದ ಸಿಟ್ಟಾಗಿದ್ದ ಗೆಳೆಯರು ಪ್ರಜ್ವಲ್ ಮೇಲೆ ಲಾಂಗ್ ಜಳಪಿಸುತ್ತಾರೆ. ಸ್ನೇಹಿತರ ಮೆಚ್ಚಿನ ಏಟಿಗೆ ಪ್ರಜ್ವಲ್ ಸಾವನ್ನಪ್ಪಿದ್ದಾನೆ.

ಈ ಇನ್’ಸ್ಟಾಗ್ರಾಮ್ ಕಾರಣದ ಕೊಲೆ (murder) ವಿಚಾರ ಪೊಲೀಸರು ತನಿಖೆ ನಡೆಸಿದಾಗ ಬಯಲಾಗಿದೆ. ಪ್ರಜ್ವಲ್ ಇದ್ದ ಓಣಿಯವರೇ ಆತನನ್ನು ಕೊಂದು ಮುಗಿಸಿದ್ದಾರೆ ಎಂಬ ಸತ್ಯ ಬಹಿರಂಗವಾಗಿದೆ. ಸದ್ಯ ಇನ್’ಸ್ಟಾಗ್ರಾಮ್ ನಿಂದ ಯುವಕನ ಪ್ರಾಣವೇ ಹೋಯಿತು. ಯುವಕನ ಮನೆಯವರು ಕಣ್ಣೀರಿನಿಂದ ಕೈತೊಳೆಯುವಂತಾಯಿತು.

 

ಇದನ್ನು ಓದಿ: 2 ಸಾವಿರದ ನೋಟು ವಿನಿಮಯಕ್ಕೆ‌ ಗಡುವು ವಿಸ್ತರಣೆ; ಹಾಗಾದ್ರೆ ಇನ್ನೆಷ್ಟು ದಿನವಿದೆ ಕಾಲಾವಕಾಶ ?

You may also like

Leave a Comment