Uttar Pradesh crime: ಉತ್ತರಪ್ರದೇಶದ (Uttar Pradesh)ಅಯೋಧ್ಯೆಯ ಶಾಲೆಯೊಂದರಲ್ಲಿ(School)ಶಾಲೆಯ ಪ್ರಾಂಶುಪಾಲನೊಬ್ಬ(Principal)ಅಪ್ರಾಪ್ತ ಬಾಲಕಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಘಟನೆ ವರದಿಯಾಗಿದೆ.ಸೆಪ್ಟೆಂಬರ್ 16 ರಂದು ಉತ್ತರ ಪ್ರದೇಶದ ಅಯೋಧ್ಯೆಯ ಶಾಲೆಯೊಂದರಲ್ಲಿ ಶಾಲೆಯ ಪ್ರಾಂಶುಪಾಲ ರಿಜ್ವಾನ್ ಅಹ್ಮದ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ 10 ವರ್ಷದ ಬಾಲಕಿಯ ಖಾಸಗಿ ಅಂಗಗಳನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.ಬಾಬಾ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ರುದೌಲಿ ತಹಸಿಲ್ ಪ್ರದೇಶದ ಶಾಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ(Uttar Pradesh crime).
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ಎಲ್ಲರೂ ಶಾಲೆಯಿಂದ ಹೊರ ಹೋದ ಬಳಿಕ, ಬಾಲಕಿಯನ್ನು ಬಲವಂತವಾಗಿ ತರಗತಿಯೊಳಗೆ ಕರೆದೊಯ್ದು ಪ್ರಾಂಶುಪಾಲ, ಒಳಗಿನಿಂದ ಬಾಗಿಲು ಹಾಕಿ ಅಪ್ರಾಪ್ತ ಬಾಲಕಿಯ ಬಟ್ಟೆ ತೆಗೆಸಿ, ಆಕೆಯ ಖಾಸಗಿ ಅಂಗಗಳನ್ನು ಮುಟ್ಟಿದ್ದು, ಈ ಹೇಯ ಕೃತ್ಯದಿಂದ ಹೆದರಿಂದ ಬಾಲಕಿ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾಳೆ. ಈ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಪ್ರಾಂಶುಪಾಲ ಬಾಲಕಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಮೊದಮೊದಲು ಮಗಳು ಶಾಲೆಗೆ ಹೋಗುವುದಕ್ಕೆ ನಿರಾಕರಿಸಿದಾಗ ಪೋಷಕರು ಮಗಳು ಅಸ್ವಸ್ಥಳಾಗಿ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾಳೆ ಎಂದು ಭಾವಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಶಾಲೆಗೆ ಹೋಗುವಂತೆ ಪೋಷಕರು ಒತ್ತಾಯಿಸಿದಾಗ ಬಾಲಕಿ ಘಟನೆಯ ಬಗ್ಗೆ ವಿವರಿಸಿದ್ದಾಳೆ. ನಂತರ ಬಾಲಕಿಯ ತಂದೆ ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಿನ್ಸಿಪಾಲ್ ವಿರುದ್ಧ ದೂರು ನೀಡಿದ್ದು, ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಾಂಶುಪಾಲರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Murder Case: ಕೇವಲ 30 ರೂ ಗೆ ಮೂವರ ನಡುವೆ ನಡೆಯಿತು ಜಗಳ- ಕೊನೆಗೆ 17 ವರ್ಷದ ಹುಡುಗನ ಕೊಲೆಯೊಂದಿಗೆ ಅಂತ್ಯ
