Disease X: ಕೊರೋನಾ ಸೋಂಕು ಸಂಪೂರ್ಣ ಜಗತ್ತನ್ನೇ ತಟಸ್ಥ ಮಾಡಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು. ಇನ್ನೇನು ಕೊರೋನ ಭಯದಿಂದ ಚೇತರಿಕೆ ಕಾಣುವಷ್ಟರಲ್ಲಿ ಜನರು ಮತ್ತೊಮ್ಮೆ ಜೀವ ಕೈಯಲ್ಲಿ ಹಿಡಿದಿಟ್ಟುಕೊಳ್ಳುವ ಪರಿಸ್ಥಿತಿಯ ಮುನ್ಸೂಚನೆ ದೊರೆತಿದೆ. ಹೌದು, ಕೋವಿಡ್ ಸೋಂಕನ್ನೂ ಮೀರಿಸುವಂತಹ ಭಯಾನಕ ಕಾಯಿಲೆಯ ಭೀತಿ ಈಗ ಎಲ್ಲೆಡೆ ಶುರುವಾಗಿದೆ. ಅದಲ್ಲದೆ ಈ ಕಾಯಿಲೆಯಿಂದ 5 ಕೋಟಿ ಜನರು ಸಾಯುವ ಭೀತಿ ಎದುರಾಗಿದೆ.
2020ರಲ್ಲಿ ಇಡೀ ಜಗತ್ತನ್ನೇ ನಡುಗಿಸಿಬಿಟ್ಟಿದ್ದ ಕೋವಿಡ್‌ಗೆ 70 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈಗ ಮತ್ತೊಂದು ಸಾಂಕ್ರಾಮಿಕವನ್ನು ಎದುರಿಸುವ ಧೈರ್ಯ ಜನಸಾಮಾನ್ಯರಲ್ಲಿಲ್ಲ. ಅಂಥದ್ರಲ್ಲಿ ಮತ್ತೊಂದು ಭಯಾನಕ ಕಾಯಿಲೆ ಆವರಿಸಿಕೊಳ್ಳುವ ಭೀತಿಯೀಗ ಎದುರಾಗಿದೆ. ಇದೀಗ ತಜ್ಞರ ಪ್ರಕಾರ ಇದನ್ನು 1918-1920ರ ಅಪಾಯಕಾರಿ ಸ್ಪ್ಯಾನಿಷ್ ಜ್ವರದೊಂದಿಗೆ ಹೋಲಿಸಿದ್ದಾರೆ.
‘ವಿಶ್ವ ಆರೋಗ್ಯ ಸಂಸ್ಥೆ’ ಇದಕ್ಕೆ ಡಿಸೀಸ್ ಎಕ್ಸ್ (Disease x) ಎಂದು ಹೆಸರಿಸಿದೆ. WHO ವೈದ್ಯಕೀಯ ತಜ್ಞರು ಈ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ರೋಗ ಬಂದರೆ 20 ಪಟ್ಟು ಹೆಚ್ಚು ಸಾವುಗಳು ಸಂಭವಿಸುತ್ತವೆ ಎಂದು ಹೇಳಿದ್ದಾರೆ.
ಸರಳ ಭಾಷೆಯಲ್ಲಿ ಹೇಳುವುದಾದರೆ ಯಾವುದೇ ಜೀವಿಗಳೊಳಗಿನ ಆನುವಂಶಿಕ ವಸ್ತುವಿನ ಬದಲಾವಣೆಗಳು ಎಂದು ಕರೆಯಲಾಗುತ್ತದೆ. ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹಾದುಹೋದಾಗ, ಅದು ಸ್ವತಃ ಲಕ್ಷಾಂತರ ಪ್ರತಿಗಳನ್ನು ಮಾಡುತ್ತದೆ. ಪ್ರತಿಯೊಂದು ಪ್ರತಿಯು ಇತರ ಪ್ರತಿಗಿಂತ ಭಿನ್ನವಾಗಿರುತ್ತದೆ. ಇದರಿಂದಾಗಿ ಸ್ವಲ್ಪ ಸಮಯದ ನಂತರ ಹೊಸ ತಳಿ ಹೊರಹೊಮ್ಮುತ್ತದೆ. ಅದಕ್ಕಾಗಿಯೇ ವೈರಸ್‌ಗಳು ಯಾವಾಗಲೂ ತಮ್ಮ ವಿಭಿನ್ನ ರೂಪಗಳನ್ನು ಬದಲಾಯಿಸುತ್ತಲೇ ಇರುತ್ತವೆ.
ಬ್ರಿಟನ್‌ನ ಲಸಿಕೆ ಕಾರ್ಯಪಡೆಯ ಅಧ್ಯಕ್ಷರಾದ ಡೇಮ್ ಕೇಟ್ ಬಿಂಗ್‌ಹ್ಯಾಮ್, ಈ ಸಾಂಕ್ರಾಮಿಕ ರೋಗವು ಕನಿಷ್ಠ 50 ಮಿಲಿಯನ್ ಜನರನ್ನು ಕೊಲ್ಲಬಹುದು ಎಂದು ಅಂದಾಜಿಸಿದ್ದಾರೆ. ನಿಜಕ್ಕೂ ಇದು ಆತಂಕಕಾರಿ ಸಂಗತಿ. ಹಾಗಾಗಿ ಹೊಸ ಕಾಯಿಲೆಯನ್ನು ಎದುರಿಸಲು ಜನಸಾಮಾನ್ಯರು ಸಜ್ಜಾಗಬೇಕು. ಬ್ರಿಟನ್‌ನ ಲಸಿಕೆ ಕಾರ್ಯಪಡೆಯ ಮುಖ್ಯಸ್ಥ ಡೇಮ್ ಕೇಟ್ ಬಿಂಗ್‌ಹ್ಯಾಮ್ ಪ್ರಕಾರ , ಈ ರೋಗವನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ. ಏಕೆಂದರೆ ಇದು ಕೋವಿಡ್ -19 ಗಿಂತ ಹೆಚ್ಚು ಮಾರಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಾಂಕ್ರಾಮಿಕ ರೋಗವು ಎಷ್ಟು ಅಪಾಯಕಾರಿ ಎಂದರೆ ಭೂಮಿಯ ಮೇಲೆ ಒಂದೇ ಒಂದು ವೈರಸ್ ಉಳಿದರೂ ಅದು ದುಪ್ಪಟ್ಟಾಗುತ್ತಲೇ ಹೋಗುತ್ತದೆ. ಈ ವೈರಸ್‌ಗಳು ಬಹಳ ವೇಗವಾಗಿ ರೂಪಾಂತರಗೊಳ್ಳುವುದರಿಂದ ಇದು ಸಂಭವಿಸುತ್ತದೆ. 1918-19ರಲ್ಲಿ ಸ್ಪ್ಯಾನಿಷ್ ಫೀವರ್ ಎಂಬ ಸಾಂಕ್ರಾಮಿಕ ರೋಗವಿತ್ತು. ಅದರಿಂದಾಗಿ ಜಗತ್ತಿನಾದ್ಯಂತ 5 ಕೋಟಿ ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು. ಡಿಸೀಸ್ ಎಕ್ಸ್ ಕೂಡ ಅದನ್ನೇ ಹೋಲುತ್ತದೆ.
X ರೋಗಕ್ಕೆ ಲಸಿಕೆ ಎಂದರೆ, ಈ ಡಿಸೀಸ್ ಎಕ್ಸ್ ಬರುವ ಮೊದಲೇ ಬ್ರಿಟಿಷ್ ವಿಜ್ಞಾನಿಗಳು ಅದನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ತಿದ್ದಾರೆ. ಅದಕ್ಕಾಗಿಯೇ ಅವರು ಲಸಿಕೆ ತಯಾರಿಸಲು ಪ್ರಾರಂಭಿಸಿದರು. ಇದಲ್ಲದೆ ಅವರು 25 ರೀತಿಯ ವೈರಸ್‌ಗಳನ್ನು ಸಹ ಅಧ್ಯಯನ ಮಾಡುತ್ತಿದ್ದಾರೆ. ಇದು ಪ್ರಾಣಿಗಳಲ್ಲಿ ಕಂಡುಬರುವ ವೈರಸ್‌ಗಳನ್ನು ಸಹ ಒಳಗೊಂಡಿದೆ. ಇದು ಮನುಷ್ಯರಿಗೂ ಹರಡಬಹುದು ಎನ್ನಲಾಗಿದೆ.
