KYC fraud: ಗ್ರಾಹಕರೇ ಗಮನಿಸಿ!! ನೀವೂ ಕೂಡ ಹೀಗೆ ಯಾಮಾರಿದರೆ ನಿಮ್ಮ ಖಾತೆ ಖಾಲಿ ಆಗೋದು ಗ್ಯಾರಂಟಿ!! ಇತ್ತಿಚಿನ ದಿನಗಳಲ್ಲಿ ವಂಚಕರುಮೋಸ (fraud)ಮಾಡಲು ನಾನಾ ಬಗೆಯ ತಂತ್ರಗಳನ್ನು ಬಳಕೆ ಮಾಡುತ್ತಾರೆ. ಹೇಳಿ ಕೇಳಿ ಇದು ಡಿಜಿಟಲ್ ಯುಗ!! ಕೇವಲ ಮೊಬೈಲ್ (Mobile)ಎಂಬ ಮಾಯಾವಿ ಮೂಲಕ ಕ್ಷಣ ಮಾತ್ರದಲ್ಲಿಯೇ ಎಲ್ಲ ವ್ಯವಹಾರಗಳನ್ನು ಮಾಡಲು ಸಾಧ್ಯವಾಗುತ್ತದೆ. ಇದೀಗ, ಖದೀಮರು ಹಣ ಎಗರಿಸಲು ಓಟಿಪಿಯ(OTP)ಮೊರೆ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಇದೀಗ, ಪುತ್ತೂರು(Puttur)ತಾಲೂಕಿನ ತಿಂಗಳಾಡಿಯಲ್ಲಿ ಮೊಬೈಲ್ಗೆ ಕರೆ ಮಾಡಿದ ವ್ಯಕ್ತಿಗೆ ಒಟಿಪಿ ಹೇಳುವ ಮೂಲಕ ಕೂಲಿ ಕಾರ್ಮಿಕರ ರೊಬ್ಬರು ತನ್ನ ಖಾತೆಯಲ್ಲಿದ್ದ 1 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.ಕೂಲಿ ಕಾರ್ಮಿಕರೊಬ್ಬರ ಮೊಬೈಲ್ಗೆ ಸೆ.30ರಂದು ನಿಮ್ಮ ಅಕೌಂಟ್ ನಂಬರ್ಗೆ ತಕ್ಷಣವೇ ಕೆವೈಸಿ (KYC fraud)ಮಾಡಬೇಕು ಎಂಬ ಸಂದೇಶ ಬಂದಿದ್ದು, ಅದರಲ್ಲಿ ಕೆಳಗೆ ಕೆನರಾ ಎಂದು ಬರೆಯಲಾಗಿತ್ತು. ಈ ವಿಚಾರವನ್ನು ಅವರು ಮಗನಿಗೆ ತಿಳಿಸಿದ್ದು, ಅದಕ್ಕೆ ಮಗ ಬ್ಯಾಂಕ್ಗೆ ಹೋಗಿ ವಿಚಾರಿಸಿದರೆ ಅವರು ಕೆವೈಸಿ ಮಾಡಿಕೊಡುತ್ತಾರೆ ಎಂದಿದ್ದಾನೆ.
ಅದೇ ದಿನ ಮಧ್ಯಾಹ್ನ ವೇಳೆಗೆ ಕರೆ ಬಂದಿದ್ದು, ಕನ್ನಡದಲ್ಲಿ ಮಾತನಾಡಿದ ವ್ಯಕ್ತಿಯೊಬ್ಬ ಅಕೌಂಟ್ ನಂಬರ್ ಹೇಳಿದ್ದಾನೆ. ಅದು ನನ್ನ ಅಕೌಂಟ್ ಎಂದು ಕೂಲಿ ಕಾರ್ಮಿಕ ಹೇಳಿದ್ದು, ಈ ಸಂದರ್ಭ ಕರೆ ಮಾಡಿದ ವ್ಯಕ್ತಿ ನಿಮ್ಮ ಮೊಬೈಲ್ಗೆ ಒಟಿಪಿ ಬಂದಿದ್ದು, ಅದನ್ನು ಹೇಳಿ ಎಂದು ಹೇಳಿದ್ದಾನೆ. ಕೂಲಿ ಕಾರ್ಮಿಕ ತಕ್ಷಣವೇ ಒಟಿಪಿ ನಂಬರ್ ಹೇಳಿದ್ದು, ಇದಾದ ಕೆಲವೇ ಕ್ಷಣಗಳಲ್ಲಿ ಅಕೌಂಟ್ನಲ್ಲಿದ್ದ 1 ಲಕ್ಷ ರೂ. ಖಾಲಿ ಆಗಿರುವ ಬಗ್ಗೆ ಮೊಬೈಲಿಗೆ ಸಂದೇಶ ಬಂದಿದೆ. ಕೂಲಿ ನಾಲಿ ಮಾಡಿ ಸಂಪಾದನೆ ಮಾಡಿದ ಹಣ ಕೂಡ ಖದೀಮರ ಕಿಸೆಗೆ ಬಿದ್ದಿದ್ದು ಒಟ್ಟಿನಲ್ಲಿ ಕೂಲಿ ಕಾರ್ಮಿಕ ಕೆವೈಸಿ ಹೆಸರಲ್ಲಿ ಖಾತೆ ಖಾಲಿ ಮಾಡಿಕೊಂಡು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಈತನಿಗೆ ಹಳೆ ಮೊಬೈಲ್ ಕೊಟ್ರೆ ಗಿಫ್ಟ್ ಆಗಿ ಸಿಗುತ್ತೆ ಕೋಳಿಮರಿ – ಹೀಗೊಂದು ವಿಶಿಷ್ಟ ಪರಿಸರ ಜಾಗೃತಿ
