Home » Ahmedabad: ಅರೆ…! ಅಜ್ಜನ ಬ್ಯಾಂಕ್ ಖಾತೆಯಿಂದ 13 ಲಕ್ಷ ನಾಪತ್ತೆಯಂತೆ! ವಿಚಾರಣೆ ವೇಳೆ ಬಯಲಾಯ್ತು ಶಾಕಿಂಗ್ ಮಾಹಿತಿ !

Ahmedabad: ಅರೆ…! ಅಜ್ಜನ ಬ್ಯಾಂಕ್ ಖಾತೆಯಿಂದ 13 ಲಕ್ಷ ನಾಪತ್ತೆಯಂತೆ! ವಿಚಾರಣೆ ವೇಳೆ ಬಯಲಾಯ್ತು ಶಾಕಿಂಗ್ ಮಾಹಿತಿ !

1 comment
Ahmedabad

Ahmedabad: ಮಕ್ಕಳು ಮಾಡಿದ ತಪ್ಪಿಗೆ ಹೆತ್ತವರು ನೀಡುವ ಸಲುಗೆ ಒಂದು ರೀತಿಯಲ್ಲಿ ಕಾರಣ ಅನ್ನುವುದು ತಪ್ಪಲ್ಲ. ಉದಾಹರಣೆಗೆ ಪೋಷಕರು ಮಕ್ಕಳಿಗೆ ಮೊಬೈಲ್ ಬಳಸಲು ಹೆಚ್ಚು ಸಲುಗೆ ನೀಡಬಾರದು ಯಾಕೆಂದರೆ ಮುಂದೆ ಅದೇ ಮೊಬೈಲ್ ನಿಂದ ಆಪತ್ತು ಕಟ್ಟಿಟ್ಟ ಬುತ್ತಿ ಆಗಲಿದೆ. ಇದೀಗ ಗುಜರಾತ್‌ನ ದಾಹೋದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದೇ ರೀತಿಯ ಪ್ರಕರಣ ನಡೆದಿದೆ(Ahmedabad).

ಮಾಹಿತಿಯ ಪ್ರಕಾರ, ಬಾಲಕನ ಅಜ್ಜ ನಿವೃತ್ತ ಸರ್ಕಾರಿ ಅಧಿಕಾರಿ. ಇವರ ಬ್ಯಾಂಕ್ ಖಾತೆಯಿಂದ ಸತತವಾಗಿ 13 ಲಕ್ಷ ರೂಪಾಯಿ ಕಾಣೆಯಾಗಿದೆ. ಈ ಬಗ್ಗೆ ಸಹಾಯಕ್ಕಾಗಿ ದಾಹೋದ್ ಸೈಬರ್ ಸೆಲ್‌ಗೆ ಮನವಿ ಮಾಡಿದಾಗ ಆಘಾತಕಾರಿ ಮಾಹಿತಿ ಬಂದಿದೆ. ಈ ಹಣವನ್ನು ಆನ್‌ಲೈನ್ ಗೇಮಿಂಗ್ ( Online Game) ಮತ್ತು ಮೊಬೈಲ್ ಫೋನ್‌ಗಳ ಖರೀದಿಗೆ ಬಳಸಲಾಗುತ್ತಿತ್ತು. ವಿಚಾರಣೆ ವೇಳೆ ಇದೆಲ್ಲಾ ಖರೀದಿ ಮಾಡಿದ್ದು ಬೇರೆ ಯಾರೂ ಅಲ್ಲ ಅವರ ಸ್ವಂತ ಮೊಮ್ಮಗ ಎಂಬುದು ತಿಳಿದುಬಂದಿದೆ.

ಹೌದು, ಆನ್‌ಲೈನ್ ಚಟದಿಂದ ಹಣವನ್ನು ವ್ಯಯ ಮಾಡಿರುವುದಾಗಿ ಮತ್ತು ಅನಧಿಕೃತ ವಹಿವಾಟಿಗೆ ತನ್ನ ಅಜ್ಜನ ಮೊಬೈಲ್ ಫೋನ್ ಬಳಸಿದ್ದಾಗಿ ಬಾಲಕ ಒಪ್ಪಿಕೊಂಡಿದ್ದಾನೆ. ಸದ್ಯ ಬಾಲಕ ತನ್ನ ಸ್ನೇಹಿತನ ಮನೆಯಲ್ಲಿ ಬಚ್ಚಿಟ್ಟಿದ್ದ ಗೇಮ್ ಪಾಯಿಂಟ್‌ಗಳು, ಕ್ರಿಕೆಟ್ ಕಿಟ್ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಖರೀದಿಸಲು 13 ಲಕ್ಷ ರೂಪಾಯಿಗಳನ್ನು ವ್ಯರ್ಥ ಮಾಡಿದ್ದಾನೆ. ಆದರೆ ಅವನ ಕುಟುಂಬಕ್ಕೆ ಈ ಬಗ್ಗೆ ಏನೂ ತಿಳಿದಿಲ್ಲ.

ಸದ್ಯ ಬಾಲಕನು ಆನ್‌ಲೈನ್ ಗೇಮಿಂಗ್‌ಗೆ ಚಟದಿಂದ ಗುಣಮುಖನಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪ್ರಸ್ತುತ ಈ ವಿಷಯ ತನಿಖೆಯಲ್ಲಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಇದನ್ನೂ ಓದಿ: Menstrual leave: ಈ ಕಾಲೇಜಿನ ಹೆಣ್ಣುಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್ : ಋತುಸ್ರಾವದ ರಜೆ ಘೋಷಣೆ ಆಡಳಿತ ಸಂಸ್ಥೆ

You may also like

Leave a Comment