Madyapradesh: ಮಧ್ಯಪ್ರದೇಶದ (Madyapradesh)ಮೊವ್ ಪಟ್ಟಣದ ಬಳಿ ಶಾಲಾ ಬಸ್ ಪಲ್ಟಿಯಾದ ಘಟನೆ ಭಾನುವಾರ ನಡೆದಿದ್ದು, ಈ ವೇಳೆ 12 ವಿದ್ಯಾರ್ಥಿಗಳು (Students)ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಇಂದೋರ್ನಿಂದ ಮಹೇಶ್ವರಕ್ಕೆ ಬಸ್ ತೆರಳುತ್ತಿದ್ದ ಸಂದರ್ಭ ಬಸ್ ಪಲ್ಟಿಯಾದ ಘಟನೆ ನಡೆದಿದೆ ಎನ್ನಲಾಗಿದೆ.ಈ ಘಟನೆಯ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿರುವ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇಂದೋರ್ ಮೂಲದ ಖಾಸಗಿ ಶಾಲೆಯ ಎಂಟು ಬಸ್ಗಳು ಭಾನುವಾರ ಬೆಳಗ್ಗೆ ಮೊವ್ ಮತ್ತು ಜಾಮ್ ಘಾಟ್ ಮೂಲಕ ಮಹೇಶ್ವರಕ್ಕೆ ತೆರಳುತ್ತಿದ್ದವು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಬಸ್ಗಳು ಜಾಮ್ ಘಾಟ್ ಮೂಲಕ ತೆರಳಿದ ಸಂದರ್ಭ ಬಸ್ ಒಂದರಲ್ಲಿ ಚಾಲಕ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಇದರಿಂದ 10 ಮತ್ತು 12ನೇ ತರಗತಿಯ 12 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಇಂದೋರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮಂಗಳೂರು: ಮುಸ್ಲಿಂ ಯುವಕನ ಮೇಲೆ ದೈವದ ಆವಾಹನೆ!
