GPS Disaster: ಕೇರಳದ (Kerala)ಕೊಚ್ಚಿಯಲ್ಲಿ ಕಾರೊಂದು ಪೆರಿಯಾರ್ ನದಿಗೆ ಬಿದ್ದ ಘಟನೆ ನಡೆದಿದ್ದು, ಭಾನುವಾರ ಮಧ್ಯರಾತ್ರಿ 12.30ರ ಸುಮಾರಿಗೆ ಕೇರಳದ (Kerala) ಎರ್ನಾಕುಲಂ ಜಿಲ್ಲೆಯ ಗೊತುರುತ್ ಎಂಬಲ್ಲಿ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವೈದ್ಯರು ಸಾವನ್ನಪ್ಪಿದ ಘಟನೆ ನಡೆದಿದೆ. ಜೋರಾಗಿ ಸುರಿಯುತ್ತಿದ್ದ ಮಳೆಯಲ್ಲಿ ಮಾರ್ಗ ನೋಡಲು ಜಿಪಿಎಸ್ (GPS) ಮೋರೆ ಹೋದ ಇಬ್ಬರು ವೈದ್ಯರು ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಘಟನೆ ಕೊಚ್ಚಿಯಲ್ಲಿ (kochi) ನಡೆದಿದೆ.
ಸುರಿಯುತ್ತಿದ್ದ ಮಳೆಯ ನಡುವೆ ಅಪರಿಚಿತ ರಸ್ತೆಯಲ್ಲಿ ಮಾರ್ಗದರ್ಶನಕ್ಕಾಗಿ ವೈದ್ಯರು ಜಿಪಿಎಸ್ ಮೊರೆ ಹೋಗಿದ್ದರು. ಜಿಪಿಎಸ್ ನಕ್ಷೆಯಲ್ಲಿ ಮಾರ್ಗವನ್ನು ಬದಲಿಸಲು ಸೂಚನೆ ಬಂದ ಹಿನ್ನೆಲೆ ಅದರಂತೆ ಮುಂದುವರಿದಿದ್ದಾರೆ. ಈ ವೇಳೆ ವೇಗದಲ್ಲಿದ್ದ ಕಾರು ನೇರವಾಗಿ ತುಂಬಿ ಹರಿಯುತ್ತಿದ್ದ ಹೊಳೆಯಲ್ಲಿ ಮುಳುಗಿದೆ. ಕಾರಿನಲ್ಲಿದ್ದ ಡಾ.ಅದ್ವೈತ್ ಹಾಗೂ ಡಾ. ಅಜ್ಮಲ್ ಆಸೀಫ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇದೇ ಕಾರಿನಲ್ಲಿದ್ದ ಇತರ ಮೂವರು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ಮೃತ ದುರ್ದೈವಿಗಳನ್ನು ಡಾ.ಅದ್ವೈತ್ (Dr.advait) ಹಾಗೂ ಡಾ.ಅಜ್ಮಲ್ ಆಸೀಫ್ (Dr. ajmal asif) ಎನ್ನಲಾಗಿದ್ದು, ಇದೇ ವೇಳೆ ಇನ್ನೂ ಮೂವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಅದ್ವೈತ್ ಹಾಗೂ ಇನ್ನುಳಿದವರು ಕೊಚ್ಚಿಯಿಂದ ಕೊಡಂಗಲ್ಲೂರಿಗೆ ಹಿಂತಿರುಗುತ್ತಿದ್ದರೆನ್ನಲಾಗಿದೆ. ಅದ್ವೈತ್ ಹುಟ್ಟುಹಬ್ಬದ ನಿಮಿತ್ತ ಈ ಮಂದಿ ಶಾಪಿಂಗ್‌ಗೆ ತೆರಳಿದ್ದರು ಎನ್ನಲಾಗಿದೆ.
ಕಾರು ಚಲಾಯಿಸುತ್ತಿದ್ದ ಯುವಕ ಗೂಗಲ್ ಮ್ಯಾಪ್ ತೋರಿಸಿದ ಮಾರ್ಗದಲ್ಲಿ ಸಾಗುತ್ತಿದ್ದ. ಎಡ ತಿರುವಿನಲ್ಲಿ ಕಾರನ್ನು ತಿರುಗಿಸಬೇಕಾಗಿದ್ದರೂ ಆಕಸ್ಮಿಕವಾಗಿ ಮುಂದೆ ಹೋಗಿದ್ದರಿಂದ ಕಾರು ನದಿಗೆ ಬಿದ್ದಿದೆ ಎನ್ನಲಾಗಿದೆ. ಇದೇ ಸಂದರ್ಭ ಅಪಘಾತದಿಂದ ಬಚಾವ್ ಆಗಿರುವ ಡಾ.ಗಾಜಿಕ್ ತಬ್ಸಿರ್, ಜಿಪಿಎಸ್ ನೆರವಿನಿಂದ ಮುಂದೆ ಹೋಗುತ್ತಿದ್ದುದ್ದನ್ನು ವಿವರಿಸಿದ್ದಾರೆ. ಪೊಲೀಸರು ಅಪಘಾತ ನಡೆದ ಸ್ಥಳದ ತನಿಖೆ ನಡೆಸುತ್ತಿದ್ದು, ಇಬ್ಬರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Bihar Viral Video:ಪರೀಕ್ಷೆಯಲ್ಲಿ ಫೇಲ್ ; 4 ಅಂತಸ್ತಿನಿಂದ ಹಾರಿದ ಹುಡುಗಿ- ಭಯಾನಕ ವಿಡಿಯೋ ವೈರಲ್
