Home » Mulki : ಮೊಬೈಲ್ ಟವರ್ ಏರಿದ ಭೂಪ ,ಕಾರಣ ಕೇಳಿದ್ರೆ ನಿಮಗೂ ಆಗಬಹುದು ಶಾಕ್!

Mulki : ಮೊಬೈಲ್ ಟವರ್ ಏರಿದ ಭೂಪ ,ಕಾರಣ ಕೇಳಿದ್ರೆ ನಿಮಗೂ ಆಗಬಹುದು ಶಾಕ್!

1 comment
Mulki

Mulki: ಮೂಲ್ಕಿಯಲ್ಲಿ (Mulki)ಅತೀ ಎತ್ತರದ ಮೊಬೈಲ್ ಟವರ್(Mobile Tower)ಏರಿ ಯುವಕನೊಬ್ಬ ಆತಂಕ ಮೂಡಿಸಿದ ಘಟನೆ ಮೂಲ್ಕಿ ಸಮೀಪದ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಟವರ್ ಏರಿದ ವ್ಯಕ್ತಿಯನ್ನು ಬಿಜಾಪುರ ಜೇವರ್ಗಿ ಮೂಲದ ಯುವಕ ಸತೀಶ್ ಎಂದು ಗುರುತಿಸಲಾಗಿದೆ.

ಕೆಲವೊಮ್ಮೆ ಜನರ ಹುಚ್ಚಾಟ ಕಂಡಾಗ ನಮಗೆ ಭೀತಿ ಆಗುವುದು ಸಹಜ. ಬೆಕ್ಕಿಗೆ ಆಟ ಇಲಿಗೆ ಪ್ರಾಣಸಂಕಟ ಎಂಬಂತೆ ಮೊಬೈಲ್ ಟವರ್ ಗೆ ಏರಿದ ವ್ಯಕ್ತಿ ಉಳಿದವರಿಗೆ ಮನರಂಜನೆ ಜೊತೆಗೆ ಭಯ ಮೂಡಿಸಿದೆ. ಸುಮಾರು 100 ಮೀಟರ್ ಕ್ಕಿಂತಲೂ ಎತ್ತರದ ಮೊಬೈಲ್ ಟವರ್ ಏರಿದ ಯುವಕ ಟವರ್ ನ ತುತ್ತ ತುದಿಗೆ ಹೋಗಿ ನಾನಾ ಬಗೆಯ ಸರ್ಕಸ್ ಮಾಡುತ್ತಿದ್ದನಂತೆ. ಇದನ್ನು ಗಮನಿಸಿ ಸ್ಥಳೀಯರು ಮುಲ್ಕಿ ಪೊಲೀಸರಿಗೆ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಮುಲ್ಕಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿ ಮೈಕ್ ಮೂಲಕ ಟವರ್ ಏರಿದವನನ್ನು ಮನವೊಲಿಸಿ ಕೆಲಕ್ಕಿಳಿಯುವಂತೆ ಮಾಡಲು ಹರಸಾಹಸ ಪಟ್ಟರು ಕೂಡ ಸುಮಾರು ನಾಲ್ಕು ತಾಸಿನವರೆಗೆ ಆತ ಕೆಳಗೆ ಇಳಿಯಲಿಲ್ಲ. ಕೊನೆಗೆ ನಾಲ್ಕು ಗಂಟೆಯ ಬಳಿಕ ಕೆಳಗಿಳಿದ ಯುವಕ ನೀಡಿದ ಹೇಳಿಕೆ ಎಲ್ಲರನ್ನು ಅಚ್ಚರಿಗೆ ತಳ್ಳಿದೆ.ಅಷ್ಟಕ್ಕೂ ಆತ ಹೇಳಿದ್ದೇನು ಗೊತ್ತಾ?! ಬಿಜಾಪುರ ಬಾಗಲಕೋಟೆಯಲ್ಲಿ ರಸ್ತೆ ಮತ್ತು ಇನ್ನಿತರ ಸಮಸ್ಯೆಗಳು ಹೆಚ್ಚಿರುವ ಹಿನ್ನಲೆ ಈ ರೀತಿ ಪ್ರತಿಭಟನೆ ಮಾಡುತ್ತಿರುವುದಾಗಿ ಯುವಕ ಹೇಳಿದ್ದಾನಂತೆ. ಒಟ್ಟಿನಲ್ಲಿ ಈ ಯುವಕನ ಹುಚ್ಚಾಟಕ್ಕೆ ಸ್ಥಳಿಯರು ಬೆಚ್ಚಿ ಬಿದ್ದಿದ್ದು ಸುಳ್ಳಲ್ಲ

ಇದನ್ನೂ ಓದಿ: Manipal: Instagram ಪೋಸ್ಟ್ ನೋಡಿ ಬಾರ್‌ನಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ವಿದ್ಯಾರ್ಥಿಗಳನ್ನು ಬಂಧಿಸಿದ ಪೊಲೀಸರು

You may also like

Leave a Comment