Bank Account and Aadhar: ದೇಶದಲ್ಲಿ ಆಧಾರ್ ಕಾರ್ಡ್ ಅನ್ನು ಪ್ರಮುಖ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತಿದ್ದು, ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಆಧಾರ್ ಕಾರ್ಡ್ (Aadhar Card)ಅನ್ನು ಭಾರತದ ನಾಗರಿಕರಿಗೆ ವಿತರಣೆ ಮಾಡುತ್ತದೆ. ಆಧಾರ್ 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಹೆಚ್ಚಿನ ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ್ ಅತ್ಯವಶ್ಯಕ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿರುವಂತದ್ದೇ!!.ಆದರೆ, ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ಗೆ ಅಪ್ಡೇಟ್ ಮಾಡುವುದು ಹೇಗೆ ಗೊತ್ತಾ?
ಆಧಾರ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆಯಿದ್ದಲ್ಲಿ ಅದನ್ನು ನವೀಕರಿಸಲು ಯುಐಡಿಎಐ ಆನ್ಲೈನ್ ಮತ್ತು ಆಫ್ಲೈನ್ನಲ್ಲಿ ಅನುವು ಮಾಡಿಕೊಟ್ಟಿದೆ. ಆದರೆ ಮೊಬೈಲ್ ಸಂಖ್ಯೆಯನ್ನು ನವೀಕರಿಸುವುದರ ಜೊತೆಗೆ ಇನ್ನೂ ಕೆಲವು ಬದಲಾವಣೆಗಳನ್ನು ಆನ್ಲೈನ್ ಮೂಲಕ ಮಾಡಲು ಸಾಧ್ಯವಿಲ್ಲ. ಮನೆಯಲ್ಲಿ ಕುಳಿತು ಮೊಬೈಲ್ ಸಂಖ್ಯೆಯನ್ನು ಅಪ್ ಡೇಟ್ ಮಾಡಲು ನೀವು ಪೋಸ್ಟ್ ಮ್ಯಾನ್ ನೆರವನ್ನು ಪಡೆಯಬೇಕಾಗುತ್ತದೆ. ಪೋಸ್ಟ್ ಮ್ಯಾನ್ ನಿಮ್ಮ ಮನೆಗೆ ಬಂದು ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಣ ಮಾಡುತ್ತಾರೆ.
* ಈ ಸೇವೆ ಪಡೆಯಲು, ನೀವು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಸರ್ಕಾರಿ ಪೋರ್ಟಲ್ ಗೆ ಭೇಟಿ ನೀಡಬೇಕು.
* ಆ ಬಳಿಕ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು, ಪೋರ್ಟಲ್ನಲ್ಲಿ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವಾ ವಿನಂತಿ ಫಾರ್ಮ್ ಅನ್ನು ಭರ್ತಿ ಮಾಡಬೇಕು.
* ಆನಂತರ , ನೀವು ಆಧಾರ್ ಮೊಬೈಲ್ ಸಂಖ್ಯೆ ಆಯ್ಕೆಯನ್ನು ಆರಿಸಬೇಕು.
* ಈಗ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿಕೊಂಡು ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
* ಈಗ ಹತ್ತಿರದ ಶಾಖೆಯಿಂದ ಕರೆ ಬರಲಿದ್ದು, ಬಳಿಕ ಪೋಸ್ಟ್ ಮ್ಯಾನ್ ಮನೆಗೆ ಬರುತ್ತಾರೆ. ಮೊಬೈಲ್ ಅಪ್ಡೇಟ್ ಮಾಡಲು 50 ರೂ.ಶುಲ್ಕ ನೀಡಬೇಕು.
* ಒಂದು ವೇಳೆ, ಕರೆ ಬರದಿದ್ದರೆ, 155299 ಕರೆ ಮಾಡಬೇಕು.
ಮೇಲೆ ತಿಳಿಸಿದ ಸುಲಭ ವಿಧಾನದ ಮೂಲಕ ಮನೆಯಲ್ಲೇ ಕುಳಿತು ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಅಪ್ಡೇಟ್ ಮಾಡಬಹುದು.
ಇದನ್ನು ಓದಿ: Operation: ಹೊಟ್ಟೆನೋವು ತಾಳಲಾರದೆ ಆಸ್ಪತ್ರೆಗೆ ನಡೆದ ಹುಡುಗ – ಹೊಟ್ಟೆಯಲ್ಲಿತ್ತು ಹೆಣ್ಣಿನ ‘ಆ ಅಂಗ’
