Shepherd wins Lottery: ಕುರುಡು ಕಾಂಚಾಣದ ವ್ಯಾಮೋಹ ಯಾರಿಗಿಲ್ಲ ಹೇಳಿ!! ಹಣ ಮಾಡಬೇಕು, ಶ್ರೀಮಂತರಾಗಬೇಕು ಎಂದು ಎಲ್ಲರೂ ಬಯಸುವುದು ಸಹಜ.ಆದ್ರೆ, ಅದೃಷ್ಟ ಲಕ್ಷ್ಮೀ ಸುಲಭವಾಗಿ ಎಲ್ಲರ ಕೈ ಹಿಡಿಯುವುದಿಲ್ಲ. ನಸೀಬು ಚೆನ್ನಾಗಿದ್ದರೆ ಮಾತ್ರ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ. ಅದಕ್ಕೆ ನಿದರ್ಶನ ಅನ್ನೋ ಹಾಗೆ ಇಂಟ್ರೆಸ್ಟಿಂಗ್ ಕಹಾನಿಯೊಂದು ವರದಿಯಾಗಿದೆ.
ಅದೃಷ್ಟ ಲಕ್ಷ್ಮೀ ಯಾವಾಗ ಯಾರನ್ನು ಕೈ ಹಿಡಿಯಲಿದೆ ಎಂದು ಹೇಳಲು ಸಾಧ್ಯವಿಲ್ಲ. ಇದೇ ರೀತಿ ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲೆಯ ಕೂಲಿ ಕಾರ್ಮಿಕನೊಬ್ಬನಿಗೆ ರಾತ್ರೋ ರಾತ್ರಿ ಅದೃಷ್ಟ ಕೈ ಹಿಡಿದಿದೆ. ಮೇಕೆ ಮೇಯಿಸಲು ಹೋಗಿದ್ದ ಮೇಕೆ ಮೇಯಿಸಿ ಹಿಂತಿರುಗಿದಾಗ ಲಕ್ಷಾಧಿಪತಿಯಾದ (Shepherd wins Lottery)ಘಟನೆ ವರದಿಯಾಗಿದೆ.
ಕಳೆದ ಹತ್ತು ವರ್ಷಗಳಿಂದ ಈತ ಲಾಟರಿ ಟಿಕೆಟ್’ಗಳನ್ನು ಖರೀದಿ ಮಾಡುತ್ತಿದ್ದನಂತೆ. ಅದೇ ರೀತಿ ಭಾನುವಾರ 40 ರೂಪಾಯಿ ಸಾಲ ಮಾಡಿ ಲಾಟರಿ ಟಿಕೆಟ್ ಖರೀದಿ ಮಾಡಿದ್ದು, ಮಧ್ಯಾಹ್ನದ ವೇಳೆಗೆ ಬಂಪರ್ ಲಾಟರಿ ಹೊಡೆದಿದೆ. ಮಾಧ್ಯಮ ವರದಿಗಳ ಅನುಸಾರ, ಪಶ್ಚಿಮ ಬಂಗಾಳದ ಪೂರ್ವ ಬರ್ದಮನ್’ನಲ್ಲಿ ಜಿಲ್ಲೆಯಲ್ಲಿ ವಾಸಿಸುವ ಮೇಕೆ ಮೇಯಿಸಲು ಹೋಗಿದ್ದ ಕೂಲಿ ಕಾರ್ಮಿಕ ಭಾಸ್ಕರ್ ಮಜಿಗೆ ಅದೃಷ್ಟ ಒಲಿದಿದ್ದು, ಈ ಕಾರ್ಮಿಕ, ಕೆಲಸ ಮುಗಿಸಿ ಹಿಂತಿರುಗುವಷ್ಟರಲ್ಲಿ ಲಾಟರಿ ಹೊಡೆದಿದ್ದು ಲಕ್ಷಾಧಿಪತಿಯಾಗಿದ್ದಾನೆ. ಇನ್ನು ಹಣ ಬಂದಿದ್ದೆ ತಡ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಹಣಕ್ಕಾಗಿ ಮನೆ ಮುಂದೆ ಇನ್ನೂ ಜನ ಸಾಗರೋಪಾತಿಯಲ್ಲಿ ನಿಂತರೂ ಅಚ್ಚರಿಯಿಲ್ಲ.
ಇದನ್ನು ಓದಿ: LPG Rate Hike: ಹಣದುಬ್ಬರ ಪರಿಣಾಮ, ಗ್ಯಾಸ್ ಬೆಲೆ ರೂ.3000 ಕ್ಕೆ ಏರಿಕೆ
