Home » Malaria: ‘ಮಲೇರಿಯಾ’ ಸದೆಬಡಿಯಲು ಬಂತು ಹೊಸ ಅಸ್ತ್ರ- WHO ಕೊಡ್ತು ಸಖತ್ ಗುಡ್ ನ್ಯೂಸ್

Malaria: ‘ಮಲೇರಿಯಾ’ ಸದೆಬಡಿಯಲು ಬಂತು ಹೊಸ ಅಸ್ತ್ರ- WHO ಕೊಡ್ತು ಸಖತ್ ಗುಡ್ ನ್ಯೂಸ್

1 comment
Malaria

Malaria: ವಿಶ್ವ ಆರೋಗ್ಯ ಸಂಸ್ಥೆ (WHO)ಎರಡನೇ ಮಲೇರಿಯಾ (Malaria)ಲಸಿಕೆ R21/Matrix-M ಅನ್ನು ಅನುಮೋದನೆ ನೀಡಿದೆ. ಮೊದಲ ಮಲೇರಿಯಾ(Malaria) ಲಸಿಕೆಗಿಂತ ಕಡಿಮೆ ಹೆಚ್ಚು ಪರಿಣಾಮಕಾರಿ ಆಯ್ಕೆಯನ್ನು ದೇಶಗಳಿಗೆ ಒದಗಿಸಬಹುದು ಎಂಬ ಸಲುವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ನ ಸ್ವತಂತ್ರ ಸಲಹಾ ಸಂಸ್ಥೆ, ಸ್ಟ್ರಾಟೆಜಿಕ್ ಅಡ್ವೈಸರಿ ಗ್ರೂಪ್ ಆಫ್ ಎಕ್ಸ್‌ಪರ್ಟ್ಸ್ (SAGE) ಮತ್ತು ಮಲೇರಿಯಾ ಪಾಲಿಸಿ ಅಡ್ವೈಸರಿ ಗ್ರೂಪ್ (MPAG) ಯಿಂದ ವಿವರವಾದ ವೈಜ್ಞಾನಿಕ ವಿಮರ್ಶೆಯನ್ನು ನಡೆಸಿ R21/Matrix-M ಮಲೇರಿಯಾ ಲಸಿಕೆಯನ್ನು ಬಳಸಲು ಶಿಫಾರಸು ಮಾಡಲಾಗಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬಿಡುಗಡೆ ಸಂದರ್ಭ ತಿಳಿಸಿದೆ.

ಎರಡು ತಜ್ಞ ಗುಂಪುಗಳ ಸಲಹೆಯ ಮೇರೆಗೆ ಯುಎನ್ ಆರೋಗ್ಯ ಸಂಸ್ಥೆ ಹೊಸ ಮಲೇರಿಯಾ ಲಸಿಕೆಯನ್ನು ಅನುಮೋದನೆ ನೀಡಲಾಗಿದೆ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ. ಮಲೇರಿಯಾ ಅಪಾಯದಲ್ಲಿರುವ ಮಕ್ಕಳಲ್ಲಿ ಇದನ್ನು ಬಳಸಲು ತಜ್ಞರ ಗುಂಪುಗಳು ಶಿಫಾರಸು ಮಾಡಲಾಗಿದೆ. ಸೀರಮ್ ಇನ್‌ಸ್ಟಿಟ್ಯೂಟ್ ಈಗಾಗಲೇ ವಾರ್ಷಿಕ 100 ಮಿಲಿಯನ್ ಡೋಸ್‌ಗಳಿಗೆ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದು, ಇದು ಮುಂದಿನ ಎರಡು ವರ್ಷಗಳಲ್ಲಿ ದ್ವಿಗುಣವಾಗುತ್ತದೆ. ಮಲೇರಿಯಾದ ಹೆಚ್ಚಿನ ಅಪಾಯದಲ್ಲಿರುವವರಿಗೆ ಲಸಿಕೆ ಹಾಕುವುದು ರೋಗದ ಹರಡುವಿಕೆಯನ್ನು ತಡೆಗಟ್ಟುವ ಮತ್ತು ಲಸಿಕೆ ಹಾಕಿದವರನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಪ್ರಮಾಣದ ಉತ್ಪಾದನೆ ಮುಖ್ಯ ಪಾತ್ರ ವಹಿಸುತ್ತದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಹಕಾರದಿಂದ ಹೊಸ ಮೂರು ಡೋಸ್ ಲಸಿಕೆಯನ್ನು ಅಭಿವೃದ್ಧಿ ಮಾಡಲಾಗಿದೆ. ಇದು 75 ಪ್ರತಿಶತಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿದ್ದು, ಬೂಸ್ಟರ್ ಡೋಸ್‌ ಮೂಲಕ ಒಂದು ವರ್ಷದವರೆಗೆ ರಕ್ಷಣೆ ಸಿಗಲಿದೆ. Matrix-M ಘಟಕವು Novavax ಸ್ವಾಮ್ಯದ ಸಪೋನಿನ್-ಆಧಾರಿತ ಸಹಾಯಕವಾಗಿದ್ದು, ಸ್ಥಳೀಯ ದೇಶಗಳಲ್ಲಿ ಬಳಕೆ ಮಾಡಲು ಸೀರಮ್ ಇನ್‌ಸ್ಟಿಟ್ಯೂಟ್‌ಗೆ ಪರವಾನಗಿ ನೀಡಿದ್ದು, ಆದಾಗ್ಯೂ, Novavax ಸ್ಥಳೀಯವಲ್ಲದ ದೇಶಗಳಲ್ಲಿ ವಾಣಿಜ್ಯ ಹಕ್ಕುಗಳನ್ನು ಉಳಿಸಿಕೊಂಡಿದೆ.

 

ಇದನ್ನು ಓದಿ: Bigg Boss Kannada: ʼಕಾಂತಾರʼ ನಟ ಬಾಸ್‌ ಮನೆಗೆ ಪಾದಾರ್ಪಣೆ?! ಹೊಟ್ಟೆ ಹುಣ್ಣಾಗುವಂತೆ ನಗಲು ರೆಡಿಯಾಗಿರಿ!!!

You may also like

Leave a Comment