Facebook- Instagram: ಸೋಷಿಯಲ್ ಮೀಡಿಯಾಗಳು ಎಂದಾಕ್ಷಣ ನಮಗೆ ನೆನಪಿಗೆ ಬರುವುದೇ ಫೇಸ್‌ಬುಕ್, ಇನ್‌ಸ್ಟಾಗ್ರಾಮ್(Facebook-Instagram) ಗಳು. ಹೊಸ ಹೊಸ ಗೆಳೆಯರು, ಹೊಸ ಹೊಸ ಫೋಟೋ, ವಿಡಿಯೋ ಎನ್ನುತ್ತ ಶುರುವಾದ ಇವು ಇಂದು ಜಗತ್ತನ್ನೇ ವ್ಯಾಪಿಸಿದೆ. ಯಾರ ಮೊಬೈಲ್ ನಲ್ಲಿ ಏನಿರುತ್ತದೆಯೋ ಇಲ್ವೋ ಗೊತ್ತಿಲ್ಲ. ಆದರೆ ಚಿಕ್ಕ ಮಕ್ಕಳಿಂದ ಹಿಡಿದು ಅಂಕಲ್, ಆಂಟಿ ಸಹಿತ ವಯಸ್ಸಾದ ಹಣ್ಣು ಹಣ್ಮುಮುದುಕರ ಮೊಬೈಲ್ ಗಳಲ್ಲೂ ಫೇಸ್‌ಬುಕ್, ಇನ್‌ಸ್ಟಾ ಇದ್ದೇ ಇರುತ್ತದೆ. ಅದರಲ್ಲೂ ಈಗ ರೀಲ್ಸ್ ಗಳು ಬಂದ ಬಳಿಕವಂತೂ ಇವುಗಳ ಹಾವಳಿ ಹೆಚ್ಚಾಗಿದೆ ಎನ್ನಫಹುದು. ಆದರೀಗ ಇದೆಲ್ಲದರ ನಡುವೆ ಫೇಸ್‌ಬುಕ್, ಇನ್‌ಸ್ಟಾ ಬಳಕೆದಾರರಿಗೊಂದು ಬಿಗ್ ಶಾಕ್ ಎದುರಾಗಿದೆ.
ಮೆಟಾ ಒಡೆತನದ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮಾಧ್ಯಮಗು ಇಂದು ಜಗತ್ತಿನ ಅತೀ ದೊಡ್ಡ ಸಾಮಾಜಿಕ ಮಾಧ್ಯಮವಾಗಿ ಹೊರಹೊಮ್ಮಿದೆ. ಆಂಡ್ರಾಯ್ಡ್ ಮೊಬೈಲ್ ಹೊಂದಿರುವವರಲ್ಲಂತೂ ಇದು ಇದ್ದೇ ಇರುತ್ತದೆ. ಅದರಲ್ಲೂ ಭಾರತದಲ್ಲಿ ಈ ಎರಡು ಸಾಮಾಜಿಕ ಮಾಧ್ಯಮ ಅತ್ಯಂತ ಜನಪ್ರಿಯವಾಗಿದೆ ಆದರೀಗ ಶಾಕಿಂಗ್ ವಿಚಾರ ಏನಂದ್ರೆ ಮೆಟಾ ಕಂಪನಿಯು ತನ್ನ ಅಧೀನದಲ್ಲಿರುವ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ಹೊಂದಿರುವವರಿಗೆ ಪ್ರತಿ ತಿಂಗಳು 1,164 ರೂಪಾಯಿ ಶುಲ್ಕ ವಿಧಿಸಲು ಮುಂದಾಗಿದೆ.
ಹೌದು, ಮೊದಲ ಹಂತದಲ್ಲಿ 27 ದೇಶದಲ್ಲಿ ಈ ನಿಯಮ ಜಾರಿಯಾಗುತ್ತಿದ್ದು, ಡೆಸ್ಕ್‌ಟಾಪ್‌ನಲ್ಲಿನ ಬಳಕೆದಾರರಿಗೆ ಪ್ರತಿ ತಿಂಗಳು $14 ಡಾಲರ್(1,164 ರೂಪಾಯಿ) ಶುಲ್ಕ ವಿಧಿಸಲಾಗುತ್ತಿದೆ. ಇನ್ನು ಮೊಬೈಲ್‌ನಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಪ್ರತಿ ತಿಂಗಳು 13 ಯೂರೋ ಅಂದರೆ 1,132 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಆದರೆ ಎಲ್ಲಾ ಬಳಕೆದಾರರಿಗೆ ಈ ಶುಲ್ಕ ಇಲ್ಲ.
ಯಾರಿಗೆಲ್ಲಾ ಬೀಳುತ್ತೆ ಶುಲ್ಕ?!
ಕೇವಲ ಜಾಹೀರಾತು ಮುಕ್ತ ಬಳಕೆಗೆ ಮಾತ್ರ ಶುಲ್ಕ ವಸೂಲಿ ಮಾಡಲಾಗುತ್ತದೆ. ಅಂದರೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಜಾಹೀರಾತು ಕಿರಿಕಿಯಿಂದ ಮುಕ್ತಿ ನೀಡಲು ಮೆಟಾ ಹೊಸ ಪ್ಲಾನ್ ಜಾರಿ ಮಾಡಿದೆ. ಈ ಪ್ಲಾನ್ ಆಯ್ಕೆ ಮಾಡಿಕೊಂಡರೆ ನಿಮಗೆ ಜಾಹೀರಾತು ಮುಕ್ತ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಕೆ ಮಾಡಲು ಸಾಧ್ಯವಿದೆ.
ಮೊದಲು ಎಲ್ಲೆಲ್ಲಿ ಜಾರಿ?
ಈ ಹೊಸ ನಿಯಮ ಮೊದಲ ಹಂತದಲ್ಲಿ ಯೂರೋಪಿಯನ್ ಯೂನಿಯನ್ ದೇಶಗಳಲ್ಲಿ ಜಾರಿಯಾಗುತ್ತಿದ್ದು, ಜರ್ಮನಿ, ಗ್ರೀಸ್, ಫ್ರಾನ್ಸ್, ಸ್ಪೇನ್, ಸ್ಪೀಡನ್, ಪೋಲೆಂಡ್, ನೆದರ್ಲೆಂಡ್, ಆಸ್ಟ್ರೀಯಾ, ಬೆಲ್ಜಿಯಂ, ಬಲ್ಗೇರಿಯಾ, ಕ್ರೋವೇಶಿಯಾ, ಪೋರ್ಚುಗಲ್, ಐರ್ಲೆಂಡ್, ಇಟಲಿ, ಗ್ರೀಸ್, ಹಂಗೇರಿ ಸೇರಿದಂತೆ 27 ಯೂರೊಪಿಯನ್ ಒಕ್ಕೂಟ ರಾಷ್ಟ್ರದಲ್ಲಿ ಹೊಸ ನಿಯಮ ಜಾರಿಯಾಗುತ್ತಿದೆ.
