Home » Shocking News: ಸೂಪರ್ ಮಾರ್ಕೆಟಿನೊಳಗೆ ಫ್ರಿಡ್ಜ್ ಮುಟ್ಟಿದ ಬಾಲಕಿಗೆ ಕರೆಂಟ್ ಶಾಕ್- ಸ್ಥಳದಲ್ಲೇ ಪುಟಾಣಿಯ ಸಾವು !! ಭಯಾನಕ ವಿಡಿಯೋ ವೈರಲ್

Shocking News: ಸೂಪರ್ ಮಾರ್ಕೆಟಿನೊಳಗೆ ಫ್ರಿಡ್ಜ್ ಮುಟ್ಟಿದ ಬಾಲಕಿಗೆ ಕರೆಂಟ್ ಶಾಕ್- ಸ್ಥಳದಲ್ಲೇ ಪುಟಾಣಿಯ ಸಾವು !! ಭಯಾನಕ ವಿಡಿಯೋ ವೈರಲ್

0 comments

Telangana: ತೆಲಂಗಾಣದ(Telangana) ನಿಜಮಾಬಾದ್‌ನಲ್ಲಿ ಸೂಪರ್‌ ಮಾರ್ಕೆಟ್‌ಗೆ ಪೋಷಕರೊಂದಿಗೆ ಹೋದ ಬಾಲಕಿಯೊಬ್ಬಳು ಕರೆಂಟ್ ಶಾಕ್‌ಗೆ ಬಲಿಯಾದ ದಾರುಣ(Died)ಘಟನೆ ವರದಿಯಾಗಿದೆ.

ಮೃತ ಬಾಲಕಿಯನ್ನು 4 ವರ್ಷದ ರುಚಿತ ಎಂದು ಗುರುತಿಸಲಾಗಿದೆ. ರಾಜಶೇಖರ್ ನಂದಿಪೇಟ್‌ನ ನವಿಪೇಟ್ ಬಳಿ ಇರುವ ಸೂಪರ್‌ ಮಾರ್ಕೆಟ್‌ಗೆ(Super Market)ಮನೆಗೆ ದಿನಸಿ ತರುವ ಸಲುವಾಗಿ ತಮ್ಮ 4 ವರ್ಷದ ಮಗಳು ರುಚಿತಾಳನ್ನ ಕರೆದುಕೊಂಡು ಹೋಗಿದ್ದಾರೆ. ಇಲ್ಲಿ ತಂದೆ ಶಾಪಿಂಗ್‌ ಮಾಡುತ್ತಿದ್ದ ಸಂದರ್ಭ ಬಾಲಕಿ ಸಮೀಪದಲ್ಲೇ ಇದ್ದ ರೆಪ್ರಿಜರೇಟರ್ ಬಾಗಿಲು ತೆರೆಯಲು ಹೋದ ಸಂದರ್ಭ ಆಕೆಗೆ ಶಾಕ್ ತಗುಲಿದ್ದು, ಆಕೆ ಫ್ರಿಡ್ಜ್‌ ಬಾಗಿಲಿನಲ್ಲಿ ನೇತಾಡಿದ್ದಾಳೆ . ಈ ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ವೀಡಿಯೊ ನೋಡುವವರಲ್ಲಿ ಭಯ ಮೂಡಿಸಿದೆ.

ವಿದ್ಯುತ್ ಶಾಕ್‌ಗೆ ಒಳಗಾಗಿದ್ದನ್ನು ನೋಡಿದ ಕೂಡಲೇ ತಂದೆ ತನ್ನ ಕೈಯಲ್ಲಿದ್ದ ವಸ್ತುಗಳನ್ನೆಲ್ಲಾ ಎಸೆದು ಸಮೀಪಕ್ಕೆ ಬಂದು ಎತ್ತುವ ದೃಶ್ಯ ಕೂಡ ಸೆರೆಯಾಗಿದೆ. ಆದರೆ, ತಂದೆಗೆ ವಿಚಾರ ಬೆಳಕಿಗೆ ಬರುವ ವೇಳೆಗೆ 15 ಸೆಕೆಂಡ್‌ ಕಳೆದಿದ್ದು, ಅಷ್ಟರಲ್ಲಿ ಮಗಳ ಪ್ರಾಣ ಪಕ್ಷಿಯೇ ಹಾರಿಹೋಗಿದೆ.ಅನೇಕ ಸೂಪರ್ ಮಾರ್ಕೆಟ್‌ಗಳಲ್ಲಿ ಫ್ರಿಡ್ಜ್‌ಗಳನ್ನು ಸರಿಯಾಗಿ ನಿರ್ವಹಿಸುವುದಿಲ್ಲ. ಈ ರೀತಿ ಘಟನೆಗಳು ಆದರೆ ಜೀವಕ್ಕೆ ಯಾರು ಹೊಣೆ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ಈ ಸೂಪರ್ ಮಾರ್ಕೆಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚಿನವರು ಆಗ್ರಹಿಸಿದ್ದಾರೆ. ಈ ಘಟನೆಯ ವೀಡಿಯೋ ನೋಡಿದವರೆಲ್ಲ ಶಾಕ್ ಆಗಿದ್ದು, ಮಕ್ಕಳನ್ನು ಶಾಪಿಂಗ್ ಎಂದು ಹೊರಗಡೆ ಕರೆದೊಯ್ಯುವಾಗ ಎಚ್ಚರ ವಹಿಸಿ ಎಂದು ಕೆಲವರು ಕಾಮೆಂಟ್ಸ್ ಮಾಡುತ್ತಿದ್ದಾರೆ.

ಇದನ್ನೂ ಓದಿ: 8th Pay Commission: ಸರ್ಕಾರಿ ನೌಕರರಿಗೆ ಹೊಡಿತು ಬಂಪರ್ ಲಾಟ್ರಿ- ಇವರ ವೇತನದಲ್ಲಿ ಅರ್ಧಕ್ಕರ್ಧ ಜಾಸ್ತಿ !! ಈ ದಿನದಿಂದಲೇ ಜಾರಿ

You may also like

Leave a Comment