catholic priest joins bjp : ಸಿರಿಯನ್-ಮಲಬಾರ್ ಚರ್ಚ್ನ ಇಡುಕ್ಕಿ ಧರ್ಮಪ್ರಾಂತ್ಯದ ಅಡಿಯಲ್ಲಿರುವ ಕ್ಯಾಥೋಲಿಕ್ ಪಾದ್ರಿಯೊಬ್ಬರು ಬಿಜೆಪಿ ಸೇರಿದ್ದು, ಕ್ರೈಸ್ತ ಪಾದ್ರಿ (catholic priest joins bjp) BJP ಸೇರಿದ್ದಕ್ಕೆ ಏಕಾಏಕಿ ಚರ್ಚ್ ಮಾಡಿದ್ದೇನು ಗೊತ್ತಾ ?!
ಆದಿಮಲಿ ಬಳಿಯ ಮಂಕುವಾ ಸೇಂಟ್ ಥಾಮಸ್ ಚರ್ಚ್ನ ಫಾದರ್ ಕುರಿಯಕೋಸ್ ಮಟ್ಟಂ ಅವರು ಸೋಮವಾರ ಪಕ್ಷದ ಇಡುಕ್ಕಿ ಜಿಲ್ಲಾಧ್ಯಕ್ಷ ಕೆ ಎಸ್ ಅಜಿ ಅವರಿಂದ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದರು. ಇದಾಗಿ ಕೆಲವೇ ಗಂಟೆಗಳಲ್ಲಿ, ಇಡುಕ್ಕಿ ಧರ್ಮಪ್ರಾಂತ್ಯವು ಅವರ ವಿರುದ್ಧ ಕ್ರಮವನ್ನು ಕೈಗೊಂಡಿದೆ.
ಹೌದು, ಕ್ರೈಸ್ತ ಪಾದ್ರಿ BJP ಸೇರಿದ ಕೆಲವೇ ಗಂಟೆಗಳ ನಂತರ ಸೋಮವಾರ ಅವರನ್ನು ವಿಕಾರ್ ಹುದ್ದೆಯಿಂದ ಚರ್ಚ್ ತೆಗೆದುಹಾಕಿದೆ ಎಂದು ತಿಳಿದುಬಂದಿದೆ. ಅವರನ್ನು ತಾತ್ಕಾಲಿಕವಾಗಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಚರ್ಚ್ ತಿಳಿಸಿದೆ.
ಚರ್ಚ್ನ ಪಾದ್ರಿ ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವಂತಿಲ್ಲ. ಅಥವಾ ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗವಹಿಸುವಂತಿಲ್ಲ. ಹಾಗಾಗಿ, ಕಾನೂನಿನ ಪ್ರಕಾರ ಶಿಸ್ತು ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಚರ್ಚ್ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: WhatsApp: 74 ಲಕ್ಷ ಭಾರತೀಯರ ವಾಟ್ಸಪ್ ಖಾತೆ ಬ್ಯಾನ್ !! ನಿಮ್ಮ ಅಕೌಂಟ್ ಕೂಡ ಉಂಟಾ ?!
