Maharastra Viral News: ಮಹಾರಾಷ್ಟ್ರದ (Maharastra) ನಾಂದೇಡ್‌ನ ಸರ್ಕಾರಿ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರ (ಅಕ್ಟೋಬರ್ 02) 24 ಗಂಟೆಗಳ ಅವಧಿಯಲ್ಲಿ 24 ರೋಗಿಗಳು ಸಾವನ್ನಪ್ಪಿದ್ದರು. ಸಾವಿನ ಸಂಖ್ಯೆ ಕ್ರಮೇಣ 24 ರಿಂದ 31ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬೆನ್ನಲ್ಲೇ ಇಂದು ಆಸ್ಪತ್ರೆಯ ಡೀನ್ ಕೈಯಲ್ಲಿ ಬಿಜೆಪಿ ಸಂಸದ ಶೌಚಾಲಯ ಸ್ವಚ್ಛಗೊಳಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ (Viral News) ಹರಿದಾಡಿದೆ.
ಎರಡು ದಿನಗಳಲ್ಲಿ 31 ರೋಗಿಗಳು ಸಾವನ್ನಪ್ಪಿದ (Death) ಘಟನೆ ತಿಳಿದ ಬಿಜೆಪಿ ಸಂಸದ ಹೇಮಂತ್ ಪಾಟೀಲ್, ನಾಂದೇಡ್‌ನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬಳಿಕ ಶೌಚಾಲಯವನ್ನು ಪೊರಕೆಯಿಂದ ಸ್ವಚ್ಛಗೊಳಿಸುವಂತೆ ಆಸ್ಪತ್ರೆಯ ಡೀನ್‌ಗೆ ತಿಳಿಸಿದರು.
ಹಾಗೇ ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸಂಸದರು, “ಡೀನ್‌ನ ಶೌಚಾಲಯದ ಬ್ಲಾಕ್‌ಗೆ ಭೇಟಿ ನೀಡಿದ್ದು, ತಿಂಗಳಿಂದ ಬಳಕೆಯಾಗದೆ ಉಳಿದಿರುವ ಸ್ನಾನಗೃಹಗಳು ಕೊಳಕಿನಿಂದ ತುಂಬಿರುವುದು ಕಂಡುಬಂದಿದೆ. ಮಕ್ಕಳ ಬ್ಲಾಕ್‌ನಲ್ಲಿರುವ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಮಹಿಳೆಯರ ಬ್ಲಾಕ್‌ನಲ್ಲಿ ಮದ್ಯದ ಬಾಟಲಿಗಳು ತುಂಬಿವೆ. ಆಸ್ಪತ್ರೆಯ ಸುತ್ತಮುತ್ತ ಹಂದಿಗಳು ಸೇರಿದಂತೆ ಹಲವು ಪ್ರಾಣಿಗಳು ಓಡಾಡುತ್ತಿವೆ. ಸುತ್ತಲೂ ಸಾಕಷ್ಟು ಕೊಳಕು ತುಂಬಿದೆ. ಯಾರೂ ಇತ್ತ ಗಮನ ಹರಿಸುತ್ತಿಲ್ಲ” ಎಂದು ಹೇಳಿದರು.
ಅಲ್ಲದೆ, “ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 2ರ ನಡುವೆ ಸಂಭವಿಸಿದ ಸಾವುಗಳಿಗೆ ಆಸ್ಪತ್ರೆಯ ವೈದ್ಯರನ್ನೇ ಹೊಣೆಗಾರರನ್ನಾಗಿ ಮಾಡಿ, ಅವರೆಲ್ಲರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ಯಾವುದೇ ಕ್ರಮ ಕೈಗೊಳ್ಳದೆ ಹೋದರೆ ಆಸ್ಪತ್ರೆಯಲ್ಲಿ ಯಾವ ಸುಧಾರಣೆ ತರಲು ಸಾಧ್ಯವಿಲ್ಲ”ಎಂದು ಹೇಳಿದರು.
ಇದನ್ನೂ ಓದಿ: Hyderabad: ಹೋಮ್ವರ್ಕ್ ಮಾಡಿಲ್ಲ ಎಂದ ವಿದ್ಯಾರ್ಥಿ- ಟೀಚರ್ ಹೊಡೆದ ಏಟಿಗೆ ಜೀವವೇ ಹೋಯ್ತು !! ಯಪ್ಪಾ.. ಹೊಡೆದಿದ್ದಾದ್ರೂ ಹೇಗೆ?
