Home » LPG Cylinder Price: ದೇಶದ ಜನತೆಗೆ ದಸರಾ ಗಿಫ್ಟ್‌, ಸಿಗಲಿದೆ ನಿಮಗೆ ಇನ್ಮುಂದೆ 600 ರೂಪಾಯಿಗೆ ಸಿಲಿಂಡರ್‌!

LPG Cylinder Price: ದೇಶದ ಜನತೆಗೆ ದಸರಾ ಗಿಫ್ಟ್‌, ಸಿಗಲಿದೆ ನಿಮಗೆ ಇನ್ಮುಂದೆ 600 ರೂಪಾಯಿಗೆ ಸಿಲಿಂಡರ್‌!

0 comments

LPG Cylinder Price: ದಸರಾ ಹಬ್ಬದ ಸಲುವಾಗಿ ಮೋದಿ ಸರ್ಕಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಈಗ 200 ರೂ.ಗಳ ಸಬ್ಸಿಡಿಯನ್ನು ಮತ್ತೆ 100 ರೂಪಾಯಿ ಏರಿಕೆ ಮಾಡಲಾಗಿದ್ದು, ಈಗ 300 ರೂಪಾಯಿ ಪಡೆಯಲಿರುವ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಉಜ್ವಲಾ ಫಲಾನುಭವಿಗಳು ಪ್ರಸ್ತುತ 14.2 ಕೆಜಿ ಸಿಲಿಂಡರ್‌ಗೆ 703 ರೂ.ಗಳನ್ನು ಪಾವತಿ ಮಾಡುತ್ತಿದ್ದಾರೆ. ಮಾರುಕಟ್ಟೆ ಬೆಲೆ 903 ರೂಪಾಯಿಯಿದ್ದು, ಕೇಂದ್ರ ಸಚಿವ ಸಂಪುಟದ ನಿರ್ಧಾರದ ನಂತರ ಅವರು ಈಗ 603 ರೂಪಾಯಿ ಪಾವತಿ ಮಾಡಿದರೆ ಸಾಕಾಗುತ್ತದೆ.ರಕ್ಷಾ ಬಂಧನ ದಿನದಂದು ಉಜ್ವಲ ಯೋಜನೆಯಡಿ ಮಹಿಳೆಯರಿಗೆ ನೀಡುವ ಸಹಾಯಧನವನ್ನು ಹೆಚ್ಚಿಸಲು ತೀರ್ಮಾನ ಮಾಡಲಾಗಿದೆ. ಆಗ ನೀಡುತ್ತಿದ್ದ ಸಬ್ಸಿಡಿ 200, ಈಗ 300 ರೂ.ಗೆ ಹೆಚ್ಚಳ ಮಾಡಲಾಗಿದೆ.

 

ರಕ್ಷಾಬಂಧನ ಮತ್ತು ಓಣಂ ಸಂದರ್ಭದಲ್ಲಿ ಕೇಂದ್ರ ಸಚಿವ ಸಂಪುಟವು ಎಲ್ಪಿಜಿಯಲ್ಲಿ 200 ರೂ.ಗಳ ಕಡಿತವನ್ನು ಘೋಷಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. ಇಂದು, ಉಜ್ವಲ ಯೋಜನೆಯ ಫಲಾನುಭವಿಯನ್ನು 200 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಿಸಲಾಗಿದೆ. ಈ ಸಬ್ಸಿಡಿ ಹಣ ನೇರವಾಗಿ ಗ್ರಾಹಕರ ಖಾತೆಗೆ ವರ್ಗಾವಣೆ ಆಗುವುದಿಲ್ಲ. ಇದರ ಬದಲಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌, ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೋರೇಷನ್‌ ಮತ್ತು ಭಾರತ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಕಂಪನಿಗಳಿಗೆ ಸಬ್ಸಿಡಿ (Subsidy) ಹಣ ದೊರೆಯಲಿದೆ.

You may also like

Leave a Comment