Different Village: ಪ್ರಪಂಚದಲ್ಲಿ ಬರುವ ಒಂದೊಂದು ಮೂಲೆ ಅಥವಾ ಪ್ರದೇಶದಲ್ಲಿ, ಗ್ರಾಮದಲ್ಲಿ ಆಚಾರ ವಿಚಾರಗಳು ಬದುಕಿನ ವ್ಯವಸ್ಥೆಗಳು ವಿಭಿನ್ನವಾಗಿರುತ್ತದೆ. ಅಂತೆಯೇ ಇಲ್ಲೊಂದು ಊರಿನ ಒಂದು ಸಣ್ಣ ಪದ್ಧತಿ ಎಲ್ಲರನ್ನು ಬೆಚ್ಚಿ ಬೀಳಿಸುತ್ತದೆ. ಹೌದು, ಈ ಒಂದು ಊರು ಬಹಳ ಸಣ್ಣದಾದರೂ ಇಡೀ ಜಗತ್ತಿಗೆ ವಿಚಿತ್ರ ಊರಿನ (Different Village) ಪರಿಚಯ ಆಗಲೇ ಬೇಕು. ವಿಶೇಷ ಎಂದರೆ ಕೇವಲ ಮಹಿಳೆಯರು ಮಾತ್ರ ಇರುವ ಹಳ್ಳಿಯೊಂದಿದೆ ಎಂದು ನೀವು ಕೇಳಿದ್ದೀರಾ!
ಹೌದು, ಉಮೋಜಾ ಎಂಬ ಈ ಹಳ್ಳಿ ಕೀನ್ಯಾದ ರಾಜಧಾನಿ ನೈರೋಬಿ ಬಳಿಯಿದೆ. ಇದು ಮಹಿಳೆಯರು ಮಾತ್ರ ವಾಸಿಸುವ ಗ್ರಾಮ. ಈ ಗ್ರಾಮದ ವಿಶೇಷತೆ ಏನೆಂದರೆ ಇಲ್ಲಿಗೆ ಪುರುಷರು ಪ್ರವೇಶ ಮಾಡುವಂತಿಲ್ಲ.
ಈ ಉಮೋಜಾ ಗ್ರಾಮದಲ್ಲಿ ಸುಮಾರು 50 ಮಹಿಳೆಯರ ಗುಂಪು ತಮ್ಮ ಮಕ್ಕಳೊಂದಿಗೆ ಒಣಹುಲ್ಲಿನ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಈ ಗ್ರಾಮಕ್ಕೆ ಒಬ್ಬನೇ ಒಬ್ಬ ಪುರುಷನೂ ಬರುವಂತಿಲ್ಲ. ಯಾವುದೇ ವ್ಯಕ್ತಿ ಇಲ್ಲಿಗೆ ಪ್ರವೇಶಿಸಿದರೆ ಅವರನ್ನು ಸ್ಥಳೀಯ ಪೊಲೀಸರು ಬಂಧಿಸುತ್ತಾರೆ.
ಮಾಹಿತಿ ಪ್ರಕಾರ, 1990ರಲ್ಲಿ ಈ ಹಳ್ಳಿಯಲ್ಲಿ 15 ಮಹಿಳೆಯರಿದ್ದರು. ಸಂಬೂರು ಮತ್ತು ಇಸಿಯೊಸೊ ಬಳಿ ಬ್ರಿಟಿಷ್ ಸೈನಿಕರು ಈ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರು. ಇಲ್ಲಿ ಬಾಲ್ಯವಿವಾಹ, ಸ್ತ್ರೀ ಜನನಾಂಗ ಊನಗೊಳಿಸುವಿಕೆ, ಕೌಟುಂಬಿಕ ಹಿಂಸೆ ಮತ್ತು ಅತ್ಯಾಚಾರದಂತಹ ದೌರ್ಜನ್ಯ ನಡೆಯುತ್ತಲೇ ಇತ್ತು.
ಮುಖ್ಯವಾಗಿ 1990ರಲ್ಲಿ ಬ್ರಿಟಿಷ್ ಸೈನಿಕರ ದುಷ್ಕೃತ್ಯದ ನಂತರ ಈ ಗ್ರಾಮದ ಮಹಿಳೆಯರನ್ನು ಅವರ ಗಂಡಂದಿರು ಅಗೌರವದಿಂದ ಕಾಣಲಾರಂಭಿಸಿದರು. ಅವರನ್ನು ಮನೆಯಿಂದ ಹೊರಹಾಕಿದರು. ಬಳಿಕ ಸಂತ್ರಸ್ಥ ಮಹಿಳೆಯರೆಲ್ಲ ಒಂದೆಡೆ ಸೇರಿ ವಾಸಿಸಲಾರಂಭಿಸಿದರು. ನಂತರ ಈ ಗ್ರಾಮಕ್ಕೆ ಉಮೋಜಾ ಎಂದು ಹೆಸರಿಟ್ಟರು, ಇದು ಅಲ್ಲಿನ ಜನರ ಏಕತೆಯನ್ನು ಸೂಚಿಸುತ್ತದೆ. ಕ್ರಮೇಣ ಈ ಗ್ರಾಮವು ಆಶ್ರಯ ತಾಣವಾಗಿ ಮಾರ್ಪಾಡಾಯಿತು. ಮನೆಯಿಂದ ಹೊರಹಾಕಲ್ಪಟ್ಟ ಎಲ್ಲ ಮಹಿಳೆಯರನ್ನು ಇಲ್ಲಿ ಸ್ವಾಗತಿಸಲಾಗುತ್ತದೆ. ಎಲ್ಲಾ ವಯಸ್ಸಿನ ಮಹಿಳೆಯರು ಇಲ್ಲಿಗೆ ಬಂದು ವಾಸಿಸಬಹುದು. ಗರ್ಭಿಣಿಯಾದಾಗಲೂ ಅನೇಕ ಮಹಿಳೆಯರು ಇಲ್ಲಿಗೆ ಬಂದು ತಂಗುತ್ತಾರೆ.
ವಿಶೇಷ ಎಂದರೆ ಉಮೋಜಾ ಗ್ರಾಮದಲ್ಲಿ ಮಹಿಳೆಯರು ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಇಲ್ಲಿ ಅವರು ಯಾವುದೇ ಕೆಲಸಕ್ಕೆ ಅನುಮತಿ ತೆಗೆದುಕೊಳ್ಳಬೇಕಾಗಿಲ್ಲ. ಈ ಗ್ರಾಮದ ಮಹಿಳೆಯರು ಬಣ್ಣಬಣ್ಣದ ಮಣಿಗಳಿಂದ ಮಾಲೆಗಳನ್ನು ಮಾಡುತ್ತಾರೆ, ಇದು ಅವರ ಜೀವನೋಪಾಯದ ಕಾಯಕ ಎನ್ನಲಾಗುತ್ತದೆ.
ಒಟ್ಟಿನಲ್ಲಿ ಉಮೋಜಾದಲ್ಲಿ ವಾಸಿಸುವ ಎಲ್ಲಾ ಮಹಿಳೆಯರು ಸಾಂಬೂರು ಸಂಸ್ಕೃತಿಗೆ ಸೇರಿದವರು. ಈ ಸಮಾಜ ಪಿತೃಪ್ರಧಾನವಾಗಿದ್ದು ಬಹುಪತ್ನಿತ್ವ ಪದ್ಧತಿ ಇದೆ. ಇಲ್ಲಿ ಹೆಚ್ಚಾಗಿ ಸ್ತ್ರೀಯರಿಗೆ ಸುನ್ನತಿ ಮಾಡಲಾಗುತ್ತದೆ.
ಇದನ್ನು ಓದಿ: ಹಿಂದೂ ಮದುವೆಗಳಲ್ಲಿ ಇದೊಂದು ‘ಶಾಸ್ತ್ರ’ ಮಾಡದೇ ಇದ್ರೆ ಅದಕ್ಕೆ ಮಾನ್ಯತೆ ಇಲ್ಲ !! ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್
