Monkey Funny Viral Video: ಮದ್ಯ ಅಂದರೆ ಸಾಕು ಜನರಿಗೆ ಎಲ್ಲಿಲ್ಲದ ವ್ಯಾಮೋಹ. ಮದ್ಯದ ಮಾಯೆ ಎಷ್ಟರಮಟ್ಟಿಗಿದೆ ಎಂದರೆ ಮನೆ ಮಾರಿಯಾದ್ರೂ ಕೊಳ್ಳೋ ಜನರು ನಮ್ಮ ನಡುವೆ ಇದ್ದಾರೆ. ದುಡ್ಡು ಎಷ್ಟೇ ಇರಲಿ, ಸಂಜೆ ಆಗುತ್ತಿದ್ದಂತೆ ಒಂದು ಎರಡು ಮೂರು- ಹೀಗೆ ಭಟ್ಟಿ ಇಳಿಸಿದಂತೆ ಬಾರ್ ಗೆ ದೌಡಾಯಿಸಿ ಫ್ರೆಂಡ್ಸ್ ಜೊತೆಗೆ ತಮ್ಮ ಮನಸೋ ಇಚ್ಛೆ ಹೊಟ್ಟೆಗೆ ಪರಮಾತ್ಮ ಇಳಿದರೆ ಮಾತ್ರ ಮದ್ಯ ಪ್ರಿಯರಿಗೆ ಏನೋ ಒಂದು ಸಮಾಧಾನ.
ಆದರೆ, ಮದ್ಯ ಮಂಗನ ಕೈಗೆ ಸಿಕ್ಕರೆ ಹೇಗಿರುತ್ತೇ ಗೊತ್ತಾ? ಸದ್ಯ ವಿಡಿಯೋವೊಂದು ವೈರಲ್ ಆಗಿದ್ದು, ವಿಡಿಯೋದಲ್ಲಿ ಮಂಗವೊಂದು ಸಾರಾಯಿಯನ್ನು ಗಟಗಟ ಎಂದು ಕುಡಿಯುತ್ತಿದೆ. ಕುಡಿದಾದ ಮೇಲೆ ಏನು ಮಾಡಿದೆ ಗೊತ್ತಾ? ಎಣ್ಣೆ ಹೊಡೆದು ನಡು ರಸ್ತೆಯಲ್ಲಿ ‘ಮಂಗ’ನಾಟವಾಡುತ್ತಿದೆ. ವಿಡಿಯೋ ನೋಡಿದ್ರೆ ನೀವೂ ಹೊಟ್ಟೆ ಹುಣ್ಣಾಗುವಂತೆ ನಗೋದು ಪಕ್ಕಾ !
ಈ ವೀಡಿಯೋ ಸಾಕಷ್ಟು ವೀಕ್ಷಣೆ ಗಳಿಸಿದ್ದು, ವಿವಿಧ- ವಿಭಿನ್ನ ಕಾಮೆಂಟ್ ಗಳು ಹರಿದುಬಂದಿದೆ. ಇದೇ ವಿಡಿಯೋದ ಮುಂದುವರೆದ ಕ್ಲಿಪ್‌ನಲ್ಲಿ, ಕೆಲವು ಕೋತಿಗಳು (Monkey Funny Viral Video) ಕಾರಿನ ನಂಬರ್ ಪ್ಲೇಟ್ ಮತ್ತು ವೈಪರ್ ಅನ್ನು ಮುರಿಯುತ್ತಿವೆ. ಕೋತಿಗಳು ತುಂಟತನದ ವಿಡಿಯೋ ನೋಡಿದ್ರೆ ನಗು ತಡೆಯಲು ಸಾಧ್ಯವೇ ಇಲ್ಲ!!!.
