Home » Ration Card: ಇಂತವರಿಗಿನ್ನು ರೇಷನ್ ಕಾರ್ಡ್ ಸಿಗೋದು ಡೌಟ್ – ಇರುವ ಕಾರ್ಡ್ ಕೂಡ ಕ್ಯಾನ್ಸಲ್ !!

Ration Card: ಇಂತವರಿಗಿನ್ನು ರೇಷನ್ ಕಾರ್ಡ್ ಸಿಗೋದು ಡೌಟ್ – ಇರುವ ಕಾರ್ಡ್ ಕೂಡ ಕ್ಯಾನ್ಸಲ್ !!

0 comments
Ration Card

Ration Card: ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ (Government) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಭಾರತದಲ್ಲಿ (India) ಪಡಿತರ ಚೀಟಿ (Ration Card) ಬಹಳ ಮುಖ್ಯವಾದ ದಾಖಲೆಗಳಲ್ಲಿ ಒಂದು. ಪಡಿತರ ಚೀಟಿಯ ಮೂಲಕ ಸರ್ಕಾರ (Government) ಅಗತ್ಯವಿರುವವರಿಗೆ ಹಿಟ್ಟು, ಬೇಳೆಕಾಳು, ಅಕ್ಕಿ ಮುಂತಾದ ಪಡಿತರ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತದೆ.

ಸದ್ಯ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಪ್ರಯೋಜನ ಪಡೆದುಕೊಳ್ಳಲು ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಹೋದ ಅದೆಷ್ಟು ಜನ ತಮ್ಮ ರೇಷನ್ ಕಾರ್ಡ್ ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಹೌದು, ಇಂತವರಿಗಿನ್ನು ರೇಷನ್ ಕಾರ್ಡ್ ಸಿಗೋದು ಡೌಟ್ , ಇರುವ ಕಾರ್ಡ್ ಕೂಡ ಕ್ಯಾನ್ಸಲ್ !!

ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಸುಮಾರು ಮೂರು ಲಕ್ಷಕ್ಕೂ ಅಧಿಕ ರೇಷನ್‌ ಕಾರ್ಡ್ ತಿದ್ದುಪಡಿಗೆ (ration Card correction) ಸಲ್ಲಿಕೆ ಆಗಿತ್ತು. ಅವುಗಳಲ್ಲಿ ಸುಮಾರು ಒಂದು ಲಕ್ಷದಷ್ಟು ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನು 93,000ಕ್ಕೂ ಅಧಿಕ ರೇಷನ್ ಕಾರ್ಡ್ ಅನ್ನು ನೇರವಾಗಿ ರದ್ದುಪಡಿಸಲಾಗಿದೆ. ಸರ್ಕಾರ 6 ಮಾನದಂಡಗಳನ್ನು ಘೋಷಣೆ ಮಾಡಿದ್ದು ಅದರ ಅಡಿಯಲ್ಲಿ ಬರುವವರಿಗೆ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ (BPL Card) ಲಭ್ಯವಾಗುತ್ತದೆ.

ಬಡತನ ರೇಖೆಗಿಂತ ಕೆಳಗಿನವರು ಮಾತ್ರ BPL card ಪಡೆಯಲು ಅರ್ಹರು. 1,20,000 ಕಿಂತ ಅಧಿಕ ವಾರ್ಷಿಕ ಆದಾಯ ಇರಬಾರದು. ವೈಟ್ ಬೋರ್ಡ್ ಕಾರು ಅಥವಾ ಮತ್ತಿತರ ನಾಲ್ಕು ಚಕ್ರದ ವಾಹನ ಹೊಂದಿರಬಾರದು. ಕುಟುಂಬದ ಯಾವ ಸದಸ್ಯರು ಸರ್ಕಾರಿ ನೌಕರಿ (Government Job) ಯಲ್ಲಿ ಇರಬಾರದು.
ಜಿ ಎಸ್ ಟಿ ಇನ್ನಮ್ ಟ್ಯಾಕ್ಸ್ (Tax) ಪಾವತಿ ಮಾಡುವವರು ಆಗಿರಬಾರದು. 5 ಎಕರೆಗಿಂತ ಜಾಸ್ತಿ ಜಮೀನು ಇರಬಾರದು, ನಗರ ಪ್ರದೇಶದಲ್ಲಿ 1000 ಸ್ಕ್ಯಾರ್ ಮಿ. ಗಿಂತ ದೊಡ್ಡ ಮನೆ ಇರುವಹಾಗಿಲ್ಲ.

ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಇರಬಹುದು. ಯಾರು ಮೋಸ, ವಂಚನೆ ಮಾಡಿ ಪಡೆದುಕೊಂಡಿರುತ್ತಾರೋ ಅಂತವರ ರೇಷನ್ ಕಾರ್ಡ್ ರದ್ದತಿಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರ ಈಗಾಗಲೇ ಸಾಕಷ್ಟು ತಿದ್ದುಪಡಿ ಮಾಡಲು ಬಂದ ವಂಚನೆಯಿಂದ ಪಡೆದುಕೊಂಡ ರೇಷನ್ ಕಾರ್ಡ್ ಕ್ಯಾನ್ಸಲ್ (Ration card Cancellation) ಮಾಡಿದೆ. ಜೊತೆಗೆ ಬಂದಿರುವ ಹೊಸ ಅರ್ಜಿಗಳ ಪರಿಶೀಲನೆ ಕೂಡ ಮಾಡಲಾಗುತ್ತಿದ್ದು ಅನರ್ಹರಿಗೆ ಯಾವುದೇ ಕಾರಣಕ್ಕೂ ರೇಷನ್ ಕಾರ್ಡ್ ವಿತರಣೆ ಮಾಡುವುದಿಲ್ಲ ಎಂದು ತಿಳಿಸಿದೆ.

 

ಇದನ್ನು ಓದಿ: Railway New Rule : ಮನೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕಿದ್ದೀರಾ ?! ಸಾಕೋ ನಿರೀಕ್ಷೆ ಏನಾದ್ರೂ ಉಂಟಾ ?! ಹಾಗಿದ್ರೆ ನಿಮಗಿದೋ ಭರ್ಜರಿ ಗುಡ್ ನ್ಯೂಸ್ !

You may also like

Leave a Comment