Home » Kanpur: ಜ್ಯೋತಿಷಿ ಮನೆಯಲ್ಲಿ ಹಣ ಕದ್ದು ಪರಾರಿಯಾದ ಕಳ್ಳರು! ಖದೀಮರು ಸಿಕ್ಕಿ ಬಿದ್ದ ರೀತಿ ಮಾತ್ರ ರೋಚಕ!!

Kanpur: ಜ್ಯೋತಿಷಿ ಮನೆಯಲ್ಲಿ ಹಣ ಕದ್ದು ಪರಾರಿಯಾದ ಕಳ್ಳರು! ಖದೀಮರು ಸಿಕ್ಕಿ ಬಿದ್ದ ರೀತಿ ಮಾತ್ರ ರೋಚಕ!!

by Mallika
0 comments
Kanpur

Kanpur : ಕಳ್ಳ ಎಷ್ಟೇ ಚಾಣಾಕ್ಷತನದಿಂದ ಕಳ್ಳತನ ಮಾಡಿದರೂ ಆತ ಸಿಕ್ಕಿ ಬೀಳುವುದು ಖಂಡಿತ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಕಾನ್ಪುರದ(Kanpur)ಜ್ಯೋತಿಷಿಯೊಬ್ಬರ ಮನೆಯಲ್ಲಿ.

ಈ ಜ್ಯೋತಿಷಿಯೊಬ್ಬರ ಮನೆಯಲ್ಲಿ ಇತ್ತೀಚೆಗೆ ಹಣ ಕಳ್ಳತನವಾಗಿತ್ತು. ಇದರ ಪ್ರಕರಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. ಈ ಸಂಬಂಧ ಜ್ಯೋತಿಷಿ ಪೊಲೀಸರಿಗೆ ದೂರು ನೀಡಿದ್ದು, ಇದರ ಕುರಿತು ತನಿಖೆ ನಡೆಯುತ್ತಿತ್ತು.

ಪೊಲೀಸರು ಮನೆಗೆ ಬಂದು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ನಂತರ ಅಲ್ಲಿ ಕಂಡ ದೃಶ್ಯದಿಂದ ಕಳ್ಳನೋರ್ವ ಬಂದು ಕಳ್ಳತನ ಮಾಡಿರುವುದು ಕಂಡಿದೆ. ಆದರೆ ಆ ಸಿಸಿಟಿವಿ ದೃಶ್ಯದಲ್ಲಿ ಕಂಡ ಕಳ್ಳ ಎಲ್ಲಿ ಹೋದ? ಏನಾದ? ಎಂಬುವುದನ್ನು ಕಂಡು ಹಿಡಿಯಲು ಪೊಲೀಸರಿಗೆ ಸಾಧ್ಯವಾಗಿಲ್ಲ.

ಆದರೆ ಕದ್ದ ಕಳ್ಳರಿಗೆ ಈ ಸೋಶಿಯಲ್‌ ಮೀಡಿಯಾ ಉಪಯೋಗ ಮಾಡುವ ಖಯಾಲಿ ಇತ್ತು. ಹಾಗಾಗಿ ಲಕ್ಷಲಕ್ಷ ಕದ್ದ ಹಣದೊಟ್ಟಿಗೆ ಫೋಟೋ ತೆಗೆಯಲು ನಿರ್ಧಾರ ಮಾಡಿದ್ದಾರೆ. ಅದರಂತೆ ಒಂದು ಹೋಟೆಲ್‌ಗೆ ಹೋದ ಅವರು ಬೆಡ್ ಮೇಲೆ ಹಣವನ್ನು ಹರಡಿ, ಇನ್ನೋರ್ವ ಐನೂರರ ನೋಟಿನ ಕಂತೆಯನ್ನು ಹಿಡಿದು ಫೋಸ್‌ ನೀಡಿ ವೀಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ.

ಈ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿತ್ತು. ಇದು ಪೊಲೀಸರ ಕಣ್ಣಿಗೆ ಕೂಡಾ ಬಿದ್ದಿದೆ. ಕೂಡಲೇ ಅನುಮಾನಗೊಂಡ ಪೊಲೀಸರು ವೀಡಿಯೋ ಪರಿಶೀಲನೆ ಮಾಡಿದ್ದು, ಟ್ರ್ಯಾಕ್‌ ಮಾಡಿದಾಗ ಓರ್ವ ಆರೋಪಿಯನ್ನು ಬಂಧಿಸಿ, ವಿಚಾರಿಸಿದಾಗ ಈ ಕಳ್ಳತನ ಸುದ್ದಿ ಬೆಳಕಿಗೆ ಬಂದಿದೆ.

ಕದ್ದು ಆರೋಪಿ ಸಿಕ್ಕಿಬಿದ್ದಿದ್ದಾನೆ. ಆದರೆ ರೀಲ್ಸ್‌ ಮಾಡಿದ ಕಳ್ಳರು ಎಸ್ಕೇಪ್‌ ಆಗಿದ್ದು, ಬಂಧಿತ ಆರೋಪಿಗಳಿಂದ ಎರಡು ಲಕ್ಷಕ್ಕೂ ಹೆಚ್ಚು ಹಣ ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಅಡಿಕೆಗೆ ಎಲೆಚುಕ್ಕಿ ರೋಗ: ಕೇಂದ್ರಕ್ಕೆ 225 ಕೋಟಿ ರೂ.ಗಳ ಪರಿಹಾರಕ್ಕೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

You may also like

Leave a Comment