RBI Monetary Policy: ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್ (Repo Rate). ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ.ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಸಾಲಗಾರರಿಗೆ ಖುಷಿಯ ಸುದ್ದಿ ನೀಡಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಅವರು ಹಣಕಾಸು ನೀತಿ ಸಭೆಯ (RBI Monetary Policy) ನಿರ್ಣಯ ಪ್ರಕಟಿಸಿದ್ದು, ರೆಪೋ ದರವನ್ನು ಯಥಾಸ್ಥಿತಿಯನ್ನೇ ಮುಂದುವರಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಸತತ ನಾಲ್ಕನೇ ಬಾರಿ ರೆಪೋ ದರವನ್ನು ಯಥಾಸ್ಥಿತಿಯನ್ನು ಕಾಯ್ದುಕೊಂಡಂತೆ ಆಗಲಿದೆ. ಸದ್ಯ ಆರ್‌ಬಿಐ ರೆಪೋ ದರ ಶೇ.6.50ರಷ್ಟಿದ್ದು, ಇದರಿಂದ ರೆಪೋ ದರ ಹಾಗೆ ಮುಂದುವರಿಯುವ ಹಿನ್ನೆಲೆ ಸಾಲಗಾರರಿಗೆ ಯಾವುದೇ ಬಡ್ಡಿಯ ಹೊರೆಯಿರದು.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್‌ರವರು, ಅಕ್ಟೋಬರ್ 4ರಿಂದ 6 ರವರೆಗೆ ನಡೆದ ಹಣಕಾಸು ನೀತಿ ಸಭೆಯ ನಿರ್ಣಯವನ್ನು ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ್ದು, “ದೇಶದಲ್ಲಿ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಏಳಿಗೆಗೆ ಆರ್‌ಬಿಐ ಸಹಕಾರ ನೀಡುವ ಕುರಿತು ಯೋಚನೆ ಮಾಡಿದೆ. ಹೀಗಾಗಿ, ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಸಭೆ ತೀರ್ಮಾನ ಕೈಗೊಂಡಿರುವ ಬಗ್ಗೆ ತಿಳಿಸಿದ್ದಾರೆ. “ದೇಶದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ದರದ ಬೆಳವಣಿಗೆಯನ್ನು ಶೇ.6.50ರಷ್ಟು ಇರುವ ನಿರೀಕ್ಷೆಯಿದೆ. ಅದೇ ರೀತಿ, 2024-25ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.6.6ರಷ್ಟು ಇರಲಿದೆ” ಎಂದು ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Namma Metro: ಮೆಟ್ರೋ ರೈಲಿನಲ್ಲಿ ಸೈಲೆಂಟಾಗಿ ಗೋಬಿ ಸವಿದ ಆಸಾಮಿ:ಗೋಬಿ ತಿಂದವನ ಜೇಬಿಗೆ ಕೈ ಹಾಕಿದ್ದು ಯಾಕೆ ? ಪೊಲೀಸರು
