New Research: ಆಹಾರದ ಸವಿಯನ್ನು ತಿಳಿಯಲು ನೆರವಾಗುವ ನಾಲಿಗೆ ಉಪ್ಪು, ಸಿಹಿ, ಖಾರ ಹುಳಿ, ಕಹಿಯನ್ನು ಪತ್ತೆ ಹಚ್ಚುವುದು ಗೊತ್ತಿರುವ ವಿಚಾರ. ಆದರೆ, ಇದೀಗ ನಾಲಿಗೆಗೆ ಸಂಬಂಧಿಸಿದಂತೆ ವಿಜ್ಞಾನಿಗಳು ಮತ್ತೊಂದು ರೋಚಕ ಮಾಹಿತಿ ನೀಡಿದ್ದಾರೆ.
ನೇಚರ್ ಕಮ್ಯುನಿಕೇಶನ್ಸ್ ಜರ್ನಲ್‌ನಲ್ಲಿ ಸಂಶೋಧನಾ (Research) ವರದಿ ಪ್ರಕಟಿಸಿದ್ದು, ಹುಳಿ ರುಚಿಯನ್ನು ಪತ್ತೆಹಚ್ಚಲು ಸಹಾಯ ಮಾಡುವ ನಾಲಿಗೆ, ಅಮೋನಿಯಂ ಕ್ಲೋರೈಡ್ (Ammonium Chloride) ಗೆ ಪ್ರತಿಕ್ರಿಯೆ ನೀಡುತ್ತದೆ ಎಂದು ತಜ್ಞರು ಕಂಡುಕೊಂಡಿದ್ದಾರೆ.ಅಮೋನಿಯಂ ಕ್ಲೋರೈಡ್ ಒಟಿಒಪಿ1 ಅನ್ನು ಪ್ರಬಲವಾದ ಆಕ್ಟಿವೇಟ್ ಮಾಡುವ ಜೊತೆಗೆ ಇದು ಆಮ್ಲಗಳಿಗಿಂತ ಉತ್ತಮವಾಗಿ ಪ್ರತಿಕ್ರಿಯಿಸುತ್ತದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.
ಸ್ಕ್ಯಾಂಡಿನೇವಿಯನ್ (Scandinavian ) ನಲ್ಲಿ ತಯಾರಾಗುವ ಕೆಲ ಮಿಠಾಯಿಗಳಲ್ಲಿ ನಾವು ಇದನ್ನು ನೋಡಬಹುದು.ಇತ್ತೀಚಿನ ಸಂಶೋಧನೆಯ ಮೂಲಕ ಒಟಿಒಪಿ1 ಎಂಬ ನಾಲಿಗೆಯಲ್ಲಿರುವ ಪ್ರೋಟೀನ್ ಗ್ರಾಹಕದ ಮೂಲಕ ಹುಳಿ ರುಚಿಯನ್ನು ಪತ್ತೆ ಹಚ್ಚಲು ಕಾರಣವಾಗಿರುವ ಪ್ರೋಟೀನ್ (Protein) ಪತ್ತೆ ಮಾಡಿದೆ. ಈ ಪ್ರೋಟೀನ್ ನಾಲಿಗೆಯಲ್ಲಿನ ಜೀವಕೋಶಗಳ ಪೊರೆಗಳೊಳಗೆ ಇರುತ್ತದೆ. ಸಿಟ್ರಿಕ್ ಮತ್ತು ಆಸ್ಕೋರ್ಬಿಕ್ ಆಮ್ಲ ಸಮೃದ್ಧವಾಗಿರುವ ನಿಂಬೆ ಪಾನಕದ ಹಿಂದೆ ಒಟಿಒಪಿ1 ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ. ವಿನೆಗರ್‌ನಂತಹ ಇತರ ಆಮ್ಲೀಯ ಆಹಾರಗಳು ನಾಲಿಗೆಗೆ ತಗುಲಿದ ಸಂದರ್ಭ ಹುಳಿಯ ಅನುಭವವಾಗುತ್ತದೆ. ಅಮೋನಿಯಂ ಕ್ಲೋರೈಡ್ ಜೀವಕೋಶದೊಳಗಿನ ಹೈಡ್ರೋಜನ್ ಅಯಾನುಗಳ ಸಾಂದ್ರತೆಯ ಮೇಲೆ ಪರಿಣಾಮ ಬೀರುವ ಹಿನ್ನಲೆ ಇದು ಕೂಡ ಒಟಿಪಒಪಿ1 ಅನ್ನು ಪ್ರಚೋದಿಸುತ್ತದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ನನ್ನ ವಯಸ್ಸು 35, ಆದರೂ ನನ್ನ ಕನ್ಯತ್ವ ಹಾಗೇ ಉಂಟು !! ವಿಚಿತ್ರ ಸ್ಟೇಟ್ ಮೆಂಟ್ ನೀಡಿದ ಮಹಿಳೆ ಯಾರು ಗೊತ್ತಾ?
