Home » MLA Muniratna: ಶಾಸಕ ಮುನಿರತ್ನಗೆ ಎದುರಾಯ್ತು ಕಂಟಕ – ಹನಿಟ್ರಾಪ್ ಬಾಂಬ್ ಸಿಡಿಸಿದ ಮಹಿಳೆ

MLA Muniratna: ಶಾಸಕ ಮುನಿರತ್ನಗೆ ಎದುರಾಯ್ತು ಕಂಟಕ – ಹನಿಟ್ರಾಪ್ ಬಾಂಬ್ ಸಿಡಿಸಿದ ಮಹಿಳೆ

0 comments
MLA Muniratna

MLA Muniratna : ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ವಿರುದ್ಧ ಮಹಿಳೆಯೊಬ್ಬರು ಹನಿಟ್ರ್ಯಾಪ್‌ ಆರೋಪ ಮಾಡಿದ್ದಾರೆ. ರಾಜ್ಯ ರಾಜಕೀಯದಲ್ಲಿ (Karnataka Politics) ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಮುನ್ನಲೆಗೆ ಬಂದಿದೆ. ಮಾಜಿ ಸಚಿವ ಆರ್. ಆರ್. ನಗರ ಶಾಸಕರಾಗಿರುವ ಮುನಿರತ್ನ (MLA Muniratna) ವಿರುದ್ಧ ಮಹಿಳೆಯೊಬ್ಬಳು ಗಂಭೀರ ಆರೋಪ ಮಾಡಿದ್ದು,ತಮ್ಮಿಂದ ಹನಿಟ್ರ್ಯಾಪ್‌ ಮಾಡಿಸಿದ್ದಾರೆ. ಇದರ ಜೊತೆಗೆ, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

“ಒಕ್ಕಲಿಗರು ರಾಜರಾಜೇಶ್ವರಿ ನಗರ” (Vokkaligas Rajarajeshwarinagar) ಎಂಬ ಫೇಸ್ಬುಕ್ ಪೇಜ್ನಲ್ಲಿ ಮಹಿಳೆಯೊಬ್ಬರು ಮಾಜಿ ಸಚಿವ ಮುನಿರತ್ನ ವಿರುದ್ಧ ನೇರ ಆರೋಪ ಮಾಡಿದ್ದಾರೆ. “ನನ್ನ ಜೀವನದ ದುರಂತಕ್ಕೆ ಮುನಿರತ್ನ ಅವರೇ ಹೊಣೆ. ಯಾವ ಕಾರಣಕ್ಕೂ ಈ ಹೋರಾಟ ಕೈ ಬಿಡಲ್ಲ. ಮುನಿರತ್ನ ಅವರ ಹನಿಟ್ರ್ಯಾಪ್ ದಂಧೆ ಬಯಲಿಗೆ ಎಳೆಯುತ್ತೇನೆ” ಎಂದು ಹೇಳಿಕೊಂಡಿದ್ದಾರೆ.

ಮುನಿರತ್ನ ಅವರು ನನ್ನನ್ನು ಬಳಸಿಕೊಂಡು ಹನಿ ಟ್ರ್ಯಾಪ್ ಮಾಡಿಸಿದ್ದು, ಇದರ ಜೊತೆಗೆ ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾರೆ. ಅವರ ಮೇಲಿದ್ದ ನಂಬಿಕೆಯಲ್ಲಿ ನಾನು ಅವರ ಜತೆಗೆ ಹೋಗಿದ್ದೆ. ಆದರೆ, ಆ ನಂಬಿಕೆಗೆ ಅವರು ದ್ರೋಹ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಈ ರೀತಿ ಆರೋಪ ಮಾಡಿರುವ ಮಹಿಳೆ ತಮ್ಮ ಗುರುತನ್ನು ಮರೆಮಾಚಿಕೊಂಡು ವಿಡಿಯೊ ಮಾಡಿ ಅಪ್ಲೋಡ್‌ ಮಾಡಿದ್ದು, ಸದ್ಯ, ಮುನಿರತ್ನ ಅವರಿಗೆ ಸಂಕಷ್ಟ ಎದುರಾಗಲಿದೆಯೇ ಎಂಬ ಪ್ರಶ್ನೆ ಮನೆ ಮಾಡಿದೆ.

 

ಇದನ್ನು ಓದಿ: ಇನ್ಮೇಲೆ ರೆಸ್ಟೋರೆಂಟ್​​ಗಳಲ್ಲಿ ಈ ಮೆನು ಕಡ್ಡಾಯ – ಸರ್ಕಾರದಿಂದ ಬಂತು ಮಹತ್ವದ ಆದೇಶ

You may also like

Leave a Comment