3
Rahul Gandhi : ರಾಹುಲ್ ಗಾಂಧಿ (Rahul Gandhi) ಒಳ್ಳೆಯ ನಾಯಕ, ಆದರೆ ಉತ್ತಮ ವಾಗ್ಮಿ ಅಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ನ ವಿಜಯ್ ವಾಡತ್ತಿವಾರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಎಂಐಟಿ ವರ್ಲ್ಡ್ ಪೀಸ್ ವಿಶ್ವವಿದ್ಯಾನಿಲಯದಲ್ಲಿ ಸ್ಕೂಲ್ ಆಫ್ ಗವರ್ನೆನ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರಾಜಕೀಯದಲ್ಲಿ ಉತ್ತಮ ವಾಗ್ಮಿಗಳ ಪ್ರಾಮುಖ್ಯತೆಯನ್ನು ವಿವರಿಸುವಾಗ ವಿಜಯ್ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದಾರೆ.
ರಾಹುಲ್ ಗಾಂಧಿ ಒಬ್ಬ ಅರ್ಹ ನಾಯಕ. ಆದರೆ, ಅವರು ಉತ್ತಮ ವಾಗ್ಮಿ ಅಲ್ಲ. ಮೊದಲು ಉತ್ತಮ ವಾಗ್ಮಿಯಾಗಬೇಕು. ಜನರ ಮುಂದೆ ಮಾತನಾಡಬೇಕಾದಾಗಲೆಲ್ಲ ಉದಾಹರಣೆಗಳನ್ನು ನೀಡಿ ಮಾತನಾಡಬೇಕು ಎಂದು ವಡೆವಾ ಹೇಳಿದರು. ಅಲ್ಲದೆ, ಹಿರಿಯ ನಾಯಕರು ರಾಜಕೀಯದಲ್ಲಿ ಯುವ ಪೀಳಿಗೆಗೆ ಅವಕಾಶ ನೀಡಬೇಕು ಎಂದು ಹೇಳಿದರು.
