BBK Season 10: ಬಿಗ್‌ಬಾಸ್ ಕನ್ನಡ ಸೀಸನ್-10(BBK Season 10) ಆರಂಭವಾಗಿದ್ದು, ರಿಯಾಲಿಟಿ ಶೋ ಪ್ರೇಕ್ಷಕರಿಗೆ ಇನ್ನು ಕಣ್ಣಿಗೆ ರಸದೌತಣ ನೀಡಲು ಕಲರ್ಸ್ ಕನ್ನಡ ಸಜ್ಜಾಗಿದೆ. ಅದರ ಮೊದಲ ಭಾಗವಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಸ್ಪರ್ಧಿಯಾಗಿ ಬಂದಿದ್ದು, ಅನಂತರ ನಾನು ಅತಿಥಿ ಎಂದು ಹೇಳಿ ಎಲ್ಲರಿಗೂ ಶಾಕ್ ನೀಡಿದ್ದರು.
ಪ್ರದೀಪ್ ಈಶ್ವರ್ ಅವರು ಬಿಗ್‌ಬಾಸ್ ಕನ್ನಡ ಪ್ರೋಗ್ರಾಂಗೆ ಬಂದಿದ್ದನ್ನು ಕಂಡು ರಾಜಕೀಯವಾಗಿ ಬಹಳ ಚರ್ಚೆಯಾಗಿತ್ತು. ಇದಾದ ನಂತರ ಬಳಿಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಆದೇಶದಂತೆ ಮನೆಯಿಂದ ಹೊರಬಂದಿದ್ದಾರೆ.
ವಿರೋಧಕ್ಕೆ ಮಣಿದ ಬಿಗ್‌ಬಾಸ್ ಈ ಆದೇಶ ಹೊರಡಿಸದ್ರಾ? ಅಥವಾ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಯಿಂದ ಹೊರಬಂದರಾ ಎಂಬುವುದು ಗೊತ್ತಿಲ್ಲ. ಟಿವಿಯಲ್ಲಿ ತೋರಿಸಿರೋ ಹಾಗೇ ಈಶ್ವರ್ ಅವರು ಬಿಗ್‌ಬಾಸ್ ಆದೇಶದಿಂದ ಹೊರಬಂದಿದ್ದಾರೆ ಎಂಬುವುದು ಕಣ್ಣಿಗೆ ಕಾಣುವ ಸತ್ಯ.
ಇತ್ತ ಕಡೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಈಶ್ವರ್ ಅವರು ಹೇಗೆ ಬಿಗ್‌ಬಾಸ್ ಎಂಬ ರಿಯಾಲಿಟಿ ಶೋಗೆ ಹೋದರು? ಇದರ ಕುರಿತು ಕನ್ನಡ ಹೋರಾಟಗಾರ ಸಿಎಂ ಶಿವಕುಮಾರ್ ಪ್ರದೀಪ್ ವಿರುದ್ಧ ಸ್ಪೀಕರ್ ಅವರಿಗೆ ಲಿಖಿತ ದೂರು ನೀಡಿದ್ದಾರೆ. ಈಗ ಪ್ರದೀಶ್ ಈಶ್ವರ್ ದೊಡ್ಮನೆಯಿಂದ ಹೊರಗೆ ಬಂದಿದ್ದು, ಮುಂದೇನಾಗುತ್ತೋ ಎನ್ನುವ ಕುತೂಹಲ ಜನರಲ್ಲಿ ಇದೆ.
ಇದನ್ನೂ ಓದಿ: Annabhagya Scheme: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್‌ನ್ಯೂಸ್! ಅನ್ನಭಾಗ್ಯ ಹಣ ಬಂದಿದೆಯೇ? ಈ ರೀತಿ ಚೆಕ್ ಮಾಡಿ
