Pakistan: ಪಾಕಿಸ್ತಾನ (Pakistan)ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ನಮ್ಮ ನೆರೆಯ ದೇಶ ಹಾಗೂ ಭಾರತದ ಮೇಲೆ ಪ್ರತಿ ಭಾರಿ ವೈಷಮ್ಯ ಬೆಳೆಸಿಕೊಳ್ಳುವ ದೇಶ ಎಂದರೇ ತಪ್ಪಾಗದು!! ಆದರೆ,ಇಂದಿಗೂ ನಮ್ಮ ಭಾರತದಲ್ಲಿಯೇ ಪಾಕಿಸ್ತಾನವಿದೆ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ.
ಅರೇ ಇದೇನಿದು ಎಂದು ಯೋಚಿಸುತ್ತಿದ್ದೀರಾ??ಭಾರತದಲ್ಲಿ ಪಾಕಿಸ್ತಾನ ಇರುವುದಕ್ಕೆ ಹೇಗೆ ಸಾಧ್ಯ?? ಎಂದು ನೀವೂ ಅಚ್ಚರಿಗೆ ಒಳಗಾದರೆ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸಂಗತಿ! ಬಿಹಾರದ ಪುರ್ನಿಯಾ ಜಿಲ್ಲೆಯ ಶ್ರೀನಗರ ಬ್ಲಾಕ್‌ನ ಸಿಂಘಿಯಾ ಪಂಚಾಯತ್ ನಲ್ಲಿ ಪಾಕಿಸ್ತಾನ ಎಂಬ ಹಳ್ಳಿಯಿದ್ದು, ಪುರ್ನಿಯಾ ಎಂಬ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿ ಪಾಕಿಸ್ತಾನವಿದೆಯಂತೆ.

ಸ್ಥಳೀಯರ ಮಾಹಿತಿ ಅನುಸಾರ, ಸುಮಾರು ಶತಮಾನಗಳಿಂದಲೇ ಈ ಗ್ರಾಮಕ್ಕೆ ಪಾಕಿಸ್ತಾನ ಎಂಬ ಹೆಸರಿದೆಯಂತೆ. ಬಹುತೇಕ ಹಿಂದೂ ಧರ್ಮೀಯರೇ ಈ ಪಾಕಿಸ್ತಾನ ಎಂಬ ಹಳ್ಳಿಯಲ್ಲಿ ನೆಲೆಸಿದ್ದು, ಅದರಲ್ಲಿ ವಿಶೇಷವಾಗಿ ಬುಡಕಟ್ಟು ಸಮುದಾಯಗಳೂ ಇಲ್ಲಿ ನೆಲೆಸಿವೆ. ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು ಯಾವುದು ಕೂಡ ಅಭಿವೃದ್ಧಿಯಾಗಿಲ್ಲ.
ಡಾಂಬರೇ ಕಾಣದೇ ರಸ್ತೆಗಳು ಹದಗೆಟ್ಟು ಸರಿಯಾದ ರಸ್ತೆ ಸಂಪರ್ಕವಿಲ್ಲದ ರಸ್ತೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇದರ ಜೊತೆಗೆ,ಈ ಗ್ರಾಮಕ್ಕೆ ಪಾಕಿಸ್ತಾನ ಎಂಬ ಹೆಸರಿರುವುದರಿಂದ ಗ್ರಾಮವನ್ನು ಪ್ರವೇಶಿಸಲು ಹೆಚ್ಚಿನ ಮಂದಿ ಹಿಂದೂ ಮುಂದು ನೋಡುತ್ತಾರೆ. ಪಾಕಿಸ್ತಾನಎಂಬ ಹೆಸರಿನಿಂದಾಗಿ ಹೆಚ್ಚಿನ ಮಂದಿ ಮದುವೆಯಾಗಲು ನಕಾರ ಧೋರಣೆ ತೋರುತ್ತಿದ್ದಾರೆ ಎಂದು ಇಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹೀಗಾಗಿ ಪಾಕಿಸ್ತಾನ ಗ್ರಾಮದ ಹೆಸರನ್ನು ಬದಲಾಯಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Tulsi Growing: ಇಂತಹ ಮನೆಗಳಲ್ಲಿ ತಪ್ಪಿಯೂ ತುಳಸಿಗಿಡ ನೆಡಬಾರದು, ಇಲ್ಲಿದೆ ನೋಡಿ ಅಸಲಿ ಕಾರಣ
