Health Tips: ಲೈಂಗಿಕ ಸಂಪರ್ಕಕ್ಕೂ ಮುನ್ನ ದೇಹ ತಯಾರಾಗಿರುವುದೂ ಕೂಡಾ ಬಹಳ ಮುಖ್ಯ. ಈ ಕ್ರಿಯೆಯು ಸಂತೋಷದಾಯಕವಾಗಿ ಆಗಬೇಕೆಂದರೆ ಆಹಾರದ ಮೇಲೆಯೂ ಗಮನ ನೀಡಬೇಕು. ಸಿಕ್ಕಿದ್ದನ್ನೆಲ್ಲ ಕಂಠಪೂರ್ತಿ ತಿಂದರೆ, ಈ ಕ್ರಿಯೆ ಅಂದುಕೊಂಡಂತೆ ಸಹಜವಾಗಿ ಆಗದು. ಅದಕ್ಕಾಗಿಯೇ, ಕೆಲವು ಆಹಾರಗಳನ್ನು ದೂರವಿಟ್ಟರೆ ಒಳ್ಳೆಯದು. ಯಾಕೆಂದರೆ ಕೆಲವು ಆಹಾರಗಳು ಲೈಂಗಿಕಾಸಕ್ತಿ ಹೆಚ್ಚಿಸುತ್ತವೆ. ಆದರೆ ಕೆಲವು ಆಹಾರಗಳು ಮಿಲನದ ಸಂದರ್ಭಕ್ಕೂ ಮುನ್ನ ಸೇವಿಸುವುದು ಆರೋಗ್ಯಕಾರಿ (Health tips) ಅಲ್ಲ ಎನ್ನುವುದು ವಾಸ್ತವ. ಹೌದು, ನಮ್ಮ ಭಾರತೀಯ ಮೂಲದ ಪುರಾತನ ಆಯುರ್ವೇದವೂ (Ayurveda tips) ಕೂಡಾ ಇದನ್ನು ಸಾಬೀತು ಮಾಡಿದೆ.
ಮುಖ್ಯವಾಗಿ ದೈಹಿಕ ಸಾಂಗತ್ಯ ಎಂಬುದೊಂದು ಸುಖಕರ ಕ್ರಿಯೆಯಾಗಬೇಕಾದರೆ, ದೇಹಕ್ಕೆ ಸರಿಯಾಗಿ ನೀರಿನಂಶ ಸಿಗಬೇಕು. ದೇಹ ಹೈಡ್ರೇಟ್ ಆಗಿರಬೇಕು. ವ್ಯಾಯಾಮದಲ್ಲಿ ಬೆವರಿಳಿದಂತೆ ನೀರಿನ ಸೇವನೆಯೂ ಮುಖ್ಯವೆಂಬುದು ನಮಗೆ ಹೇಗೆ ತಿಳಿದಿದೆಯೋ ಹಾಗೆಯೇ ಇದೂ ಕೂಡಾ. ಹೀಗಾಗಿ, ಆದಷ್ಟೂ ಹೊಟ್ಟೆ ಲಘುವಾಗಿರುವುದು ಮುಖ್ಯ. ಹೊಟ್ಟೆ ಹಗುರವಾಗಿದ್ದು, ಅತ್ಯಧಿಕ ಹೆವೀ ಅನಿಸುವ ಆಹಾರದಿಂದ ದೂರವಿದ್ದಷ್ಟೂ ಒಳ್ಳೆಯದು. ಅತಿಯಾಗಿ ತಿಂದಷ್ಟೂ ನಿದ್ದೆ ಎಳೆಯುತ್ತದೆ. ಮತ್ತು ಸರಸ ಸಲ್ಲಾಪಗಳಿಗೆ ಆಸ್ಪದ ಕಡಿಮೆ. ಅತಿಯಾದ ಜಿಡ್ಡುಯುಕ್ತ ಆಹಾರಗಳಿಂದ, ಹೊಟ್ಟೆ ಭಾರವೆನಿಸುವ ಸಿಹಿ ತಿನಿಸುಗಳಿಂದ ದೂರವಿರುವುದು ಅತ್ಯಂತ ಅವಶ್ಯಕ.
ಇನ್ನು ಆಲ್ಕೋಹಾಲ್ ಸೇವಿಸಿದರೆ, ಸೆಕ್ಸ್ ಇನ್ನಷ್ಟು ಮಧುರವಾಗಿ, ಅದ್ಭುತವಾಗಿ ಇರುತ್ತದೆ ಅನ್ನುವ ಬಹುತೇಕರ ಊಹೆ ತಪ್ಪು. ಇದು ನಿಜವಲ್ಲ. ಹಾಗೆ ನೋಡಿದರೆ, ಆಲ್ಕೋಹಾಲ್ ಲೈಂಗಿಕ ಕ್ರಿಯೆ ಬದಲಾಗಿ ನಿದ್ರೆಗೆ ದೂಡುತ್ತದೆ.
ಇನ್ನು ಲೈಂಗಿಕ ಸೇರುವಿಕೆ ಮುನ್ನ ಅತಿಯಾದ ಮಸಾಲೆಯುಕ್ತ, ಸ್ಪೈಸೀ ಆಹಾರ ತಿನ್ನುವುದೂ ಕೂಡಾ ಒಳ್ಳೆಯದಲ್ಲ. ನಿಮ್ಮ ಸೆಕ್ಸ್ ಲೈಫ್ ಸ್ಪೈಸೀಯಾಗಿರಬೇಕೆಂದರೆ, ಸ್ಪೈಸೀ ಆಹಾರಗಳಿಂದ ದೂರವಿರಿ. ಅತೀ ಮಸಾಲೆಯುಕ್ತ ಆಹಾರಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಆಸಿಡ್‌ಗಳ ಉತ್ಪತ್ತಿಯನ್ನು ಹೆಚ್ಚು ಮಾಡುವುದಷ್ಟೇ ಅಲ್ಲ, ಇದರ ಪರಿಣಾಮವಾಗಿ ಆಗಾಗ ಮೂತ್ರವಿಸರ್ಜನೆಯಂತಹ ಸಮಸ್ಯೆಗಳು ಬರುತ್ತವೆ.
ಅದಲ್ಲದೆ ಫ್ರೆಂಚ್ ಫ್ರೈಸ್‌ನಂತಹ ಜಂಕ್‌ಗಳು ಮುಖ್ಯವಾಗಿ ಪುರುಷರ ಸೆಕ್ಸ್ ಹಾರ್ಮೋನು ಟೆಸ್ಟೋಸ್ಟೀರಾನ್ ಮಟ್ಟವನ್ನು ನಿಗ್ರಹಿಸುವುದಷ್ಟೇ ಅಲ್ಲ, ರಕ್ತ ಪರಿಚಲನೆಯ ಚುರುಕುತನವನ್ನೂ ಕಡಿಮೆಗೊಳಿಸುತ್ತದೆ.
ಶಕ್ತಿವರ್ಧಕ ಶೇಕ್ ಕುಡಿದು ಶಕ್ತಿ ವರ್ಧಿಸಿಕೊಂಡು ಲೈಂಗಿಕ ಸಂಪರ್ಕಕ್ಕೆ ರೆಡಿಯಾಗುತ್ತೇನೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು, ಯಾಕೆಂದರೆ, ಶಕ್ತಿವರ್ಧಕಗಳಲ್ಲಿ ಅತಿಯಾಗಿ ಸಕ್ಕರೆ ಹಾಗೂ ಕೃತಕ ಸಿಹಿಕಾರಕಗಳಿರುವುದರಿಂದ ಇವು ತಾತ್ಕಾಲಿಕವಾಗಿ ದಿಢೀರ್ ಶಕ್ತಿಯನ್ನು ನೀಡುವಲ್ಲಿ ಮಾತ್ರ ಸಹಾಯ ಮಾಡುತ್ತವೆ.
ಇನ್ನು ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸೇವನೆಯ ಬಳಿಕ ಬಾಯಿಯಿಂದ ಬರುವ ದುರ್ನಾತದೊಂದಿಗೆ ಯಾರಿಗೂ ಸೆಕ್ಸ್ ಸಹವಾಸ ಸಾಧ್ಯವಾಗದು. ಹಾಗಾಗಿ, ಸಹಜವಾಗಿಯೇ ಸೆಕ್ಸ್‌ಗೂ ಮುನ್ನ, ಈರುಳ್ಳಿ ಬೆಳ್ಳುಳ್ಳಿ ನಿಮಗೆಷ್ಟೇ ಪ್ರಿಯವಾಗಿದ್ದರೂ ದೂರ ಇರುವುದೇ ಒಳ್ಳೆಯದು.
ಇದನ್ನೂ ಓದಿ: ಈ ರಾಜ್ಯಗಳಲ್ಲಿ ಜಾತಿ ಗಣತಿಗೆ ಮುಂದಾದ ಕಾಂಗ್ರೆಸ್- ಏನಿದು ‘ಕೈ’ ನಾಯಕರ ಮಾಸ್ಟರ್ ಪ್ಲಾನ್ ?!
