Home » Pressure Cooker: ಕುಕ್ಕರ್’ನ ರಬ್ಬರ್ ಬೇಗ ಹಾಳಾಗುತ್ತಿದೆಯೇ ?! ಈ ಸಿಂಪಲ್ ಟ್ರಿಕ್ಸ್ ಬಳಸಿ, ಹಲವು ವರ್ಷ ಉಪಯೋಗಿಸಿ

Pressure Cooker: ಕುಕ್ಕರ್’ನ ರಬ್ಬರ್ ಬೇಗ ಹಾಳಾಗುತ್ತಿದೆಯೇ ?! ಈ ಸಿಂಪಲ್ ಟ್ರಿಕ್ಸ್ ಬಳಸಿ, ಹಲವು ವರ್ಷ ಉಪಯೋಗಿಸಿ

0 comments
Pressure Cooker

Pressure Cooker: ಕುಕ್ಕರ್ ಇದು ಬಹಳಷ್ಟು ಅನಿಲ ಮತ್ತು ಸಮಯವನ್ನು ಉಳಿಸುತ್ತದೆ. ಆದರೆ ಕೆಲವೊಮ್ಮೆ ಕುಕ್ಕರ್‌ ರಬ್ಬರ್ ಹಾಳಾಗುತ್ತೆ . ಕುಕ್ಕರ್ ರಬ್ಬರ್ ಹಳೆಯದಾಗಿದ್ದರೆ, ಹಾಳಾಗಿದ್ದಾರೆ ಅಡುಗೆ ಮಾಡಲು ಸಮಸ್ಯೆ ಆಗುತ್ತೆ. ಹೌದು, ರಬ್ಬರ್ ಸರಿಯಾಗಿ ಇಲ್ಲವಾದರೆ ಕುಕ್ಕರ್ ನಿಂದ ನೀರೆಲ್ಲಾ ಹೊರಗೆ ಬಂದು ಆಹಾರ ಕೂಡ ಸರಿಯಾಗಿ ಬೇಯುವುದಿಲ್ಲ. ಕುಕ್ಕರ್ ನಲ್ಲಿ ಅಡುಗೆ ಮಾಡುವ ಪ್ರತಿಯೊಬ್ಬರಿಗೂ ಇದೊಂದು ದೊಡ್ಡ ಸಮಸ್ಯೆ(Pressure Cooker Hacks) ಆಗಿದೆ.

ಮುಖ್ಯವಾಗಿ ಕುಕ್ಕರ್ ನಲ್ಲಿ ಅಡುಗೆ ಮಾಡುವುದರಿಂದ ಸಮಯ ಉಳಿತಾಯವಾಗುತ್ತದೆ. ಮತ್ತು ಆಹಾರದ ರುಚಿ ಹೆಚ್ಚಿಸುತ್ತದೆ. ಹಾಗಾಗಿ ಇದರ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಇದರಲ್ಲಿ ಮುಖ್ಯವಾಗಿ ಬೇಕಾಗುವುದು ರಬ್ಬರ್.
ಹೌದು, ಈ ರಬ್ಬರ್ ತ್ವರಿತವಾಗಿ ಹಾಳಾಗುವುದನ್ನು ತಪ್ಪಿಸಲು ಈ ಮಾರ್ಗಗಳನ್ನು ಅನುಸರಿಸಿ.

ನೀವು ಪ್ರತಿಬಾರಿ ಅಡುಗೆ ಮಾಡಿದಾಗ ಕೆಲವರು ಕುಕ್ಕರ್ ರಬ್ಬರನ್ನು ತೊಳೆಯದೆ ಹಾಗೇ ಇಡುತ್ತಾರೆ. ಇದು ರಬ್ಬರ್ ಹಾಳಾಗಲು ಮುಖ್ಯ ಕಾರಣವಾಗಿದೆ. ಹಾಗಾಗಿ ಅಡುಗೆಯ ಬಳಿಕ ರಬ್ಬರನ್ನು ಚೆನ್ನಾಗಿ ತೊಳೆದು ಇಡಿ. ಇದರಿಂದ ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ.

ಕೆಲವೊಮ್ಮೆ ಅವಸರದಲ್ಲಿ ಕುಕ್ಕರ್ ಮುಚ್ಚಳದ ಜೊತೆಗೆ ರಬ್ಬರ್ ಇಡುತ್ತೇವೆ. ಮತ್ತು ಮುಚ್ಚಳವನ್ನು ತಲೆಕೆಳಗಾಗಿ ಇಡುತ್ತೇವೆ. ಇದರಿಂದ ರಬ್ಬರ್ ಮೇಲೆ ಒತ್ತಡ ಹೆಚ್ಚಾಗಿ ಅದು ಬೇಗನೆ ಹಾಳಾಗುತ್ತದೆ.

ರಬ್ಬರ್ ವಾಶ್ ಮಾಡಲು ಡಿಶ್ ವಾಶ್ ಬಳಸಬೇಡಿ. ಇದರಿಂದ ರಬ್ಬರ್ ಸಡಿಲಗೊಂಡು ಬೇಗನೆ ಹಾಳಾಗುತ್ತದೆ. ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಹಾಗೇ ಕುಕ್ಕರ್ ರಬ್ಬರ್ ಅನ್ನು ಸ್ವಚ್ಛಗೊಳಿಸಲು ಸೋಪ್ ಮತ್ತು ನೀರಿನಿಂದ ತೊಳೆಯಿರಿ.

You may also like

Leave a Comment