Home » Body Builder: ಜಿಮ್ ಮುಗಿಸಿ ಸ್ನಾನಕ್ಕೆ ಹೋದ ಖ್ಯಾತ ಬಾಡಿ ಬಿಲ್ಡರ್ – ಸ್ನಾನ ಮಾಡುತ್ತಾ ಬಾತ್ರೂಮ್ನಲ್ಲೇ ಹೆಣವಾದ ?!!

Body Builder: ಜಿಮ್ ಮುಗಿಸಿ ಸ್ನಾನಕ್ಕೆ ಹೋದ ಖ್ಯಾತ ಬಾಡಿ ಬಿಲ್ಡರ್ – ಸ್ನಾನ ಮಾಡುತ್ತಾ ಬಾತ್ರೂಮ್ನಲ್ಲೇ ಹೆಣವಾದ ?!!

1 comment
Body Builder

Body Builder: ಇತ್ತೀಚಿನ ದಿನಗಳಲ್ಲಿ ಹದಿಹರೆಯದ ವಯಸ್ಸಲ್ಲೇ ಹೃದಾಯಘಾತದಿಂದ (Heart Attack) ಮೃತಪಡುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. 2021ರಲ್ಲಿ ಮಿಸ್ಟರ್ ತಮಿಳುನಾಡು (Mister Tamil Nadu) ಪ್ರಶಸ್ತಿ ಗೆದ್ದಿದ್ದ ಬಾಡಿ ಬಿಲ್ಡರ್ (Body Builder)ಯೋಗೇಶ್ (41) ಎಂಬ ವ್ಯಕ್ತಿ ಜಿಮ್ ಮಾಡಿದ ಬಳಿಕ ಸ್ನಾನಕ್ಕೆಂದು ಹೋದಾತ ಮೃತಪಟ್ಟ ಘಟನೆ ವರದಿಯಾಗಿದೆ.

ಎಂದಿನಂತೆ ಜಿಮ್ಗೆ ತೆರಳಿದ್ದ ಯೋಗೇಶ್ ಜಿಮ್ಗೆ ಬಂದಿದ್ದ ಯುವಕರಿಗೆ ಟ್ರೈನಿಂಗ್ ನೀಡಿದ್ದು, ಆ ಬಳಿಕ, ನಂತರ ಸ್ನಾನ ಮಾಡುವುದಕ್ಕೆಂದು ಬಾತ್ ರೂಮಿಗೆ ತೆರಳಿದ್ದು, ಆದರೆ ಸ್ನಾನಕ್ಕೆ ಹೋದವರು ತುಂಬಾ ಸಮಯವಾದರೂ ಹೊರ ಬಾರದೇ ಇದ್ದ ಹಿನ್ನೆಲೆ ಜಿಮ್ನಲ್ಲಿದ್ದ ಕೆಲವು ಯುವಕರಿಗೆ ಅನುಮಾನ ಬಂದು ತಕ್ಷಣ ಬಾತ್ ರೂಮಿಗೆ ಹೋಗಿ ಪರಿಶೀಲಿಸಿದ ಸಂದರ್ಭ ಯೋಗೇಶ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ದೃಶ್ಯ ನೋಡಿದ್ದಾರೆ.

ಯೋಗೇಶ್ ಅವರನ್ನು ತಕ್ಷಣವೇ ಸ್ಥಳೀಯ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಿಸಿದಾಗ ಯೋಗೇಶ್‌ನನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಯೋಗೇಶ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಯೋಗೇಶ್ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಡಪಡಿಸಿದ್ದಾರೆ. ಯೋಗೇಶ್ ಅವರ ನಿಧನದಿಂದ ಅವರ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳಲ್ಲಿ ದುಃಖದ ಛಾಯೆ ಮಡುಗಟ್ಟಿದೆ. ಯೋಗೇಶ್‌ ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದುz ಫಿಟ್ ನೆಸ್ ಗೆ ಹೆಚ್ಚಿನ ಆದ್ಯತೆ ನೀಡಿದ ಯೋಗೇಶ್ ಇದ್ದಕಿದ್ದಂತೆ ಸಾವಿನ ಕದ ತಟ್ಟಿರುವುದು ಎಲ್ಲರಿಗೂ ಅಚ್ಚರಿಯನ್ನು ಉಂಟುಮಾಡಿದೆ.

You may also like

Leave a Comment