Mangalore: ರಾಜ್ಯದಲ್ಲಿ ಕೆಲ ಸಮಯದ ಹಿಂದೆ ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶವಿಲ್ಲ ಎಂಬ ಸುದ್ದಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಇದಕ್ಕಾಗಿ ಹಿಂದೂ ವ್ಯಾಪಾರಿಗಳೆಲ್ಲರೂ ಸೇರಿ ಸಂಘವನ್ನು ಕೂಡ ಕಟ್ಟಿಕೊಂಡಿದ್ದ ರಾಜ್ಯದಲ್ಲಿ ಭಾರಿ ಸುದ್ದಿಯಾಗಿತ್ತು. ಇದೀಗ ಮಂಗಳೂರಿನ(mangalore) ಮಂಗಳಾದೇವಿ ನವರಾತ್ರಿ ಉತ್ಸವ ಹತ್ತಿರ ಆಗುತ್ತಿದ್ದು ಇದರಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಉಂಟೋ ಇಲ್ಲವೋ ಎಂಬ ಗೊಂದಲ ಸೃಷ್ಟಿಯಾಗಿದೆ.
ಹೌದು, ಮುಸ್ಲಿಂ ವ್ಯಾಪಾರಿಗಳಿಗೆ ಹಿಂದೂ ಜಾತ್ರೆಗಳಲ್ಲಿ ಅವಕಾಶ ಇಲ್ಲ ಎನ್ನುವುದಕ್ಕೆ ಮೂಲ ಕರಾವಳಿಯೇ. ಇದರ ಬೀಜ ಬಿತ್ತಿದ್ದು ಕರಾವಳಿಯಲ್ಲಿಯೇ. ಇದೀಗ ಕರಾವಳಿಯ ಪ್ರಸಿದ್ಧ ದೇವಾಲವಯವಾದ ಮಂಗಳಾ ದೇವಿಯ ನವರಾತ್ರಿ ಉತ್ಸವ ಹತ್ತಿರಾಗುತ್ತಿದ್ದು, ಅ.15ರಿಂದ 24ರವರೆಗೆ ನವರಾತ್ರಿ ಜಾತ್ರಾ ಮಹೋತ್ಸವ ನಡೆಯಲಿದೆ. ಈ ವೇಳೆ ಅಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ ಎಂಬ ಆರೋಪ ಎದುರಾಗಿದೆ.
ಸದ್ಯ ಈ ಉತ್ಸವದಲ್ಲಿ ಮಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಇಲ್ಲ ಎಂಬ ವಿಚಾರ ಹರಿದಾಡುತ್ತಿದ್ದಂತೆ ಇದೀಗ ದ.ಕ ಮತ್ತು ಉಡುಪಿ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯಿಂದ ಡಿಸಿಗೆ ದೂರು ನೀಡಲಾಗಿದೆ. ಇದರಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೂ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ದಕ್ಷಿಣ ಕನ್ನಡ ಉಡುಪಿ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯಿಂದ ದೂರು ನೀಡಲಾಗಿದೆ.
ಅಂದಹಾಗೆ ಸದ್ಯ ನವರಾತ್ರಿ ಹಿನ್ನೆಲೆಯಲ್ಲಿ ಅಂಗಡಿ ಜಾಗದ ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು ದೇವಳದ ಮುಂಭಾಗ ರಥಬೀದಿ ಮಂಗಳೂರು ಮಹಾನಗರ ಪಾಲಿಕೆಗೆ ಸೇರಿದೆ. ಪಾಲಿಕೆ ರಸ್ತೆಯಾದ್ರೂ ದೇವಸ್ಥಾನದ ಆಡಳಿತದಿಂದಲೇ ವ್ಯಾಪಾರದ ಜಾಗ ಹರಾಜು ನಡೆಯುತ್ತಿದೆ. ಇದೀಗ ವ್ಯಾಪಾರಸ್ಥರ ಸಂಘದವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವುದರಿಂದ ದೇವಳ ಕಛೇರಿ ಮುಂದೆ ಏನು ನಿರ್ಧಾರ ಕೈಗೊಳ್ಳುತ್ತದೆ ಎಂದು ನೋಡಬೇಕಿದೆ.
