ಕಡಬ: ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ಅನಂತರ ಕುಕ್ಕೆ ಸುಬ್ರಹ್ಮಣ್ಯದತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಯಾತ್ರಾರ್ಥಿಯೊಬ್ಬರಿಗೆ ಎದೆನೋವು ಕಾಣಿಸಿಕೊಂಡಿದ್ದು, ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಸಾವನ್ನಪ್ಪಿದ್ದ ಘಟನೆಯೊಂದು ವರದಿಯಾಗಿದೆ.
ನಾಗರಾಜ್ (36 ವರ್ಷ) ಮೃತಪಟ್ಟ ವ್ಯಕ್ತಿ. ಇವರು ಬೀದರ್ ಜಿಲ್ಲೆಯ ಹಮನಬಾದ್ ತಾಲೂಕಿನ ಧುಮನಸೂರ ಗ್ರಾಮದವರು. ಅ.10ರಂದು ಈ ಘಟನೆ ನಡೆದಿದೆ. ಎದೆನೋವು ಬಂದಾಗ ನಾಗರಾಜ್ ಅವರ ಸ್ನೇಹಿತರು ಕೂಡಲೇ ಅವರನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರು ಪರಿಶೀಲನೆ ಮಾಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋದಾಗ, ವೈದ್ಯರು ಪರಿಶೀಲಿಸಿದ್ದು, ನಂತರ ವಾಪಾಸು ಬರುವಾಗ ದಾರಿಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತರ ತಾಯಿ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
