Home » Government Employee: ದಿನಗೂಲಿ ನೌಕರರ ವೇತನದಲ್ಲಿ ಭಾರೀ ಹೆಚ್ಚಳ ?! ಇಲ್ಲಿದೆ ನೋಡಿ ಸಂಪೂರ್ಣ ವಿವರ

Government Employee: ದಿನಗೂಲಿ ನೌಕರರ ವೇತನದಲ್ಲಿ ಭಾರೀ ಹೆಚ್ಚಳ ?! ಇಲ್ಲಿದೆ ನೋಡಿ ಸಂಪೂರ್ಣ ವಿವರ

1 comment
Government Employee

Government employee: ಕರ್ನಾಟಕದ ಸರ್ಕಾರಿ ನೌಕರರು(Government Employee)ಈ ವರ್ಷದ ಮಾರ್ಚ್‌ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಿದ್ದು ನೆನಪಿರಬಹುದು.ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರು ಸರ್ಕಾರಿ ನೌಕರರ ವೇತನವನ್ನು ಶೇ 17ರಷ್ಟು ಏರಿಕೆ ಮಾಡಿದ್ದರು.ಆದರೆ ದಿನಗೂಲಿ ನೌಕರರಿಗೆ ಇದು ಅನ್ವಯವಾಗುವುದೇ ಎಂಬುದರ ಕುರಿತಂತೆ ಸ್ಪಷ್ಟನೆ ಕೇಳಲಾಗಿತ್ತು. ಸದ್ಯ, ಇದಕ್ಕೆ ಉತ್ತರ ಲಭ್ಯವಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶದ ಅನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-2) ಸರ್ಕಾರಿ ನೌಕರರ ವೇತನ ಶೇ 17ರಷ್ಟು ಹೆಚ್ಚಳದ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗಿತ್ತು. 2023ರ ಏಪ್ರಿಲ್‌ 1ರಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಕೂಡ ತಿಳಿಸಲಾಗಿತ್ತು. ಆ ಸಂದರ್ಭ ಕರ್ನಾಟಕ ಬಿಜೆಪಿ ಸರ್ಕಾರ ಶೇ 17ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು.

ಮಧ್ಯಂತರ ಪರಿಹಾರ ಸ್ಪಷ್ಟನೆಯ ಆದೇಶದಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿ ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಅಧಿಸೂಚಿತಗೊಂಡು ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ 1 ನೇ ಏಪ್ರಿಲ್ 2023 ರಿಂದ ಜಾರಿಗೆ ಬರುವಂತೆ ಮೂಲ ವೇತನಕ್ಕೆ ಶೇಕಡ 17 ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡುವ ಕುರಿತು ಉಲ್ಲೇಖಿಸಲಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಮಧ್ಯಂತರ ಪರಿಹಾರವು ರಾಜ್ಯ ಸರ್ಕಾರಿ ನೌಕರರ ಮೂಲ ವೇತನದ ಭಾಗವಾಗದೆ ಇರುವ ಹಿನ್ನೆಲೆ, ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರ ಕಲಂ 4 ರನ್ವಯ ಮಧ್ಯಂತರ ಪರಿಹಾರವನ್ನು ಮೂಲ ವೇತನವೆಂದು ಪರಿಗಣಿಸಿ, ದಿನಗೂಲಿ ನೌಕರರಿಗೆ ಶೇಕಡ 17 ರಷ್ಟು ಮಧಂತರ ಪರಿಹಾರವನ್ನು ಅವಕಾಶವಿರುವುದಿಲ್ಲ ಎಂಬ ಅಭಿಪ್ರಾಯವನ್ನು ನೀಡಿರುತ್ತದೆ ಎಂದು ಸ್ಪಷ್ಟನೆಯಲ್ಲಿ ತಿಳಿಸಿದೆ.

ಇದನ್ನು ಓದಿ: Israel-Hamas War: ಯಪ್ಪಾ.. ಗರ್ಭಿಣಿಯ ಹೊಟ್ಟೆ ಸೀಳಿ `ಬ್ರೂಣ’ವನ್ನೂ ಹೊಸಕಿ ಹಾಕಿದ ಹಮಾಸ್ ರಾಕ್ಷಸರು : ಕರಾಳತೆಯನ್ನು ಬಿಚ್ಚಿಟ್ಟ ಸ್ವಯಂ ಸೇವಕ!

You may also like

Leave a Comment