Home » JioBharat B1: ಜಿಯೋ ಗ್ರಾಹಕರಿಗೆ ಸಂತಸದ ಸುದ್ದಿ- ಬರ್ತಿದೆ ಕಡಿಮೆ ದರದ, ಹಲವು ಫೀಚರ್ ಗಳ ಹೊಸ ಮೊಬೈಲ್!!

JioBharat B1: ಜಿಯೋ ಗ್ರಾಹಕರಿಗೆ ಸಂತಸದ ಸುದ್ದಿ- ಬರ್ತಿದೆ ಕಡಿಮೆ ದರದ, ಹಲವು ಫೀಚರ್ ಗಳ ಹೊಸ ಮೊಬೈಲ್!!

1 comment
JioBharat B1

JioBharat B1: ಮೊಬೈಲ್(Mobile) ಎಂಬ ಮಾಯಾವಿ ಬಹುತೇಕ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿವೆ. ಅದರಲ್ಲಿಯೂ ಹೊಸ ಹೊಸ ವೈಶಿಷ್ಟ್ಯತೆ ಮೂಲಕ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದರ ನಡುವೆ, ರಿಲಯನ್ಸ್ ಜಿಯೋ ಸಂಸ್ಥೆಯು ತನ್ನ ಜಿಯೋಭಾರತ್ (JioBharat) ಸರಣಿಯ ಜಿಯೋ ಭಾರತ್ B1 ( JioBharat B1 ) ಹೆಸರಿನ ಹೊಸ ಫೀಚರ್‌ ಫೋನ್ ಅನ್ನು ಬಿಡುಗಡೆ ಮಾಡಿದ್ದು, ಎಲ್ಲರ ಮನ ಗೆಲ್ಲುವ ಪ್ರಯತ್ನಕ್ಕೆ ಕೈ ಹಾಕಿದೆ.

ರಿಲಯನ್ಸ್ ಜಿಯೋ (Relaince Jio)ಕಂಪನಿಯು ಟೆಲಿಕಾಂ ಸೇವೆಗಳ ಜೊತೆಗೆ ಮೊಬೈಲ್‌ ಮಾರುಕಟ್ಟೆಯಲ್ಲಿ ಅಗ್ಗದ ಫೋನ್‌ಗಳನ್ನು ಕೂಡ ಪರಿಚಯಿಸುತ್ತಿದೆ. ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಕೂಡ ಫೋನ್ ಅನ್ನು ಜಿಯೋ ಭಾರತ್ B1 ಸರಣಿ ಎಂದು ಲಿಸ್ಟ್‌ ಮಾಡಲಾಗಿದೆ.ಈ ಹೊಸ ಫೋನ್ ಜಿಯೋ ಭಾರತ್ V2 ಮತ್ತು K1 ಕಾರ್ಬನ್ ಮಾದರಿಗಳ ಸ್ವಲ್ಪ ಅಪ್‌ಗ್ರೇಡ್‌ ಆವೃತ್ತಿಯ ರೀತಿಯಲ್ಲಿ ಕಂಡುಬರುತ್ತಿದೆ.

ಜಿಯೋ ಭಾರತ್ B1 ಫೀಚರ್ಸ್ ಹೀಗಿವೆ
ಜಿಯೋ ಭಾರತ್ B1 ಫೋನ್‌ 2000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇದು 2.4 ಇಂಚಿನ ಸ್ಕ್ರೀನ್ ಅನ್ನು ಒಳಗೊಂಡಿದೆ. ಕಂಪನಿಯ ವೆಬ್‌ಸೈಟ್‌ನ ಮಾಹಿತಿ ಅನುಸಾರ, ಜಿಯೋ ಪ್ರಿ ಇನ್‌ಸ್ಟಾಲ್‌ ಅಪ್ಲಿಕೇಶನ್‌ಗಳನ್ನು ಫೋನ್‌ನೊಂದಿಗೆ ಸೇರಿಸಲಾಗಿದೆ. ಇದರ ಜೊತೆಗೆ ಜಿಯೋ ಹೊರತುಪಡಿಸಿ ಇತರ ಸಿಮ್‌ (SIM) ಕಾರ್ಡ್‌ಗಳನ್ನು ಈ ಜಿಯೋ ಭಾರತ್ ಫೋನ್‌ಗಳಲ್ಲಿ ಬಳಸಲಾಗುವುದಿಲ್ಲ. ಪ್ರಸ್ತುತ, ಜಿಯೋ ಭಾರತ್ B1 ಫೋನ್ ಕಪ್ಪು ಬಣ್ಣದಲ್ಲಿ ಮಾತ್ರ ದೊರೆಯಲಿದೆ. ಜಿಯೋ ಭಾರತ್ B1 ಸರಣಿಯು 4G ಫೋನ್ ಆಗಿದ್ದು, ಹಿಂದಿನ ಮಾದರಿಗಳಿಗಿಂತ ಸ್ವಲ್ಪ ದೊಡ್ಡ ಸ್ಕ್ರೀನ್‌ ಮತ್ತು ಉತ್ತಮ ಬ್ಯಾಟರಿಯನ್ನು ಒಳಗೊಂಡಿದೆ.

ಈ ಫೋನ್‌ನ ಬಳಕೆದಾರರು ಸಿನಿಮಾ, ವೀಡಿಯೊಗಳು ಮತ್ತು ಕ್ರೀಡಾ ಮುಖ್ಯಾಂಶಗಳನ್ನೂ ಪಡೆಯಬಹುದು ಎಂದು ಜಿಯೋ ಸಂಸ್ಥೆ ಹೇಳಿದ್ದು, ಇದರ ಜೊತೆಗೆ ಜಿಯೋ ಭಾರತ್ ಸರಣಿಯು 23 ಭಾಷೆಗಳನ್ನು ಸಪೋರ್ಟ್‌ ಮಾಡುತ್ತದೆ ಎಂದು ಹೇಳಿಕೊಂಡಿದೆ. ಜಿಯೋ ಸಂಸ್ಥೆಯ ಈ ನೂತನ ಜಿಯೋ ಭಾರತ್ B1 ಫೀಚರ್ ಫೋನ್‌ 1,299ರೂ. ಪ್ರೈಸ್‌ಟ್ಯಾಗ್‌ ಅನ್ನು ಹೊಂದಿದ್ದು, ಈ ಫೋನ್‌ ಬ್ಲ್ಯಾಕ್‌ ಕಲರ್‌ ವೇರಿಯಂಟ್‌ನಲ್ಲಿ ಖರೀದಿ ಮಾಡಬಹುದು. ನೂತನ ಜಿಯೋ ಭಾರತ್ B1 ಫೋನ್ ಈ ಫೋನ್‌ನಲ್ಲಿ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಆದರೆ ಕ್ಯಾಮೆರಾ ಮೆಗಾಪಿಕ್ಸೆಲ್‌ಗಳ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಜಿಯೋ ಪರಿಚಯಿಸಿರುವ ಮತ್ತೊಂದು ಬಜೆಟ್ ಫೋನ್ ಇದಾಗಿದ್ದು, ಬಳಕೆದಾರರನ್ನು ಎಷ್ಟರ ಮಟ್ಟಿಗೆ ಸೆಳೆಯಲಿದೆ ಎಂದು ಕಾದು ನೋಡಬೇಕಾಗಿದೆ.

 

ಇದನ್ನು ಓದಿ: ಮೂತ್ರ ನಿರಂತರವಾಗಿ ದುರ್ವಾಸನೆ ಬೀರುತ್ತಿದೆಯೇ ?! ಹಾಗಿದ್ರೆ ಈ ಆಹಾರಗಳಿಗೆ ಕೊಡಿ ಗೇಟ್ ಪಾಸ್

You may also like

Leave a Comment